ಸಾರಾಂಶ
Valmiki, Ramayana Ajarama: Chinnappa
ಕೊಡೇಕಲ್: ವಾಲ್ಮೀಕಿ ಮಹರ್ಷಿ ಹಾಗೂ ರಾಮಾಯಣ ಮಹಾಕಾವ್ಯಗಳು ಜನಮಾನಸದಲ್ಲಿ ಜೀವಂತ ಉಳಿಯುವಂತದ್ದು ಎಂದು ಚಿನ್ನಪ್ಪ ಡೊಳ್ಳಿ ಹೇಳಿದರು. ನಾರಾಯಣಪುರ ಗ್ರಾಮದಲ್ಲಿ ಜರುಗಿದ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮಾಯಣ ಹಿಂದೂಗಳ ಪವಿತ್ರ ಗ್ರಂಥವನ್ನು ಲೋಕಕ್ಕೆ ಕೊಡುಗೆ ನೀಡಿದ ಮಹಾನ್ ಕವಿ ವಾಲ್ಮೀಕಿ, ಈ ಕಾವ್ಯದ ಶಕ್ತಿ ಎಂದು ಹೇಳಿದರು. ವಾಲ್ಮೀಕಿ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗಳಿಗೆ ನಿಜ ಅರ್ಥ ಬರುತ್ತವೆ ಎಂದರು.ಮಹರ್ಷಿ ವಾಲ್ಮೀಕಿ ಮೂರ್ತಿಗೆ ಪುರೋಹಿತರಾದ ಚಿಂದಬರಭಟ್ಟ ಜೋಶಿ ವಿಶೇಷ ಪೂಜೆ ನೆರವೇರಿಸಿದರು.
ತಿಪ್ಪಣ್ಣ ರೋಡಲಬಂಡಿ, ಪಿಎಸ್‌ಐ ರಾಜಶೇಖರ ರಾಠೋಡ್, ಹಣಮೇಶ ಕುಲಕರ್ಣಿ, ಹನುಮಗೌಡ ಪೊಲೀಸ್ ಪಾಟೀಲ್, ಚಂದಪ್ಪ ದೇಸಾಯಿ, ಬಸವರಾಜ ದೇಸಾಯಿ, ಅಂಬರೀಶ ಕೋಳೂರ, ಆಂಜನೇಯ ದೋರಿ, ಶಿವಪ್ಪ ಕಬಡರ, ಆಂಜನೇಯ ಗೋಳಸಂಗಿ, ಮಲ್ಲಣ್ಣ ಶೃಂಗೇರಿ, ವೈ.ಸಿ. ಗೌಡ್ರು, ರಮೇಶ ಗೌಡ್ರು, ಚಿದಂಬರ ದೇಸಾಯಿ, ಯಂಕಪ್ಪ ರೋಡಲಬಂಡಿ, ಸುರೇಶ ನಾಯಕ, ನಾಗಪ್ಪ ಜಂಜಿಗಡ್ಡಿ, ಲಕ್ಷ್ಮಣ ಜಂಜಿಗಡ್ಡಿ, ಜೆಟ್ಟೆಪ್ಪ ಗೊಳಸಂಗಿ, ಸೇರಿದಂತೆ ವಾಲ್ಮೀಕಿ ಸಂಘಟನೆಯ ಪದಾಧಿಕಾರಿಗಳು ಇದ್ದರು. ರಮೇಶ ಕೋಳೂರ ನಿರೂಪಿಸಿ, ವಂದಿಸಿದರು.----
ಫೋಟೊ: 18ವೈಡಿಆರ್8: ಕೊಡೇಕಲ್ ನಾರಾಯಣಪುರ ಗ್ರಾಮದಲ್ಲಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು.