ಸಾರಾಂಶ
ಸಾತ್ವಿಕ ಸಮಾಜ ನಿರ್ಮಾಣಕ್ಕೆ ಸಂತ, ಮಹಾತ್ಮರ ಜಯಂತಿ ಆಚರಣೆ ಪ್ರಸ್ತುತ
ಮುಳಗುಂದ:
ಮಹರ್ಷಿ ವಾಲ್ಮೀಕಿ ತಮ್ಮ ಮಹಾಕಾವ್ಯದಲ್ಲಿ ಮೌಲ್ಯಯುತ ಚಿಂತನೆಗಳನ್ನು ಜಗತ್ತಿಗೆ ನೀಡಿದ್ದಾರೆ. ರಾಮಾಯಣ ಕಾವ್ಯವು ಜಗತ್ತಿನ ನಾನಾ ಭಾಷೆಯಲ್ಲಿ ಅನುವಾದಿಸಲಾಗಿದೆ. ಎಲ್ಲರೂ ಓದಿ ತಿಳಿದುಕೊಳ್ಳಬೇಕು ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಹೇಳಿದರು.ಸ್ಥಳೀಯ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಂತರ ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಎಲ್. ಕರೇಗೌಡ್ರ ಮಾತನಾಡಿ, ಸಾತ್ವಿಕ ಸಮಾಜ ನಿರ್ಮಾಣಕ್ಕೆ ಸಂತ, ಮಹಾತ್ಮರ ಜಯಂತಿ ಆಚರಣೆ ಪ್ರಸ್ತುತವಾಗಿದ್ದು, ಆಚರಣೆ ಉದ್ದೇಶ ಎಲ್ಲರೂ ತಿಳಿದುಕೊಳ್ಳಬೇಕು. ಮಹರ್ಷಿ ವಾಲ್ಮೀಕಿ ಆದರ್ಶ ರೂಢಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಯಲ್ಲವ್ವ ಕವಲೂರ, ಸದಸ್ಯರಾದ ಎನ್.ಆರ್. ದೇಶಪಾಂಡೆ, ಎಸ್.ಸಿ. ಬಡ್ನಿ, ಹೊನ್ನಪ್ಪ ಹಳ್ಳಿ, ಅಶೋಕ ಹುಣಸಿಮರದ, ಬಸವರಾಜ ಹಾರೋಗೇರಿ, ದಾವುದ ಜಮಾಲಸಾಬನವರ ಪಪಂ ಸಿಬ್ಬಂದಿಗಳಾದ ಎಂ.ಸಿ. ಸಜ್ಜನ, ಬಸವರಾಜ ಹೊರಪೇಟಿ, ಗಾಯಿತ್ರಿ ಚಲವಾದಿ, ಉಮಾ ಗದುಗಿನ, ಮುನಿರ್ ನದ್ದಿಮುಲ್ಲ, ಬಸವರಾಜ ಮೊಕಾಶಿ, ಶಂಭು ಚವ್ಹಾಣ ಹಾಗೂ ಪೌರಕಾರ್ಮಿಕರು ಇದ್ದರು.