ಮೌಲ್ಯಯುತ ಕವನಗಳು ಹೃದಯ ತಟ್ಟುತ್ತವೆ

| Published : Aug 11 2024, 01:33 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಮೌಲ್ಯಯುತ ಕವನಗಳು ಜನಸಾಮಾನ್ಯರ ಹೃದಯ ತಟ್ಟುತ್ತವೆ ಎಂದು ಹಿರಿಯ ಸಾಹಿತಿ ಪ್ರೊ.ಬಿ.ಎಂ.ಹಿರೇಮಠ ಹೇಳಿದರು. ಮುದ್ದೇಬಿಹಾಳ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾಯಾ೯ಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮುದ್ದೇಬಿಹಾಳ ಹಾಗು ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಮುದ್ದೇಬಿಹಾಳ ಆಶ್ರಯದಲ್ಲಿ ಜರುಗಿದ ಶ್ರಾವಣ ಕಾವ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡಕ್ಕಾಗಿ ದುಡಿದವರನ್ನು ಸ್ಮರಿಸುವ ಕಾಯ೯ಕ್ರಮ ಶ್ಲಾಘನೀಯ ಎಂದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮೌಲ್ಯಯುತ ಕವನಗಳು ಜನಸಾಮಾನ್ಯರ ಹೃದಯ ತಟ್ಟುತ್ತವೆ ಎಂದು ಹಿರಿಯ ಸಾಹಿತಿ ಪ್ರೊ.ಬಿ.ಎಂ.ಹಿರೇಮಠ ಹೇಳಿದರು.ಮುದ್ದೇಬಿಹಾಳ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾಯಾ೯ಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮುದ್ದೇಬಿಹಾಳ ಹಾಗು ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಮುದ್ದೇಬಿಹಾಳ ಆಶ್ರಯದಲ್ಲಿ ಜರುಗಿದ ಶ್ರಾವಣ ಕಾವ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡಕ್ಕಾಗಿ ದುಡಿದವರನ್ನು ಸ್ಮರಿಸುವ ಕಾಯ೯ಕ್ರಮ ಶ್ಲಾಘನೀಯ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕನ್ನಡ ಸಾಹಿತ್ಯ ಗ್ರಾಮ ಮಟ್ಟದಲ್ಲಿಯು ಸೇವೆ ಮಾಡುವ ಹಂಬಲ ನನ್ನದು. ಜಿಲ್ಲೆಯಲ್ಲಿ ಎರಡು ನೂರು ಕವಿಗಳನ್ನು ಗುರುತಿಸಿದ್ದೇವೆ. ಅದರಲ್ಲಿ ಪ್ರಾಥಮಿಕ ಶಿಕ್ಷಕರೇ ಹೆಚ್ಚಿದ್ದು, ಅವರೆಲ್ಲರಿಗೂ ಕಸಾಪ ವೇದಿಕೆ ನೀಡಿ ಗೌರವಿಸುವ ಪ್ರಯತ್ನ ಮಾಡಿದ ಸಂತೃಪ್ತಿಯಿದೆ ಎಂದರು. ಪ್ರಾಸ್ತಾವಿಕವಾಗಿ ವೈ.