ರಾಮಾಯಣ ಶ್ರೇಷ್ಟ ಕಾವ್ಯವಾಗಲು ವಾಲ್ಮೀಕಿ ಕೊಡುಗೆ ಅಪಾರ-ಎಂ.ಬಿ. ಅಂಬಿಗೇರ

| Published : Oct 20 2024, 01:55 AM IST

ರಾಮಾಯಣ ಶ್ರೇಷ್ಟ ಕಾವ್ಯವಾಗಲು ವಾಲ್ಮೀಕಿ ಕೊಡುಗೆ ಅಪಾರ-ಎಂ.ಬಿ. ಅಂಬಿಗೇರ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಾಯಣ ಶ್ರೇಷ್ಠ ಕಾವ್ಯವಾಗಲು ವಾಲ್ಮೀಕಿಯವರ ಕೊಡುಗೆ ಅಪಾರ ಅಲ್ಲದೇ ಆದರ್ಶ ವ್ಯಕಿತ್ವವನ್ನು ಹೊಂದಿದ ವಾಲ್ಮೀಕಿಯವರ ಸಂದೇಶಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.

ಶಿಗ್ಗಾಂವಿ: ರಾಮಾಯಣ ಶ್ರೇಷ್ಠ ಕಾವ್ಯವಾಗಲು ವಾಲ್ಮೀಕಿಯವರ ಕೊಡುಗೆ ಅಪಾರ ಅಲ್ಲದೇ ಆದರ್ಶ ವ್ಯಕಿತ್ವವನ್ನು ಹೊಂದಿದ ವಾಲ್ಮೀಕಿಯವರ ಸಂದೇಶಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.

ಪಟ್ಟಣದ ಅಂಬೇಡ್ಕರ್ ಆಡಳಿತ ಸಂಕೀರ್ಣ ಭವನದ ಕಾರ್ಯಾಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕಿ ನಿರ್ದೇಶಕಿ ಸರಸ್ವತಿ ಗಜಕೋಶ, ಪ್ರಕಾಶ ಔಂಧಕರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಅಂಬೇಡ್ಕರ್ ಮೂರ್ತಿಗೆ ಅವರು ಮಾಲಾರ್ಪಣೆ ಮಾಡಿ ಮಾತನಾಡಿದರು.

ಒಳ್ಳೆಯ ಕೆಲಸ ಬೇಗನೆ ಮಾಡಬೇಕು, ಕೆಟ್ಟ ಕೆಲಸಕ್ಕೆ ಸಮಯ ತೆಗೆದುಕೊಳ್ಳಬೇಕು. ವಾಲ್ಮೀಕಿಯವರ ಕೊನೆಯ ಆಸೆ ಸಮುದ್ರ ನೀರನ್ನು ಸಿಹಿ ಮಾಡಬೇಕು ಎಂದು ಸಂಕಲ್ಪ ಮಾಡಿದ್ದೆ ಆಗಲಿಲ್ಲ ಎಂದು ಪರಿತಪಿಸಿದ್ದಾರೆ ಎಂದರು.

ದಿಶಾ ಇಂಟರ್‌ ನ್ಯಾಶನಲ್ ಶಾಲೆಯ ವಿದ್ಯಾರ್ಥಿಗಳು ಛದ್ಮವೇಷ ರೂಪದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಗುರುನಗೌಡ ಪಾಟೀಲ, ವಾಲ್ಮೀಕಿ ಸಮಾಜದ ಮುಖಂಡರಾದ ಯಲ್ಲಪ್ಪ ತಳವಾರ, ಗದಿಗೆಪ್ಪ ಓಲೇಕಾರ, ಮಹಾದೇವಪ್ಪ ತಳವಾರ, ಬಸವರಾಜ ವಾಲ್ಮೀಕಿ, ಶಿವಾನಂದ ಓಲೇಕಾರ, ಕರೆಯಪ್ಪ ಕಟ್ಟಿಮನಿ, ಅಶೋಕ ಕಾಳೆ, ಫಕೀರಪ್ಪ ಕುಂದೂರ, ಮಹೇಶ ತಳವಾರ, ಆನಂದ ಕೆಳಗಿನಮನಿ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಗಣ್ಯಮಾನ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.