ಸಾರಾಂಶ
ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಸಹಾಯ ಧರ್ಮಗುರು ಫಾ.ಓಲಿವರ್ ನಜ್ರೆತ್ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ನಮಗೆ ಲಭ್ಯವಿರುವ ಗ್ರಹಗಳಲ್ಲಿ ಕೇವಲ ಭೂಮಿಯಲ್ಲಿ ಮಾತ್ರ ಜೀವಸಂಕುಲವಿದೆ. ಮಾನವ ಅಧುನಿಕರಣದ ನೆಪದಿಂದ ತನ್ನ ಸುಖಗೋಸ್ಕರ ಪ್ರಾಣಿ- ಪಕ್ಷಿ- ಪರಿಸರದ ನಾಶ ಮಾಡುತ್ತಿದ್ದಾನೆ. ಆದರೆ ಇದು ಪರೋಕ್ಷವಾಗಿ ಅವನದ್ದೇ ನಾಶವಾಗಿದೆ. ಎಲ್ಲ ಧರ್ಮದ ಬಹುತೇಕ ಎಲ್ಲ ಹಬ್ಬಗಳು ಪರಿಸರಕ್ಕೆ ಸಂಬಂಧ ಹೊಂದಿದೆ. ಅನುದಿನವು ಪರಿಸರದ ಕಾಳಜಿ ನಮಗಿರಬೇಕು, ವನಮಹೋತ್ಸವ ಜೀವನೋತ್ಸವವಾಗಲಿ ಎಂದು ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಸಹಾಯ ಧರ್ಮಗುರು ಫಾ.ಓಲಿವರ್ ನಜ್ರೆತ್ ಹೇಳಿದರು.ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಶಾಲಾ ಮುಖ್ಯ ಶಿಕ್ಷಕಿ ಆನ್ಸಿಲ್ಲಾ ಡಿಮೆಲ್ಲೊ ಮಾತನಾಡಿ, ಹಿರಿಯರಿಂದ ಬಳುವಳಿಯಾಗಿ ಬಂದಿರುವ ಈ ಸುಂದರ ಪರಿಸರವನ್ನು ಉಳಿಸಿ ಮಾಲಿನ್ಯ ಮುಕ್ತವಾಗಿ ಮುಂದಿನ ಪೀಳಿಗೆಗೆ ನೀಡುವುದೇ ನಮ್ಮ ಗುರಿಯಾಗಬೇಕೆಂದು ಹೇಳಿದರು.ವಿದ್ಯಾರ್ಥಿಗಳಿಂದ ಪರಿಸರ ಪೂರಕ ಪ್ರಹಸನ, ಗೀತಾನಾಟಕ, ಪರಿಸರ ಗೀತೆಗಳು ಮೂಡಿಬಂದವು. ವಿದ್ಯಾರ್ಥಿಗಳಾದ ಸಾತ್ವಿಕ್, ಅಂಕಿತಾ, ವೈಷ್ಣವಿ ಪರಿಸರದ ಮಹತ್ವ ಹೇಳಿದರು. ವೇದಿಕೆಯಲ್ಲಿ ಶಾಲಾ ನಾಯಕಿ ಅಕ್ಷತಾ, ಉಪನಾಯಕ ನೀಲ್ ಡಿಸೋಜ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರಜತ್ ಸ್ವಾಗತಿಸಿದರು. ಧಾತ್ರಿ ವಂದಿಸಿದರು. ರೇಶಲ್ ಕಾರ್ಯಕ್ರಮ ನಿರೂಪಿಸಿದರು.