ಯೋಗ ನರಸಿಂಹಸ್ವಾಮಿ ಬೆಟ್ಟದ ಹಿಂಭಾಗದ ಬೆಟ್ಟದ ಮಧ್ಯೆ ಇರುವ ಐತಿಹಾಸಿಕ ವರನಂದಮ್ಮನ ಸನ್ನಿಧಿಯಲ್ಲಿ ನಡೆಯುವ ಹಬ್ಬದ ಅಂಗವಾಗಿ ಭಾನುವಾರ ಸ್ವಚ್ಛತಾ ಕಾರ್ಯ ನೆರವೇರಿತು. ಐತಿಹಾಸಿಕ ವರನಂದಮ್ಮನ ಹಬ್ಬಅಕ್ಟೋಬರ್ 1 ರಂದು ಕದಲಗೆರೆ ಮತ್ತು ಬೆಟ್ಟದದೇವಿ ಸನ್ನಿಧಿಯಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಯೋಗ ನರಸಿಂಹಸ್ವಾಮಿ ಬೆಟ್ಟದ ಹಿಂಭಾಗದ ಬೆಟ್ಟದ ಮಧ್ಯೆ ಇರುವ ಐತಿಹಾಸಿಕ ವರನಂದಮ್ಮನ ಸನ್ನಿಧಿಯಲ್ಲಿ ನಡೆಯುವ ಹಬ್ಬದ ಅಂಗವಾಗಿ ಭಾನುವಾರ ಸ್ವಚ್ಛತಾ ಕಾರ್ಯ ನೆರವೇರಿತು.ಐತಿಹಾಸಿಕ ವರನಂದಮ್ಮನ ಹಬ್ಬಅಕ್ಟೋಬರ್ 1 ರಂದು ಕದಲಗೆರೆ ಮತ್ತು ಬೆಟ್ಟದದೇವಿ ಸನ್ನಿಧಿಯಲ್ಲಿ ನಡೆಯುವ ಹಿನ್ನೆಲೆಯಲ್ಲಿ ದೇವರ ಗುಡ್ಡಪ್ಪ ದಿ.ನರಸಿಂಹೇಗೌಡರ ಪುತ್ರ ವಕೀಲ ಕೆ.ಎನ್‌ದಿನೇಶ್ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ರಾಮಾನಯಜಾಚಾರ್ಯರ ಕಾಲದಲ್ಲಿ ಚೆಲುವ ನಾರಾಯಣಸ್ವಾಮಿ ಪಾದಾರವಿಂದದಲ್ಲಿ ಐಕ್ಯವಾದ ಬಿಬಿ ನಾಚ್ಚಿಯಾರ್ ಬೆಟ್ಟದ ದೇಗುಲದಲ್ಲಿ ನಡೆಯುವ ವಿಶೇಷ ಹಬ್ಬಕ್ಕಾಗಿ ಮೆಟ್ಟಿಲುಗಳ ಮೇಲೆ ಬೆಳೆದ ಗಿಡಗಂಟೆಗಳನ್ನು ಕಿತ್ತು ಸುಣ್ಣ ಬಣ್ಣ ಬಳಿದು ಸ್ವಚ್ಛತಾ ಕೈಂಕರ್ಯ ಮಾಡಲಾಯಿತು.
ಮೇಲುಕೋಟೆಗೆ ಹೋಗುವ ಮಾರ್ಗ ಮಧ್ಯ ಹೊಸಕೆರೆಯಿಂದ ಎಡಭಾಗದ ರಸ್ತೆಯಲ್ಲಿ 2 ಕಿ.ಮೀ ಸಾಗಿದರೆ ವರನಂದಮ್ಮನ ಸನ್ನಿಧಿ ಬೆಟ್ಟದ ಮಧ್ಯೆ ಇರುವ ಗುಹೆಯಲ್ಲಿ ಇದೆ. ದೇಗುಲದ ಗೋಪುರ ಹೆಬ್ಬಂಡೆಯೊಂದರ ಮೇಲಿದೆ. ಪಕೃತಿ ಮಡಿಲಲ್ಲಿರುವ ಇಡೀ ದೇಗುಲದ ಪರಿಸರವನ್ನು ಸ್ವಚ್ಛಗೊಳಿಸಲಾಗಿದೆ. ದೀಪಾಲಂಕಾರ, ತಳಿರುತೋರಣಗಳಿಂದ ಸಿಂಗರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ವರ್ಷಕ್ಕೊಮ್ಮೆ ನಡೆಯುವ ವರನಂದಮ್ಮನ ಹಬ್ಬದಲ್ಲಿ ಸಾವಿರಾರು ಭಕ್ತರು ಸೇರುತ್ತಿದ್ದು, ಕುಡಿಯುವ ನೀರು, ಪ್ರಸಾದ ವಿನಿಯೋಗ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡುವುದು ವಿಶೇಷವಾಗಿದೆ.ಅ.1ರಂದು ವರನಂದಮ್ಮನ ಹಬ್ಬ ನಡೆಯಲಿದೆ. ಕದಲಗೆರೆ, ಕಾಡೇನಹಳ್ಳಿ, ನ್ಯಾಮನಹಳ್ಳಿ ಗ್ರಾಮಸ್ಥರು ಸೇರಿ ಆಚರಿಸುವ ಹಬ್ಬದಲ್ಲಿ ಮೂರು ಗ್ರಾಮಗಳ ದೇವಿ ಒಕ್ಕಲಿನವರು ವಿಶೇಷ ಪೂಜಾ ಕೈಂಕರ್ಯ ಸೇರಿದಂತೆ ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ವಕೀಲ ಕೆ.ಎನ್ ದಿನೇಶ್ ತಿಳಿಸಿದ್ದಾರೆ.
ದೇವಿಗೆ ಅಭಿಷೇಕ, ಪೂಜೆ, ಪುನಸ್ಕಾರಗಳು ನಡೆಯಲಿದೆ. ಸೆಪ್ಟಂಬರ್ 30 ರಾತ್ರಿ ರಂಗದ ಮುಗಿಳ್ ನಡೆಯಲಿದೆ. ಇಡೀ ರಾತ್ರಿ ಜನಪದ ಕಲಾ ತಂಡಗಳಿಂದ ರಂಗ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ಗುರುವಾರ ಬೆಳಗ್ಗೆ ಬಂಡಿಕಟ್ಟಲಾಗುತ್ತಿದೆ. ಅದೇ ದಿನ ಸಂಜೆ ಬಂಡಿ ವರನಂದಮ್ಮನ ದೇಗುಲ ತಲುಪಲಿದೆ. ಈ ವೇಳೆ ಪೂಜೆ ನೆರವೇರಿದ ನಂತರ ಹಬ್ಬದ ಕಾರ್ಯಕ್ರಮಗಳು ಮುಕ್ತಾಯವಾಗಲಿದೆ ಎಂದು ವಿವರ ನೀಡಿದ್ದಾರೆ.