ಕೊಡಗಿನ ಸಿಎನ್‌ಸಿ ಸಂಘಟನೆ ವಿರುದ್ಧ ಕ್ರಮಕ್ಕೆ ವಿವಿಧ ಸಂಘಟನೆಗಳ ಆಗ್ರಹ

| Published : Mar 13 2025, 12:52 AM IST

ಕೊಡಗಿನ ಸಿಎನ್‌ಸಿ ಸಂಘಟನೆ ವಿರುದ್ಧ ಕ್ರಮಕ್ಕೆ ವಿವಿಧ ಸಂಘಟನೆಗಳ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗಿನ ಸಿಎನ್‌ಸಿ ಸಂಘಟನೆ ಅಧ್ಯಕ್ಷ ನಂದಿನೆರವಂಡನಾಚಪ್ಪ ಅವರು ಶಾಸಕರ ವಿರುದ್ಧ ತೇಜೋವಧೆ ಹೇಳಿಕೆಗಳನ್ನು ನೀಡಿದ್ದರಲ್ಲದೆ, ನಟಿ ರಶ್ಮಿಕಾ ಮಂದಣ್ಣ ಅವರ ಹೆಸರನ್ನು ಬಳಸಿಕೊಂಡು ಕೆಲವು ಕನ್ನಡ ವಿರೋಧಿ ಸಂಘಟನೆಗಳಿಂದ ಶಾಸಕರ ವಿರುದ್ಧ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾನೂನು ಸುವ್ಯವಸ್ಥೆ ಹದಗೆಡಿಸಿ ಶಾಂತಿ ಭಂಗ ಮಾಡುತ್ತಿರುವ ಕೊಡಗಿನ ಸಿಎನ್‌ಸಿ ಸಂಘಟನೆ ಅಧ್ಯಕ್ಷ ನಂದಿನೆರವಂಡನಾಚಪ್ಪ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಕಳೆದ ವಾರ ಶಾಸಕ ಪಿ. ರವಿಕುಮಾರ್ ಅವರು ವಿಧಾನಸೌಧದ ಮುಂಭಾಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಸಮೂಹ ಮಾಧ್ಯಮ, ಚಲನಚಿತ್ರ ನಟರು ಭಾಗವಹಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ವಿರುದ್ಧವಾಗಿ ಚಿತ್ರನಟ ಚಂದ್ರಚೂಡ್ ಅವರು ಶಾಸಕರ ವಿರುದ್ಧ ಘೇರಾವ್ ಮಾಡುವ ಬೆದರಿಕೆ ಒಡ್ಡಿದ್ದರೂ ಶಾಸಕರು ಮೌನ ವಹಿಸಿದ್ದರು.

ಆದರೆ, ಕೊಡಗಿನ ಸಿಎನ್‌ಸಿ ಸಂಘಟನೆ ಅಧ್ಯಕ್ಷ ನಂದಿನೆರವಂಡನಾಚಪ್ಪ ಅವರು ಶಾಸಕರ ವಿರುದ್ಧ ತೇಜೋವಧೆ ಹೇಳಿಕೆಗಳನ್ನು ನೀಡಿದ್ದರಲ್ಲದೆ, ನಟಿ ರಶ್ಮಿಕಾ ಮಂದಣ್ಣ ಅವರ ಹೆಸರನ್ನು ಬಳಸಿಕೊಂಡು ಕೆಲವು ಕನ್ನಡ ವಿರೋಧಿ ಸಂಘಟನೆಗಳಿಂದ ಶಾಸಕರ ವಿರುದ್ಧ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವುದನ್ನು ಖಂಡಿಸಿದರು.

ಕರ್ನಾಟಕ ಏಕೀಕರಣ ವ್ಯವಸ್ಥೆಗೆ ಮಾರಕವಾದಂತಹ ಕೊಡಗು ಪ್ರತ್ಯೇಕ ರಾಜ್ಯ ಹೋರಾಟ ವಹಿಸಿದ್ದ ಕೊಡಗಿನ ಸಿಎನ್‌ಸಿ ಸಂಘಟಕ ನಂದಿನರವಂಡನಾಚಪ್ಪ ಅವರು ಕೆಲವು ಕನ್ನಡ ವಿರೋಧಿ ಸಂಘಟನೆಗಳಿಂದ ರಶ್ಮಿಕಾ ಮಂದಣ್ಣ ಅವರನ್ನು ಮುಂದಿಟ್ಟುಕೊಂಡು ಕನ್ನಡ ನೆಲ, ಜಲ ಭಾಷೆ ಹಾಗೂ ಕನ್ನಡ ಚಿತ್ರರಂಗ ಉಳಿಸುವ ಹಿತದೃಷ್ಠಿಯಿಂದ ಶಾಸಕ ರವಿಕುಮಾರ್ ಅವರ ಹೇಳಿಕೆಯನ್ನು ತಿರುಚಿ ಅವರ ವಿರುದ್ಧ ಕೆಲ ಸಂಘಟನೆಗಳನ್ನು ಎತ್ತಿಕಟ್ಟಿ ಶಾಸಕರ ತೇಜೋವಧೆ ಮಾಡಿ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಇನ್ನು ಮುಂದೆ ಇಂತಹ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ದ್ಯಾಪಸಂದ್ರ ಉಮೇಶ್, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ. ಜಯರಾಂ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸುನಿಲ್, ದೊರೆಸ್ವಾಮಿ, ಸತೀಶ್, ಓಂಕೇಶವ, ಮನು, ಯೋಗೇಶ್ ಆನಂದ್ ಇತರರು ಪ್ರತಿಭಟನೆಯಲ್ಲಿದ್ದರು.