ಶ್ರೀ ವರದಾನ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಗೌರಿ - ಗಣೇಶ ಹಬ್ಬದ ಪ್ರಯುಕ್ತ ಮಣ್ಣಿನಿಂದ ಮಾಡಿದ ಶ್ರೀ ಗೌರಮ್ಮ- ಗಣೇಶ ಮೂರ್ತಿಯನ್ನು ನೋಡುವುದು ಬಲುಪ್ರೀತಿ. ಪಿಒಪಿ ಮೂರ್ತಿಗಳನ್ನು ಬಹಳ ಬೇಗನೇ ಮಾಡಬಹುದು, ಆದರೆ ಅವುಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದ ಅವರು, ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪೂಜಿಸಿ ಗೌರಿ- ಗಣೇಶ ಹಬ್ಬವನ್ನು ಅಚರಿಸುತ್ತಿರುವುದು ಮತ್ತು ಜಲ ಸಂಪನ್ಮೂಲಗಳನ್ನು ರಕ್ಷಿಸುವುದು ಹಾಗೂ ಪ್ರಾಣಿ, ಪಕ್ಷಿ ಮತ್ತು ಮಾನವನ ಸಂಕುಲಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗಬಾರದೆಂಬ ಉದ್ದೇಶದಿಂದ ಎಂದು ಹೇಳಿದರು.

ರಾಮನಾಥಪುರ: ಭಕ್ತಿ- ಶಕ್ತಿಯ ಮಹಾ ಸಂಗಮವೇ ರಾಮನಾಥಪುರದ ವರದಾನ ಬಸವೇಶ್ವರ ನೆಲೆಸಿರುವ ಈ ಸನ್ನಿಧಿ. ಇಲ್ಲಿ ಬರುವ ನಂಬಿದ ಭಕ್ತರ ಕಾಯುವ ಇಷ್ಟಾರ್ಥಗಳನ್ನು ಈಡೇರಿಸುತ್ತ, ಸಂಕಷ್ಟಗಳನ್ನು ಶ್ರೀ ಸ್ವಾಮಿಯು ಪರಿಹರಿಸುತ್ತ ಬಂದಿರುವುದರಿಂದ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಈ ಸ್ಥಳವು ಶಕ್ತಿಪೀಠವಾಗಿ ಬೆಳೆಯುತ್ತಿದೆ ಎಂದು ಸಮಾಜ ಸೇವಕ ಕೇರಳದ ಪಾಂಡಿಚೇರಿ ವಿಜಯಕುಮಾರ್ ತಿಳಿಸಿದರು.‌

ದಕ್ಷಿಣಕಾಶಿ ಎಂದೇ ಹೆಸರು ಪಡೆದಿರುವ ರಾಮನಾಥಪುರದ ಶ್ರೀ ವರದಾನ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ 60 ವರ್ಷಗಳಿಂದ ಪ್ರತಿಷ್ಠಾಪಿಸಿರುವ ಗೌರಿ- ಗಣೇಶಮೂರ್ತಿಗೆ ಸಂಪ್ರದಾಯದಂತೆ ಪೂಜಾ ಕೈಂಕರ್ಯ, ಮಹಾ ಮಂಗಳಾರತಿ ನಂತರ ಪುರೋಹಿತರಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಶ್ರೀ ವರದಾನ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಗೌರಿ - ಗಣೇಶ ಹಬ್ಬದ ಪ್ರಯುಕ್ತ ಮಣ್ಣಿನಿಂದ ಮಾಡಿದ ಶ್ರೀ ಗೌರಮ್ಮ- ಗಣೇಶ ಮೂರ್ತಿಯನ್ನು ನೋಡುವುದು ಬಲುಪ್ರೀತಿ. ಪಿಒಪಿ ಮೂರ್ತಿಗಳನ್ನು ಬಹಳ ಬೇಗನೇ ಮಾಡಬಹುದು, ಆದರೆ ಅವುಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದ ಅವರು, ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪೂಜಿಸಿ ಗೌರಿ- ಗಣೇಶ ಹಬ್ಬವನ್ನು ಅಚರಿಸುತ್ತಿರುವುದು ಮತ್ತು ಜಲ ಸಂಪನ್ಮೂಲಗಳನ್ನು ರಕ್ಷಿಸುವುದು ಹಾಗೂ ಪ್ರಾಣಿ, ಪಕ್ಷಿ ಮತ್ತು ಮಾನವನ ಸಂಕುಲಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗಬಾರದೆಂಬ ಉದ್ದೇಶದಿಂದ ಎಂದು ಹೇಳಿದರು.

ಅರ್ಚಕರಾದ ರಾಘವೇಂದ್ರ ಭಟ್ ಪೂಜಾ ಕೈಂಕರ್ಯ ನಡೆಸಿಕೊಟ್ಟರು. ಶ್ರೀ ವರದಾನ ಬಸವೇಶ್ವರ ಭಕ್ತ ಬಳಗದ ಸದಸ್ಯರಾದ ಪ್ರವೀಣ್, ಶ್ರೀನಾಥ್, ದೇವೇಂದ್ರ, ಆರ್.ಕೆ. ಶ್ರೀನಿವಾಸ್, ಸಿದ್ದಯ್ಯ, ನಾಗೇಶ್, ಅಭಿಷೇಕ್, ಸಹನಾ, ರಾಧಾಕೃಷ್ಣ ಮುಂತಾದವರು ಭಾಗವಹಿಸಿದ್ದರು.