ಶಿಕ್ಷಣದಿಂದ ಮಾತ್ರ ಮೌಲ್ಯಾಧಾರಿತ ಬದುಕು ಸಾಧ್ಯ: ವನಿತ್‌ ಕುಮಾರ್‌

| Published : Dec 08 2023, 01:45 AM IST

ಸಾರಾಂಶ

ಸಾಹಿತಿ, ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಹಿಂದುಳಿದ, ಶೋಷಿತರ ಬದುಕು ಕಾರುಣೆಯಿಂದ ಕೂಡಿರದೆ ಸಮಾಜದ ಮಾನವ ಪ್ರೇಮಾ, ಬಾಂಧವ್ಯಗಳಿಂದ ತುಂಬಬೇಕು ಎಂದರು.ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮಿಸುವುದರೊಂದಿಗೆ ಕಾರ್ಯಕ್ರಮಕ್ಕೆ ನಿಟ್ಟೂರು ಗ್ರಾ.ಪಂ. ಅಧ್ಯಕ್ಷೆ ಅಮ್ಮುಣಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ ಶಿಕ್ಷಣದಿಂದ ಮಾತ್ರ ಈ ಸಮಾಜದಲ್ಲಿ ಸಮಾನತೆಯ ಮೌಲ್ಯದಾರಿತ ಬದುಕು ನಡೆಸಲು ಸಾದ್ಯ ಎಂದು ಕಾವೇರಿ ಕಾಲೇಜು ಉಪನ್ಯಾಸಕ ವನಿತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ನಿಟ್ಟೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆದ 67 ನೇ ಮಾಹ ಪರಿನಿರ್ಮಾಣ, ಮತ್ತು ಸಂವಿಧಾನ ಕುರಿತು ಜನ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಶೋಷಿತ ಸಮುದಾಯಗಳು ಬದುಕು ನಡೆಸಲು ಜ್ಞಾನದ ಅಗತ್ಯವಿದೆ. ಅಂಬೇಡ್ಕರ್ ಹಾದಿಯಲ್ಲಿ ಕಲಿಕೆಯ ಪ್ರಾಮುಖ್ಯ ತೆಯನ್ನು ತಿಳಿದುಕೊಳ್ಳಬೇಕು ಎಂದರು.

ದುಷ್ಚಟಗಳಿಂದ ದೂರ ಉಳಿದು ಗೌರವಿತವಾಗಿ ಬದುಕು ನಡೆಸಲು ಚಿಂತಿಸಬೇಕು. ವಿದ್ಯಾರ್ಹತೆಯಿಂದ ಉತ್ತಮ ಉದ್ಯೋಗ ಪಡೆದು ಆರ್ಥಿಕವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ಮತ್ತೊಂಬರ ಮುಂದೆ ಕೈಚಾಚುವುದು ತಪ್ಪುತದೆ ಎಂದು ಹೇಳಿದರು.

ನೋಟರಿ, ವಕೀಲ ಕಾಶಿಯಪ್ಪ ಮಾತನಾಡಿ ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ ಹಿಂದೂಳಿದ ಸಮುದಾಯಗಳು ಸಮಾನತೆಯ ಬದುಕು ನಡೆಸಲು ಅರ್ಹರಾಗಬೇಕು ಎಂದರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾನತೆಯಲ್ಲಿ ಬದುಕು ನಡೆಸುವ ಹಕ್ಕು ನಮಗೆ ಸಿಗಬೇಕು ಎಂದು ಹೇಳಿದರು.

ಸಾಹಿತಿ, ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಹಿಂದುಳಿದ, ಶೋಷಿತರ ಬದುಕು ಕಾರುಣೆಯಿಂದ ಕೂಡಿರದೆ ಸಮಾಜದ ಮಾನವ ಪ್ರೇಮಾ, ಬಾಂಧವ್ಯಗಳಿಂದ ತುಂಬಬೇಕು ಎಂದರು.

ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮಿಸುವುದರೊಂದಿಗೆ ಕಾರ್ಯಕ್ರಮಕ್ಕೆ ನಿಟ್ಟೂರು ಗ್ರಾ.ಪಂ. ಅಧ್ಯಕ್ಷೆ ಅಮ್ಮುಣಿ ಚಾಲನೆ ನೀಡಿದರು.

ಉಪಾಧ್ಯಕ್ಷ. ಚೆಕ್ಕೇರ ಸೂರ್ಯ ಅಯ್ಯಪ್ಪ, ದ.ಸಂ.ಸ ಜಿಲ್ಲಾ ಖಜಾಂಚಿ ಕುಮಾರ್ ಮಹದೇವ್, ಜಿಲ್ಲಾ ಸಂಘಟನೆ ಸಂಚಾಲಕ ಎಚ್.ಬಿ ಮುರುಗ, ನಿಟ್ಟೂರು ಗ್ರಾಮ ಸಂಚಾಲಕ ವಿಜಯ, ಹುಡ್ಕ, ಕಾಳ, ಪಾಲಿಬೆಟ್ಟ ಗ್ರಾಪಂ ಸದಸ್ಯ ನಾಸಿರ್ ಹಾಜರಿದ್ದರು.