ಸಾರಾಂಶ
ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು 15 ಸಾವಿರ ರು. ನಗದು ಪುರಸ್ಕಾರ ಸಹಿತ ಸ್ವೀಕರಿಸಿ ಮಾತನಾಡಿದ ಶ್ರೀಧರ ಬನವಾಸಿ, ಸಾಹಿತ್ಯ ಚಟುವಟಿಕೆಯಲ್ಲಿ ಈ ಪ್ರಶಸ್ತಿ ಪ್ರೋತ್ಸಾಹಕ ಮಾತ್ರವಲ್ಲ ಮುಂದಿನ ದಾರಿಗೆ ಬೆಳಕಾಗಲಿದೆ ಎಂದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಇತಿಹಾಸ ಪ್ರಜ್ಞೆ, ಸೌಂದರ್ಯ ಪ್ರಜ್ಞೆ ಯ ಕೊರತೆಯಿಂದ ಸಮಾಜ ಬಳಲುತ್ತಿದೆ. ಇತಿಹಾಸವಿಲ್ಲದೇ ಬದುಕಿಲ್ಲ ಎನ್ನುವ ವಾಸ್ತವವನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ. ಶಿವರಾಮ ಕಾರಂತರ ಕೃತಿಗಳನ್ನು ಓದಿ ಸಾಹಿತ್ಯ ರಂಗಕ್ಕೆ ಪ್ರವೇಶಿಸುವ ಅವಕಾಶ ಪಡೆದ ನನಗೆ ಅವರ ಜಿಲ್ಲೆಯಲ್ಲೇ ಕಾರಂತ ಪ್ರಶಸ್ತಿ ಪಡೆದ ಬಳಿಕ ವರ್ಧಮಾನ ಪ್ರಶಸ್ತಿಯ ಗೌರವ ದೊರೆಯುತ್ತಿರುವುದು ಸಂತಸ ತಂದಿದೆ ಎಂದು ಆಗುಂಬೆ ಎಸ್. ನಟರಾಜ ಹೇಳಿದರು.ಅವರು ಸಮಾಜಮಂದಿರ ಸಭಾದ 77ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ನೀಡುವ ೨೦೨೩ರ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ, 25 ಸಾವಿರ ರು. ನಗದು ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.
ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು 15 ಸಾವಿರ ರು. ನಗದು ಪುರಸ್ಕಾರ ಸಹಿತ ಸ್ವೀಕರಿಸಿ ಮಾತನಾಡಿದ ಶ್ರೀಧರ ಬನವಾಸಿ, ಸಾಹಿತ್ಯ ಚಟುವಟಿಕೆಯಲ್ಲಿ ಈ ಪ್ರಶಸ್ತಿ ಪ್ರೋತ್ಸಾಹಕ ಮಾತ್ರವಲ್ಲ ಮುಂದಿನ ದಾರಿಗೆ ಬೆಳಕಾಗಲಿದೆ ಎಂದರು.ವರ್ಧಮಾನ ಪ್ರಶಸ್ತಿ ಪೀಠದ ಅಧ್ಯಕ್ಷ ಸಂಪತ್ ಡಿ. ಸಾಮ್ರಾಜ್ಯ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಸಮಾಜ ಮಂದಿರ ಸಭಾದ ಅಧ್ಯಕ್ಷ ಅಭಯಚಂದ್ರ ಜೈನ್ ಶುಭ ಹಾರೈಸಿದರು. ಪೀಠದ ಪ್ರಧಾನ ನಿರ್ದೇಶಕ ಡಾ.ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಹ ನಿರ್ದೇಶಕ ಸದಾನಂದ ನಾರಾವಿ ಸಂದೇಶ ವಾಚಿಸಿದರು. ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ನಮಿರಾಜ ಶೆಟ್ಟಿ ವಂದಿಸಿದರು.