ಸಾರಾಂಶ
ವಾಲ್ಮಿಕಿ ಸಮಾಜವನ್ನು ನಿಂದನೆ ಮಾಡಿದ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಪಟ್ಟಣದ ಆರಕ್ಷಕ ಠಾಣೆಗೆ ಮನವಿ ಸಲ್ಲಿಸಲಾಯಿತು. ತಾಲೂಕು ಉಪಾಧ್ಯಕ್ಷ ಕುಮಾರ ನಾಯಕ ಮಾತನಾಡಿ, ರಮೇಶ್ ಕತ್ತಿ ಅವರ ಹೇಳಿಕೆ ನಮ್ಮ ಸಮಾಜದ ಗೌರವಕ್ಕೆ ಹಾನಿ ಉಂಟುಮಾಡಿದೆ. ಸರ್ಕಾರವು ತಕ್ಷಣವೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು. ಸರ್ಕಾರ ನಿರ್ಲಕ್ಷ್ಯ ತೋರಿದರೆ ರಾಜ್ಯವ್ಯಾಪಿ ವಾಲ್ಮೀಕಿ ಸಮಾಜದವರು ಬೃಹತ್ ಮಟ್ಟದ ಹೋರಾಟ ನಡೆಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಬೇಲೂರು
ವಾಲ್ಮಿಕಿ ಸಮಾಜವನ್ನು ನಿಂದನೆ ಮಾಡಿದ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಪಟ್ಟಣದ ಆರಕ್ಷಕ ಠಾಣೆಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಮಧು ನಾಯಕ, ಮಾಜಿ ಸಂಸದ ರಮೇಶ್ ಕತ್ತಿ ನಮ್ಮ ಸಮಾಜದ ವಿರುದ್ಧ ಅತ್ಯಂತ ಕೀಳು ಮಟ್ಟದ ನಿಂದನಾತ್ಮಕ ಶಬ್ಧಗಳನ್ನು ಬಳಸಿದ್ದಾರೆ. ಸಮಾಜದ ಬಗ್ಗೆ ಮಾತನಾಡುವ ಮೊದಲು ಅದರ ಇತಿಹಾಸ ಮತ್ತು ಸಂಸ್ಕೃತಿಯನ್ನು ಅರಿತು ಮಾತನಾಡಬೇಕು. ವಾಲ್ಮೀಕಿ ಸಮಾಜವು ದಶಕಗಳಿಂದಲೂ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ, ಗೌರವಾನ್ವಿತ ಸಮುದಾಯವಾಗಿದೆ. ಇಂತಹ ಕೀಳು ಹೇಳಿಕೆಗಳು ಸಮಾಜದ ಭಾವನೆಗೆ ಧಕ್ಕೆ ಉಂಟುಮಾಡುತ್ತವೆ. ಕೂಡಲೇ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು ಮತ್ತು ತಕ್ಷಣ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.ತಾಲೂಕು ಉಪಾಧ್ಯಕ್ಷ ಕುಮಾರ ನಾಯಕ ಮಾತನಾಡಿ, ರಮೇಶ್ ಕತ್ತಿ ಅವರ ಹೇಳಿಕೆ ನಮ್ಮ ಸಮಾಜದ ಗೌರವಕ್ಕೆ ಹಾನಿ ಉಂಟುಮಾಡಿದೆ. ಸರ್ಕಾರವು ತಕ್ಷಣವೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು. ಸರ್ಕಾರ ನಿರ್ಲಕ್ಷ್ಯ ತೋರಿದರೆ ರಾಜ್ಯವ್ಯಾಪಿ ವಾಲ್ಮೀಕಿ ಸಮಾಜದವರು ಬೃಹತ್ ಮಟ್ಟದ ಹೋರಾಟ ನಡೆಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ಸಂಘದ ಮುಖಂಡರಾದ ಲಕ್ಷ್ಮಣ್, ಶಿವಪ್ಪ ನಾಯಕ, ಪ್ರಕಾಶ್ ನಾಗೇಶ್, ಪುರುಷೋತ್ತಮ್ ಹಾಗೂ ವಾಲ್ಮೀಕಿ ಸಮಾಜದ ಸದಸ್ಯರು ಹಾಜರಿದ್ದರು.