ವಾಲ್ಮೀಕಿ ಮಹಾರಥೋತ್ಸವ ಸಂಪನ್ನ

| Published : Feb 10 2025, 01:50 AM IST

ಸಾರಾಂಶ

ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಪೀಠದಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಾತ್ರೆ-2025ರ ಅಂಗವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಮಹಾರಥೋತ್ಸವಕ್ಕೆ ನಾಡಿನ ಪರಮಪೂಜ್ಯ ಶ್ರೀಗಳ ಸಮ್ಮುಖ ಸಂಪನ್ನಗೊಂಡಿತು.

- ರಾಜನಹಳ್ಳಿಯಲ್ಲಿ ವಿವಿಧ ಮಠಾಧೀಶರು, ಗಣ್ಯರು, ಭಕ್ತರು ಭಾಗಿ- - - ಕನ್ನಡಪ್ರಭ ವಾರ್ತೆ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಪೀಠದಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಾತ್ರೆ-2025ರ ಅಂಗವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಮಹಾರಥೋತ್ಸವಕ್ಕೆ ನಾಡಿನ ಪರಮಪೂಜ್ಯ ಶ್ರೀಗಳ ಸಮ್ಮುಖ ಸಂಪನ್ನಗೊಂಡಿತು.

ಡಾ. ವಾಲ್ಮೀಕಿ ಪ್ರಸನ್ನಾನಂದ ಶ್ರೀ, ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಪಟ್ಟಸಾಲಿ ನೇಕಾರ ಗುರುಪೀಠದ ಗುರುಸಿದ್ದ ಪಟ್ಟಾಧಾರ್ಯ ಶ್ರೀ, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಶ್ರೀ, ವನಶ್ರೀ ಸಂಸ್ಥಾನದ ಡಾ. ಬಸವಕುಮಾರ್ ಶ್ರೀ, ಮರುಳ ಶಂಕರ ದೇವರ ಗುರುಪೀಠದ ಸಿದ್ಧ ಬಸವ ಕಬೀರ ಶ್ರೀ, ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಶ್ರೀ, ಹೊಸಮಠದ ಬಸವಶಾಂತಲಿಂಗ ಶ್ರೀ, ಪುಟ್ಟಯ್ಯ ಮಠದ ಗುರುಬಸವ ಶ್ರೀ, ಮೇದಾರ ಗುರುಪೀಠದ ಬಸವಪ್ರಭು ಇಮ್ಮಡಿ ಕೇತೇಶ್ವರ ಶ್ರೀ, ಗವಿಮಠದ ಮಲ್ಲಿಕಾರ್ಜುನ ಶ್ರೀ, ಅಣ್ಣಪ್ಪ ಮಠದ ಹಡಪದ ಅಪ್ಪಣ್ಣ ಶ್ರೀ ಸೇರಿದಂತೆ ನಾಡಿನ ಹಲವು ಶ್ರೀಗಳು, ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಹಾಗೂ ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಗುರುಪೀಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ಸಂಚಾಲಕ ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಗ್ರಾಪಂ ಅಧ್ಯಕ್ಷರಾದ ವಿ.ಎಂ. ಹೇಮಾವತಿ, ಸದಸ್ಯರು ಹಾಗೂ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ, ವಾಲ್ಮೀಕಿ ರಥೋತ್ಸವಕ್ಕೆ ಸಾಕ್ಷಿಯಾದರು.

- - - -09ಎಚ್‍ಆರ್‍ಆರ್01: