ಸಾರಾಂಶ
ಕೂಡಿಗೆ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಮತ್ತು ಕುಶಾಲನಗರ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಕುಶಾಲನಗರ: ಸ್ವಾತಂತ್ರ್ಯೋತ್ಸವ ಅಂಗವಾಗಿ ಕುಶಾಲನಗರ ಸಮೀಪದ ಕೂಡಿಗೆ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆ ಮತ್ತು ಕುಶಾಲನಗರ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಎನ್ ಪುಷ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಿರೀಶ್ , ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎನ್ ಟಿ ನಾರಾಯಣ, ಕಾರ್ಯದರ್ಶಿ ಎನ್ ಕಿರಣ್ , ಉಪಾಧ್ಯಕ್ಷ ಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಪ್ರವೀಣ್, ಸುಮನ್ ಬಾಲಚಂದ್ರ, ಸತೀಶ್, ಎಂ ಎಸ್ ಚಿಣ್ಣಪ್ಪ, ರಾಘವೇಂದ್ರ ರಾಜಶೇಖರ್, ಕೊಡಗನ ಹರ್ಷ, ವಿವೇಕ್ ಮತ್ತು ಸಹ ಶಿಕ್ಷಕರಾದ ಎ ಪಿ ಸೋಮಯ್ಯ ಮತ್ತಿತರರು ಇದ್ದರು.