ಸಾರಾಂಶ
ಎನ್.ಎಂ.ನಾಗರಾಜ್ ಉಪಾಧ್ಯಕ್ಷ । ಇಂದು ನಡೆದ 2ನೇ ಅವಧಿ ಚುನಾವಣೆಯಲ್ಲಿ ತಹಸೀಲ್ದಾರ್ ಪೂರ್ಣಿಮಾ ಘೋಷಣೆಕನ್ನಡಪ್ರಭ ವಾರ್ತೆ, ಬೀರೂರು.ಬಿಜೆಪಿಯ ಜಾಣ ನಡೆ ಹಾಗೂ ಅಧ್ಯಕ್ಷ ಗಾಧಿ ನಮ್ಮದೇ ಆಗಬೇಕೆಂಬ ಛಲದಿಂದ ಮಂಗಳವಾರ ನಡೆದ ಚುನಾವಣೆಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಟಿ.ಎಂ.ವನಿತಾ ಮಧುಬಾವಿಮನೆ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಎನ್.ಎಂ.ನಾಗರಾಜ್ ಆಯ್ಕೆಯಾಗಿ ಅಚ್ಚರಿ ಮೂಡಿಸಿದರು.ಬೀರೂರು ಪುರಸಭೆಯಲ್ಲಿ ಒಟ್ಟು 23 ಸದಸ್ಯ ಬಲವಿದ್ದು, ಬಿಜೆಪಿಯ 11 , ಕಾಂಗ್ರೆಸ್‌ನ 9 ಹಾಗೂ ಜೆಡಿಎಸ್‌ನ 2 ಹಾಗೂ ಒರ್ವ ಪಕ್ಷೇತರ ಸದಸ್ಯರಿದ್ದಾರೆ. ಮಂಗಳವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 21 ವಾರ್ಡಿನ ಟಿ.ಎಂ.ವನಿತಾ ಮಧುಬಾವಿಮನೆ ಮತ್ತು ಜ್ಯೋತಿ ಸಂತೋಷ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಪಾಧ್ಯಕ್ಷ ಸ್ಥಾನಕ್ಕೆ ಎನ್.ಎಂ.ನಾಗರಾಜ್ ಮತ್ತು ಟಿ.ಗಂಗಾಧರ್ ಉಮೇದುವಾರಿಕೆ ಸಲ್ಲಿಸಿದ್ದರು.ಪುರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ತಹಸೀಲ್ದಾರ್ ಪೂರ್ಣಿಮ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳ ಪರವಾಗಿ ಕೈ ಎತ್ತುವ ಮೂಲಕ ಮತ ಚಲಾಯಿಸುವಂತೆ ಸದಸ್ಯರಿಗೆ ಸೂಚಿಸಿದ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಟಿ.ಎಂ.ವನಿತಾ ಮಧುಬಾವಿಮನೆ ಅವರು 14 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ಸಂತೋಷ್ ಕುಮಾರ್ 9 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರಾಜ್ 14 ಮತ ಪಡೆದರೆ, ಗಂಗಾಧರ್ 9 ಮತ ಪಡೆದರು. ಅಧ್ಯಕ್ಷರಾಗಿ ವನಿತಾ ಮಧುಬಾವಿಮನೆ ಹಾಗೂ ಉಪಾಧ್ಯಕ್ಷರಾಗಿ ನಾಗರಾಜ್ ಬಹುಮತ ಪಡೆದು ಚುನಾಯಿತರಾಗಿದ್ದಾರೆ ಎಂದು ತಹಸೀಲ್ದಾರ್ ಪೂರ್ಣಿಮ ಘೋಷಿಸಿ ಪ್ರಮಾಣ ಪತ್ರ ವಿತರಿಸಿದರು.