ಸಾರಾಂಶ
ಡಿ. ದೇವರಾಜ ಅರಸು 110ನೇ ಜನ್ಮದಿನದ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯಲ್ಲಿ ಬುಧವಾರ ಜಿಲ್ಲಾ ಅಹಿಂದ ಸಂಘಟನೆ ಹಾಗೂ ಸಹಮತ ವೇದಿಕೆ ವತಿಯಿಂದ ನಗರದ ಲಯನ್ಸ್ ಕ್ಲಬ್ ನ ಸಭಾಂಗಣದಲ್ಲಿ ನಡೆದ ಡಿ.ದೇವರಾಜು ಅರಸು ಅವರ 110 ನೇ ಜನ್ಮದಿನದ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.ವೈದ್ಯ ಸಾಹಿತಿ ಡಾ ಕೆ.ಬಿ.ಸೂರ್ಯಕುಮಾರ್, ಪ್ರಗತಿಪರ ಚಿಂತಕ ಕುಶಾಲನಗರದ ವಿ.ಪಿ.ಶಶಿಧರ್, ಕಾರ್ಮಿಕ ಮುಖಂಡ ಡಿ.ಎಸ್.ನಿರ್ವಾಣಪ್ಪ, ನಗರಸಭೆಯ ಪೌರ ಸೇವಾ ಹಿರಿಯ ಸಿಬ್ಬಂದಿ ರಾಮು, ಪಾಲಿಬೆಟ್ಟದ ಕಾಟ್ರಕೊಲ್ಲಿಯ ಸಮಾಜ ಸೇವಕ ಎರ್ಮು ಹಾಜಿ, ನಗರಸಭೆಯ ಮಾಜಿ ದಫೇದಾರ್ ಜಿ.ಎ ಚಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕುಶಾಲನಗರ ವಲಯದ ಸಂಯೋಜಕಿ ಲೀಲಾವತಿ, ನಾಗರಹೊಳೆಯ ಬುಡಕಟ್ಟು ಜನಾಂಗದ ಮುಖಂಡ ಶಿವು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅತಿಥಿಗಳು ಸನ್ಮಾನಿಸಿ ಅಭಿನಂದಿಸಿದರು. ವಿದ್ಯಾರ್ಥಿಗಳ ಪರವಾಗಿ ವಿದ್ಯಾರ್ಥಿಗಳ ಪೋಷಕರಿಗೆ ಸನ್ಮಾನಿಸಲಾಯಿತು.