ಸಾರಾಂಶ
ಶ್ರೀ ವರ್ಧಮಾನ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ 35ನೇ ವಾರ್ಷಿಕ ಸರ್ವ ಸಾಧಾರಣ ಸಭೆ
ಕನ್ನಡಪ್ರಭ ವಾರ್ತೆ ಅಥಣಿ
ಪಾರದರ್ಶಕ ಆಡಳಿತ ಮತ್ತು ಪ್ರಾಮಾಣಿಕ ಸೇವೆಯಿಂದ ಸಹಕಾರಿ ಸಂಘ ಬೆಳವಣಿಗೆ ಹೊಂದಲು ಸಾಧ್ಯ. ಯಾವುದೇ ಸಹಕಾರಿ ಸಂಘ ಯಶಸ್ವಿಯಾಗಿ ಮುನ್ನಡೆಯಲು ಸಂಘದ ಸದಸ್ಯರ ಸಹಭಾಗಿತ್ವ ಬಹುಮುಖ್ಯ ಎಂದು ಶ್ರೀ ವರ್ಧಮಾನ ಅರ್ಬನ್ ಕೋ ಆಫ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಟಿ.ಕೆ.ಪಾಟೀಲ ಹೇಳಿದರು.ಪಟ್ಟಣದ ಗುಜರಾತಮಂಗಲ ಸಭಾಂಗಣದಲ್ಲಿ ಶ್ರೀ ವರ್ಧಮಾನ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ 35ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸಹಕಾರಿ ಸಂಘವು ಹರಿಯುವ ನೀರಿನಂತೆ ಯಾವತ್ತು ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡುವ ಮೂಲಕ ಪ್ರಗತಿಯತ್ತ ಮುನ್ನಡೆಯುತ್ತಿದೆ. 996 ಸದಸ್ಯರನ್ನು ಹೊಂದಿದ್ದು, ₹248.40 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು, ₹275.60 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹150.34 ಕೋಟಿ ಸಾಲ ವಿತರಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ₹2.32 ಕೋಟಿ ಲಾಭ ಹೊಂದಿದೆ. ಸಂಘದ ಸದಸ್ಯರಿಗೆ ಶೇ.24ರಷ್ಟು ಡಿವಿಡೆಂಡ್ ವಿತರಿಸಲಾಗಿದೆ ಎಂದು ಹೇಳಿದರು.
ವ್ಯವಸ್ಥಾಪಕ ಬಾಹುಬಲಿ ಉಪಾಧ್ಯೆ ಮಾತನಾಡಿ ಅನೇಕ ಸಹಕಾರಿ ಸಂಘಗಳು ವಿವಿಧಡೆ ಶಾಖೆಗಳನ್ನು ಆರಂಭಿಸುವ ಮೂಲಕ ಆರ್ಥಿಕ ವಹಿವಾಟು ನಡೆಸುತ್ತಿವೆ. ಆದರೆ ನಮ್ಮ ಸಹಕಾರಿ ಕಳೆದ 35 ವರ್ಷಗಳಿಂದ ಯಾವುದೇ ಶಾಖೆಗಳನ್ನು ಆರಂಭಿಸದೆ ಒಂದೇ ಸಂಘದ ಕಚೇರಿಯ ಮೂಲಕ ಕೋಟ್ಯಂತರ ರುಪಾಯಿ ಆರ್ಥಿಕ ವಹಿವಾಟು ನಡೆಸುತ್ತಿರುವದು ನಮ್ಮೆಲ್ಲರಿಗೆ ಹೆಮ್ಮೆ ಎಂದರು. ಈ ವೇಳೆ ಸಂಘದ ಉಪಾಧ್ಯಕ್ಷ ಬಿ.ಬಿ.ಹಲ್ಯಾಳ, ನಿರ್ದೇಶಕರಾದ ಬಿ.ಎಂ.ಪಾಟೀಲ, ಎ.ಎ.ಯಲಿಗೌಡ, ಆರ್.ಪಿ.ಬಿ.ಪಾಟೀಲ, ಜೆ.ಎ.ಪಾಟೀಲ, ಆರ್.ಪಿ.ಸುಗ್ಗನ್ನವರ, ಬಿ.ಎಂ.ನಾಟೇಕರ, ಎಚ್.ಕೆ.ಕುಂಬಾರ, ಆರ್.ಆರ್.ಕಾಂಬಳೆ, ಎಸ್.ಆರ್.ಪಾಟೀಲ, ಎಚ್.ಎಸ್.ಜೋಶಿ ಸೇರಿದಂತೆ ಸಂಘದ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು. ಬಾಹುಬಲಿ ಉಪಾಧ್ಯೆ ಸ್ವಾಗತಿಸಿದರು. ರಮೇಶ ಹಿಪ್ಪರಗಿ ನಿರೂಪಿಸಿ, ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))