ಪುರಸಭೆ ಅಧಿಕಾರ ಹಿಡಿಯಲು 12 ಮತಗಳು ಸಾಕಿತ್ತು. ಇದನ್ನು ಅರಿತ ಬಿಜೆಪಿ 11 ಮತ್ತು ಬಿಜೆಪಿ ಬೆಂಬಲಿತ ಒರ್ವ ಪಕ್ಷೇತರ ಅಭ್ಯರ್ಥಿ ಸೇರಿದಂತೆ ಒಟ್ಟು 12 ಸದಸ್ಯರಾಗಿ ಸುಲಭವಾಗಿ ಪುರಸಭೆ ಅಧಿಕಾರ ಹಿಡಿಯಲು ಬೇಕಾದ ಅಸ್ತ್ರವನ್ನ ತಯಾರು ಮಾಡಿ ಕೊಂಡಿದ್ದರು. ಆದರೆ ಕಾಂಗ್ರೆಸ್‌ನ 9 , ಜೆಡಿಎಸ್‌ನ 2 ಸದಸ್ಯರು ಹಾಗೂ ಶಾಸಕರು ಮತ್ತು ಸಂಸದರ ಮತಗಳು ಪ್ರಾಶಸ್ತ್ಯ ಪಡೆಯಲಿವೆ ಎನ್ನುವುದನ್ನು ಅರಿತ ಬಿಜೆಪಿ ಮುಖಂಡರು ಪುರಸಭೆಗೆ ಮೀಸಲಾತಿ ನಿಗದಿಯಾದ ಕೆಲವೇ ದಿನಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಅಧ್ಯಕ್ಷಗಾಧಿ ನೀಡುವುದಾಗಿ ಮನವೊಲಿಸಿ ಪ್ರವಾಸ ಕರೆದು ಕೊಂಡು ಹೋಗಿ ನಮ್ಮಕಡೆಮಾಡಿಕೊಡು ಇಂದು ಬಿಜೆಪಿ -ಜೆಡಿಎಸ್ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಇನ್ನೊಂದೆಡೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೆ ಇರುವುದರಿಂದ ಪುರಸಭೆ ಗದ್ದುಗೆ ಹಿಡಿಯಲೇ ಬೇಕೆಂದು ಕಾಂಗ್ರೆಸ್ ಮುಖಂಡರು ಸಹ ಹಲವಾರು ರೀತಿ ಪ್ರಯತ್ನ ನಡೆಸಿದರು. ಬಿಜೆಪಿಯವರು ಜೆಡಿಎಸ್ ನ ಇಬ್ಬರು ಸದಸ್ಯರನ್ನು ತಮ್ಮಪರ ವಾಗಿಟ್ಟುಕೊಂಡಿತ್ತಾದರೂ ಕೊನೆ ಕ್ಷಣದಲ್ಲಿ ಕೈಗೂಡಲಿಲ್ಲ.ಅಧ್ಯಕ್ಷಗಾಧಿ ಪಡೆಯಲೇ ಬೇಕೆಂದು ಮಾಜಿ ಶಾಸಕ ಬೆಳ್ಳಿಪ್ರಕಾಶ್ ಮಾಡಿದ್ದೇ ಇದಕ್ಕೆ ಮೂಲ ಕಾರಣ. ಬಿಜೆಪಿಯಲ್ಲಿ ನಮಗೂ ಒಂದು ಛಾನ್ಸ್ ಕೊಡಿ ಎಂದು ಭುಗಿಲೆದ್ದವರನ್ನು ಸಮಾಧಾನ ಪಡಿಸಿ ಒಗ್ಗಟ್ಟು ಮೂಡಿಸಿದ ನಿಟ್ಟಿನಲ್ಲಿ ಈ ಅಧ್ಯಕ್ಷ , ಉಪಾಧ್ಯಕ್ಷರ ಆಯ್ಕೆಗೆ ಸಹಕಾರವಾಯಿತು ಎಂದು ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್ ತಿಳಿಸಿದರು.ಪತ್ರಿಕೆಯೊಂದಿಗೆ ಮಾತನಾಡಿದ ಪುರಸಭೆ ನೂತನ ಅಧ್ಯಕ್ಷೆ ವನಿತಾ ಮಧು ಬಾವಿಮನೆ, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಸಹಕರಿಸಿದ ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ , ಬೆಳ್ಳಿಪ್ರಕಾಶ್ ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ, ಪಟ್ಟಣದ ಅಭಿವೃದ್ಧಿಯತ್ತ ಮಾತ್ರ ನಮ್ಮೆಲ್ಲರ ಚಿತ್ತ. ಪಕ್ಷ ಬೇಧವಿಲ್ಲದೆ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ಧಿಯತ್ತ ಗಮನ ಹರಿಸುತ್ತೇವೆ.