ಸಾರಾಂಶ
ನಗರದಲ್ಲಿ ಶುಕ್ರವಾರ ವರ ಮಹಾಲಕ್ಷ್ಮೀ ಹಬ್ಬ ಸಂಭ್ರಮ ಸಡಗರದಿಂದ ಆಚರಣೆಗೊಂಡಿತು. ಮಹಿಳೆಯರು ಸಂಪತ್ತಿನ ಅಧಿದೇವತೆ ವರಮಲಕ್ಷ್ಮೀಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರು.
ಶಿವಮೊಗ್ಗ: ನಗರದಲ್ಲಿ ಶುಕ್ರವಾರ ವರ ಮಹಾಲಕ್ಷ್ಮೀ ಹಬ್ಬ ಸಂಭ್ರಮ ಸಡಗರದಿಂದ ಆಚರಣೆಗೊಂಡಿತು. ಮಹಿಳೆಯರು ಸಂಪತ್ತಿನ ಅಧಿದೇವತೆ ವರಮಲಕ್ಷ್ಮೀಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರು.
ಮಂಜಾನೆಯೇ ಮನೆ ಅಂಗಳದಲ್ಲಿ ಬಣ್ಣಗಳಿಂದ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಸಿಂಗರಿಸಿ ಬ್ರಾಹ್ಮಿಮುಹೂರ್ತದಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಸೀರೆ ಉಡಿಸಿ, ಬಳೆ ತೊಡಿಸಿ, ಹೂಗಳಿಂದ ಅಲಂಕರಿಸಿ, ಹಣ್ಣುಗಳನ್ನು ಇಟ್ಟು, ಬಗೆ ಬಗೆಯ ಖಾದ್ಯಗಳ ನೈವೇದ್ಯ ಮಾಡಿ ವರಮಹಾಲಕ್ಷ್ಮೀಯನ್ನು ಪೂಜಿಸಿದರು. ಸಂಜೆ ಹೊತ್ತಿಗೆ ಆರತಿ ಮಾಡಿ ನೆರೆ ಹೊರೆಯವರನ್ನು ಕರೆದು ಅರಿಶಿನ-ಕುಂಕುಮ, ಹೂವು, ಬಳೆಗಳೊಂದಿಗೆ ಬಾಗಿನ ನೀಡಿ ಸಂಭ್ರಮಿಸಿದರು.ನಗರದ ಹಲವು ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ-ಪುನಸ್ಕಾರವನ್ನು ಸಲ್ಲಿಸಲಾಯಿತು.
ನಗರದ ಸೀಗೆಹಟ್ಟಿಯ ಶ್ರೀ ಅಂತರಘಟ್ಟಮ್ಮ ದೇವಸ್ಥಾನ ಸೇವಾ ಸಮಿತಿಯಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶುಕ್ರವಾರ ಶ್ರೀ ಅಂತರಘಟ್ಟಮ್ಮ ದೇವಿಗೆ ನೋಟಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.ಶಿವಮೊಗ್ಗ ನಗರದ ರವಿ ಟ್ರೇಡರ್ಸ್‌ನ ಅಜಮನಿ ಕುಟುಂಬದವರು ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಅನ್ನ ದಾಸೋಹ ಸೇವೆ ಮಾಡಿದರು. ಮಹಿಳೆಯರಿಗೆ ಉಡಿ ತುಂಬುವ ಮೂಲಕ ಸಂಭ್ರಮದಿಂದ ವ್ರತ ಆಚರಿಸಿದರು.