ಎಚ್.ವಿಜಯಕರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಖೇಮು ರಾಠೋಡ ಮಾತನಾಡಿ ಕಲಿಕೆ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಈ ಕಾವ್ಯ ಗೋಷ್ಠಿ ಸ್ಪೂರ್ತಿ ನೀಡುತ್ತದೆ. ವಿದ್ಯಾರ್ಥಿಗಳಿಗೆ ಕವನ ಬರೆಯಲು ಪ್ರೋತ್ಸಾಹ ನೀಡುತ್ತದೆ ಎಂದರು. ತಾಲೂಕ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು. ಸಾಹಿತಿ ಬುರಾಣ ರುದ್ರವಾಡಿ, ಗಣ್ಯರಾದ ಸುರೇಶಗೌಡ ಪಾಟೀಲ, ರಾಜೇಸಾಬ ಶಿವನಗುತ್ತಿ, ಚೈತನ್ಯ ಮುದ್ದೇಬಿಹಾಳ, ಸುಮಲತಾ ಗಡಿಯಪ್ಪನವರ, ಅಂಬಿಕಾ ಕರಕಪ್ಪಗೋಳ, ಶಾಂತಲಾ ಪಾಟೀಲ, ಮಡಿವಾಳಮ್ಮ ನಾಡಗೌಡ, ಸಿದ್ದನಗೌಡ ಕಾಶಿನಕುಂಟೆ, ವಿಶ್ವನಾಥ ಕುಲಕರ್ಣಿ, ಶಿವಪುತ್ರ ಅಜಮನಿ, ಸಾವಿತ್ರಿ ತಳವಾರ, ಜಾಹ್ನವಿ ದೇಶಪಾಂಡೆ, ಶೈಲಾ ಗೊಂಗಡಿ, ಬಸಮ್ಮ ಗದ್ಡಿ,

ನೇಹಾ ಬಾವಾಖಾನ ಮತ್ತು ಇತರರು ಪ್ರಾಥಿ೯ಸಿದರು. ಶಬಾನಾ ಮುಲ್ಲಾ ಸ್ವಾಗತಿಸಿದರು.ಹಣಮಂತಿ ಕಟ್ಟಿಮನಿ ಪರಿಚಯಿಸಿ ಗೌರವಿಸದಳು. ದಾನೇಶ್ವರಿ ಪಡಶೆಟ್ಟಿ ನಿರೂಪಿಸಿದರು. ಸಿಮ್ರನ ಚಪ್ಪರಬಂದ ವಂದಿಸಿದರು. ಜಯಮಾಲಾ ಕೋಟಿ, ವಿಜಯಲಕ್ಷ್ಮೀ ಡವಳಗಿ, ಸುರೇಖಾ ಮುರಾಳ, ರಮಜಾನಬಿ ವಾಲಿಕಾರ, ಯಾಸ್ಮೀನ ವಾಲಿಕಾರ, ವಿನೋದ ಸೀತಿಮನಿ, ಮಹಾದೇವಪ್ಪ ಕುಂಬಾರ, ಬಸವರಾಜ ಮನಗೂಳಿ, ಜಬ್ಬಾರ ಅಲಿ ಕಾವರೆ, ಅಬ್ದುಲ ರಹಿಮ ಬಾಗವಾನ, ರವಿ ಹಂಗರಗಿ, ಸಲೀಮ ಬೋಜಾರೆ, ವೆಂಕಟೇಶ ರಾಠೋಡ, ಸಂಜೀವ ರಾಠೋಡ, ವಿಕ್ರಮ, ಮುದ್ದೇಬಿಹಾಳ, ಮಾಳಪ್ಪ ಪೂಜಾರಿ, ಅಂಜಲಿ ರಾಠೋಡ, ಮಾಧವ ಇಂಗಳಗೇರಿ, ವಾಣಿಶ್ರೀ ಮಂಗಳೂರ, ಪ್ರಶಾಂತ ಬಿರಾದಾರ, ಎ.ಎ.ನದಾಫ್, ನಿಮ೯ಲಾ ರಾಠೋಡ, ಸೂರಜ ತಳವಾರ,ವಿನೋದ ಮೇತ್ರಿ, ತೇಜಸ್ವಿನಿ ರಾಠೋಡ, ಶಬಾನಾ ಬಾಗವಾನ, ಎ.ಆರ್.ಮುಲ್ಲಾ, ಎಸ್.ಬಿ.ಕನ್ನೂರ, ಎನ್.ಆರ್.ಮೊಕಾಶಿ, ಪ್ರಶಾಂತ ಕಾಳೆ, ರಾಜುಗೌಡ ತುಂಬಗಿ, ಎಸ್.ಬಿ.ಬೇವಿನಗಿಡ, ಸಿದ್ದನಗೌಡ ಬಿಜ್ಜೂರ, ಎಸ್.ಎಂ.ಸಜ್ಜನ ಇತರರು ಇದ್ದರು.