ವರಂಗ ಜೈನ ಮಠ ಇನ್ನು ಧಾರ್ಮಿಕ ಯಾತ್ರಾ ಕ್ಷೇತ್ರ

| Published : Dec 07 2024, 12:34 AM IST

ಸಾರಾಂಶ

ಇತಿಹಾಸ ಪ್ರಸಿದ್ಧಿ ವರಂಗ ಕ್ಷೇತ್ರದ ಪರಿಚಯ ಇನ್ನಿತರೆ ಸಂದರ್ಭಗಳಲ್ಲಿ ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಪ್ರವಾಸಿ ತಾಣ ಎಂದು ಪ್ರಕಟಿಸಿರುವುದರಿಂದ ಎಲ್ಲ ರೀತಿಯ ಜನರು ಇಲ್ಲಿಗೆ ಭೇಟಿ ನೀಡುತ್ತಿರುವುದರಿಂದ ಇಲ್ಲಿಯ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಹೆಬ್ರಿ ತಾಲೂಕಿನಲ್ಲಿರುವ ಶ್ರೀ ವರಂಗ ಜೈನ ಮಠವನ್ನು ಇನ್ನು ಮುಂದೆ ಪ್ರವಾಸಿ ತಾಣ ಎಂಬುದರ ಬದಲಾಗಿ ಧಾರ್ಮಿಕ ಯಾತ್ರಾ ಕ್ಷೇತ್ರ ಎಂದು ಕರೆಯಬೇಕು ಎಂದು ಅದರ ಆಡಳಿತ ನೋಡಿಕೊಳ್ಳುವ ಹುಂಚದ ಶ್ರೀ ಹೊಂಬುಜ ಜೈನ ಮಠ ತಿಳಿಸಿದೆ.ಜೈನರ ಪವಿತ್ರ ಕ್ಷೇತ್ರ ವರಂಗದಲ್ಲಿರುವ ಬಸದಿಗಳು ಮತ್ತು ಸ್ಮಾರಕಗಳು ಐತಿಹಾಸಿಕವಾಗಿ ಹುಂಚದ ಶ್ರೀ ಹೊಂಬುಜ ಜೈನ ಮಠದ ಶಾಖಾ ಮಠವಾಗಿರುವ ಶ್ರೀ ವರಂಗ ಜೈನ ಮಠದ ಅಧೀನ, ಆಡಳಿತ ಮಂಡಳಿ ಮತ್ತು ಸುಪರ್ದಿಯಲ್ಲಿದೆ. ವರಂಗವು ಕಳೆದ ಶತಮಾನದ ಹಿಂದಿನವರೆಗೂ ಜೈನ ಮಠವು ಜೈನಾಚಾರ್ಯರ ನೆಲೆಯಾಗಿ, ಧರ್ಮಜ್ಞಾನಗಳ ಕೇಂದ್ರವಾಗಿತ್ತು. ಇಂತಹ ಇತಿಹಾಸ ಪ್ರಸಿದ್ಧಿ ವರಂಗ ಕ್ಷೇತ್ರದ ಪರಿಚಯ ಇನ್ನಿತರೆ ಸಂದರ್ಭಗಳಲ್ಲಿ ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಪ್ರವಾಸಿ ತಾಣ ಎಂದು ಪ್ರಕಟಿಸಿರುವುದರಿಂದ ಎಲ್ಲ ರೀತಿಯ ಜನರು ಇಲ್ಲಿಗೆ ಭೇಟಿ ನೀಡುತ್ತಿರುವುದರಿಂದ ಇಲ್ಲಿಯ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತಿದೆ.

ಆದ್ದರಿಂದ ಮುಂದಿನ ದಿನಗಳಲ್ಲಿ ಶ್ರೀ ವರಂಗ ಜೈನ ಮಠದ ಕ್ಷೇತ್ರದ ಬಗ್ಗೆ ಪ್ರಕಟಿಸುವಾಗ ಪ್ರವಾಸಿ ತಾಣ ಎಂಬುದರ ಬದಲಾಗಿ ಧಾರ್ಮಿಕ ಯಾತ್ರಾ ಕ್ಷೇತ್ರ ಎಂಬುದಾಗಿ ಪ್ರಕಟಿಸುವಂತೆ ಮಠದ ಪ್ರಕಟಣೆ ತಿಳಿಸಿದೆ.