ಸಾರಾಂಶ
ನಾವು ಯಾವ ಯುಗದಲ್ಲಿದ್ದೇವೆ ಎಂಬುದು ಅರ್ಥವಾಗುತ್ತಿಲ್ಲ. ಚಿನ್ನೇನಹಳ್ಳಿ ಗ್ರಾಮದಲ್ಲಿ ಸರ್ಕಾರ ಶುದ್ಧ ಕುಡಿವ ನೀರು ಕೊಡದೆ ಕಲುಷಿತ ನೀರು ಕೊಟ್ಟ ಪರಿಣಾಮ ಗ್ರಾಮದಲ್ಲಿ 200ಕ್ಕೂ ಅಧಿಕ ಜನರು ವಾಂತಿ-ಬೇಧಿ ಕಾಣಿಸಿಕೊಂಡು ಈಗಾಗಲೇ 6 ಜನ ಮೃತಪಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ನಾವು ಯಾವ ಯುಗದಲ್ಲಿದ್ದೇವೆ ಎಂಬುದು ಅರ್ಥವಾಗುತ್ತಿಲ್ಲ. ಚಿನ್ನೇನಹಳ್ಳಿ ಗ್ರಾಮದಲ್ಲಿ ಸರ್ಕಾರ ಶುದ್ಧ ಕುಡಿವ ನೀರು ಕೊಡದೆ ಕಲುಷಿತ ನೀರು ಕೊಟ್ಟ ಪರಿಣಾಮ ಗ್ರಾಮದಲ್ಲಿ 200ಕ್ಕೂ ಅಧಿಕ ಜನರು ವಾಂತಿ-ಬೇಧಿ ಕಾಣಿಸಿಕೊಂಡು ಈಗಾಗಲೇ 6 ಜನ ಮೃತಪಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಮಿಡಿಗೇಶಿ ಹೋಬಳಿ ಚಿನ್ನೇನಹಳ್ಳಿ ಗ್ರಾಮದ ಪ್ರತಿ ಮನೆಗೂ ಶನಿವಾರ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರೊಂದಿಗೆ ಮಾತನಾಡಿದರು. ಇಲ್ಲಿ ಮೃತಪಟ್ಟ ಮನೆಯವರ ಬಳಿ ಅಧಿಕಾರಿಗಳು ಪೋಷಕರಿಂದ ಬಲವಂತವಾಗಿ ಸಹಿ ಹಾಕಿಸಿಕೊಂಡು, ಇಲ್ಲಿ ಸತ್ತಿರದು ಇಬ್ಬರು ಮಾತ್ರ, 6 ಜನ ಅಲ್ಲ ಎಂದು ಹೇಳಬೇಕೆಂದು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ರಾಜ್ಯ ಸರ್ಕಾರ ಸಾವನ್ನು ಮುಚ್ಚಿಡುವ ಕೆಲಸ ಮಾಡುತ್ತಿದೆ. ಇಲ್ಲಿನ ಜನರು ಹೇಳಿರುವುದನ್ನು ಹೇಳಿದ್ದೇನೆ. ಇದರಲ್ಲಿ ಸರ್ಕಾರ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಾವಾಗಿದೆ. ಇದಕ್ಕೆ ನೇರ ಹೊಣೆ ಸರ್ಕಾರದ ಕಾರ್ಯ ವೈಖರಿ ಶುದ್ಧ ನೀರು ಕೊಟ್ಟದ್ದರೆ ಜನರು ಏಕೆ ಸಾಯುತ್ತಿದ್ದರು ಎಂದರು.ವಿಧಾನ ಸಭೆಯಲ್ಲಿ ಪ್ರಸ್ತಾಪ ಮಾಡ್ತಿನಿ:
ಈ 6 ಜನರ ಪ್ರತಿ ಕುಟುಂಬಕ್ಕೆ ಸರ್ಕಾರ 25 ಲಕ್ಷ ರು. ಪರಿಹಾರ ನೀಡಬೇಕು. ಕೆಳ ಮಟ್ಟದ ಅಧಿಕಾರಿಗಳ ಅಮಾನತು ವಿರೋಧ ಪಕ್ಷ ಕಣ್ಮುಚ್ಚಿ ಕೂತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣದಲ್ಲಿ ಒಬ್ಬರು ಮೃತಪಟ್ಟಾಗ ನಾನು ಕೆಳ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಿಲ್ಲ, ದೊಡ್ಡ ಅಧಿಕಾರಿ ಡಿಸಿ, ಸಿಇಒಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು. ಇದ್ಕಕೆಲ್ಲಾ ಡಿಸಿ, ಸಿಇಒ ಮೇಲೆ ಕ್ರಮ ಕೈಗೊಳ್ಳಿ ಮೇಲಾಧಿಕಾರಿಗಳೇ ತಲೆ ದಂಡ ಅಂತ ಅವರೇ ಹೇಳಿದ್ದರು. ಯಾರ ಮೇಲೆ ಕ್ರಮ ಕೈಗೊಳ್ಳುತ್ತೀರಾ ತಗೊಳ್ಳಿ ಕಲುಷಿತ ನೀರು ಬಂದಿದ್ದಕ್ಕೆ ಯಾರ ತಲೆ ದಂಡ ಮಾಡ್ತೀರಾ ಮಾಡಿ, ನಾನು ವಿಧಾನ ಸಭೆಯಲ್ಲಿ ಪ್ರಸ್ತಾಪ ಮಾಡ್ತಿನಿ ಎಂದು ಹೇಳಿದರು.ಶಾಸಕ ಸುರೇಶ್‌ಗೌಡ, ಡಿಎಚ್‌ಒ ಮಂಜುನಾಥ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಇಒ ಲಕ್ಷ್ಮಣ್, ಲೋಕೇಶ್ವರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ, ಮುಖಂಡರಾದ ಎಲ್.ಸಿ.ನಾಗರಾಜು, ಕೊಂಡವಾಡಿ ಚಂದ್ರಶೇಖರ್ ಇದ್ದರು.ಪೋಟೋಮಧುಗಿರಿ ತಾಲೂಕು ಚಿನ್ನೇನಹಳ್ಳಿ ಗ್ರಾಮದಲ್ಲಿ ವಾಂತಿ,ಬೇಧಿ ಕಾಣಿಸಿಕೊಂಡು ಮೃತಪಟ್ಟವರ ಕುಟುಂಬ ವರ್ಗ ಸೇರಿದಂತೆ ಪ್ರತಿ ಮನೆ ಮನೆಗೂ ಬೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.