ಶಾಸಕ ಕೆ.ಎಸ್.ಆನಂದ್ ಸಹಕಾರ ಪಡೆದು ಆಗಬೇಕಾದ ಕೆಲಸ ಮಾಡಲು ಪ್ರಯತ್ನಿಸುತ್ತೇನೆಂದರು.ಉಪಾಧ್ಯಕ್ಷ ಎನ್.ಎಂ.ನಾಗರಾಜ್ ಮಾತನಾಡಿ, ಪಟ್ಟಣದ ಅಭಿವೃದ್ದಿಯಲ್ಲಿ ಅಧ್ಯಕ್ಷರ ಜೊತೆ ಕೈ ಜೋಡಿಸುತ್ತಾ ಪ್ರಾಮಾಣಿಕ ವಾಗಿ ತೊಡಗಿಸಿಕೊಳ್ಳುತ್ತೇನೆ. ಮಾಜಿ ಶಾಸಕ ಬೆಳ್ಳಿಪ್ರಕಾಶ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪುರಸಭೆ ಮುಂಭಾಗ ಪಟಾಕಿ ಸಿಡಿಸಿ ಜಯಘೋಷ ಕೂಗಿ ಸಂಭ್ರಮಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತ ಚುನಾವಣೆ ನಡೆಸಲು ಸಿಪಿಐ ಶ್ರೀಕಾಂತ್ ಹಾಗೂ ಪಿಎಸೈ ಸಜಿತ್ ಕುಮಾರ್ ನೇತೃತ್ವದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
-- ಕೋಟ್---ಮಾಜಿ ಶಾಸಕ ಬೆಳ್ಳಿಪ್ರಕಾಶ್, ಎಂ.ಪಿ.ಸುದರ್ಶನ್ ಸಾರಥ್ಯದಲ್ಲಿ ಅತಿ ಹೆಚ್ಚು ಸ್ಥಾನಗಳಿದ್ದ ಬಿಜೆಪಿ ಸಹಕಾರದಿಂದ ಪುರಸಭೆ ಚುಕ್ಕಾಣಿ ಹಿಡಿಯಲು ಪ್ರಯತ್ನ ನಡೆಸಿದ ಫಲವಾಗಿ ಜೆಡಿಎಸ್ ಅಭ್ಯರ್ಥಿ ಅಧ್ಯಕ್ಷರಾಗಿದ್ದಾರೆ. ಬೆಳ್ಳಿಪ್ರಕಾಶ್ ದೊಡ್ಡಗುಣ ಮತ್ತು ಪಕ್ಷದ ಒಗ್ಗಟ್ಟು, ಪ್ರಾಮಾಣಿಕತೆ ಈ ವಿಜಯೋತ್ಸವಕ್ಕೆ ಕಾರಣ ಅವರೆಲ್ಲರಿಗೂ ನಾ ಚಿರಋಣಿ.ವೈ.ಎಸ್.ವಿ.ದತ್ತ.
ಮಾಜಿ ಶಾಸಕ.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ವೈ.ಎಂ.ಲಕ್ಷ್ಮಣ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಎಂ.ಮೋಹನ್ ಕುಮಾರ್ ಸೇರಿದಂತೆ ಎಲ್ಲಾ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು , ಪುರಸಭಾ ಸಿಬ್ಬಂದಿ. ಅಧಿಕಾರಿಗಳು ಹಾಜರಿದ್ದರು.27 ಬೀರೂರು 1ಬೀರೂರಿನ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ 2ನೇ ಅವಧಿ ಚುನಾವಣೆಗೆ ಅಧ್ಯಕ್ಷರಾಗಿ ವನಿತಾ ಮಧು ಬಾವಿಮನೆ, ಉಪಾಧ್ಯಕ್ಷರಾಗಿ ನಾಗರಾಜ್ ಆಯ್ಕೆಯಾದರು.