ಸಾರಾಂಶ
ಹಗರಿಬೊಮ್ಮನಹಳ್ಳಿ: ವಾಲ್ಮೀಕಿ ಸಮುದಾಯ ಅತ್ಯಂತ ಕ್ರಿಯಾಶೀಲವಾಗಿದ್ದು, ಸಮಾಜಮುಖಿ ಕೆಲಸದಲ್ಲಿ ನಿರಂತರವಾಗಿ ತೊಡಗಿದೆ ಎಂದು ಶಾಸಕ ಕೆ.ನೇಮರಾಜ ನಾಯ್ಕ ಹೇಳಿದರು.
ಪಟ್ಟಣದಲ್ಲಿ ವಾಲ್ಮೀಕಿ ಭವನದಲ್ಲಿ ನಡೆದ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಎಲ್ಲ ಸಮಾಜಗಳು ಇತರೆ ಸಮುದಾಗಳೊಂದಿಗೆ ಅನ್ಯೋನ್ಯ ಸಂಬಂದ ಬೆಸೆಯಬೇಕು. ಮಕ್ಕಳಿಗೆ ಶಿಕ್ಷಣ ಸಂಸ್ಕಾರವನ್ನು ಕಲಿಸಬೇಕು. ವಾಲ್ಮೀಕಿ ಸಮುದಾಯದ ಅಭಿವೃಧ್ದಿಗೆ ಶ್ರಮಿಸಲಾಗುವುದು ಎಂದರು.ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಟಿ.ವೆಂಕೋಬಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಪ.ಪಂಗಡದ ಕಲ್ಯಾಣ ಕಚೇರಿಯನ್ನು ಪ್ರತ್ಯೇಕವಾಗಿ ಸ್ಥಾಪಿಸಬೇಕು. ವಾಲ್ಮೀಕಿ ಭವನ ಪೂರ್ಣಗೊಳಿಸಲು ಕೂಡಲೇ ಅನುದಾನ ಒದಗಿಸಬೇಕು. ಸಮಾಜದ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸುವಂತಾಗಬೇಕು. ಜಯಂತಿ ಪ್ರಯುಕ್ತ ವಾಲ್ಮೀಕಿ ಮಹರ್ಷಿಯ ಭಾವಚಿತ್ರ ಮೆರವಣಿಗೆಯಲ್ಲಿ, ವಿವಿಧ ಕಲಾಮೇಳದವರಿಗೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸಲಾಗಿದೆ ಎಂದರು.
ಮೆರವಣಿಗೆ:ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಬಸವೇಶ್ವರ ಬಜಾರದಿಂದ ವಾಲ್ಮೀಕಿ ಭವನದವರೆಗೆ ವಿವಿಧ ಗ್ರಾಮಗಳ ವಾಲ್ಮೀಕಿ ಸಮಾಜದ ಪದಾಧಿಕಾರಿಗಳು ಟ್ರ್ಯಾಕ್ಟರ್‌ಗಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಸಿದರು.
ನಟ ಸುದೀಪ್ ಅಭಿಮಾನಿಗಳು ಜಯಂತ್ಯುತ್ಸವದಲ್ಲಿ ಕಿಚ್ಚ, ಪೈಲ್ವಾನ್ ಚಿತ್ರದ ಬೃಹತ್ ಭಾವುಟಗಳೊಂದಿಗೆ ಗಮನಸೆಳೆದರು. ಹೊಸಪೇಟೆ ಮತ್ತು ಕಂಪ್ಲಿ ಹಗಲುವೇಷಧಾರಿಗಳು ರಾಮ, ಲಕ್ಷ್ಮಣ ಮತ್ತು ವೀರಾಂಜನೇಯನ ವೇಷದಲ್ಲಿ ಗಮನಸೆಳೆದರು.ಉಪನ್ಯಾಸಕ ಮಂಜುನಾಥ ಬೇವಿನಕಟ್ಟಿ ಉಪನ್ಯಾಸ ನೀಡಿದರು. ತಹಸೀಲ್ದಾರ್ ಆರ್.ಕವಿತಾ, ತಾ.ಪಂ.ಇಒ ಡಾ.ಜಿ.ಪರಮೇಶ್ವರ, ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಆನಂದ ಡೊಳ್ಳಿನ, ಜಿ.ಪಂ.ಮಾಜಿ ಸದಸ್ಯ ರೋಗಾಣಿ ಹುಲುಗಪ್ಪ, ತಾ.ಪಂ.ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ, ಪುರಸಭೆ ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರಪ್ಪ, ಸದಸ್ಯ ಜೋಗಿ ಹನುಮಂತಪ್ಪ, ಮುಖಂಡರಾದ ಮಗಿಮಾವಿನಹಳ್ಳಿ ಹುಡಚಪ್ಪ, ಡಿಶ್ ಮಂಜುನಾಥ, ಸೆರೆಗಾರ ಹುಚ್ಚಪ್ಪ, ಬೆಣ್ಣಿಕಲ್ಲು ಹನುಮಂತಪ್ಪ, ಚಿಗರಿ ಮಾರುತಿ, ರೋಗಾಣಿ ಪ್ರಕಾಶ್, ಚಂದ್ರಶೇಖರ, ಕೊಳ್ಳಿ ಪ್ರಕಾಶ್, ಹುಲ್ಮನಿ ಮಂಜುನಾಥ, ಕೊಟ್ರೇಶ, ಪಾಂಡುರಂಗಪ್ಪ ಇತರರಿದ್ದರು.
ಹಗರಿಬೊಮ್ಮನಹಳ್ಳಿಯಲ್ಲಿ ವಾಲ್ಮೀಕಿ ಜಯಂತ್ಯುತ್ಸವದ ಪ್ರಯುಕ್ತ ನಡೆದ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.