ಇಂದಿನಿಂದ ಫಾದರ್‌ ಮುಲ್ಲರ್‌ ಸಂಸ್ಥೆಗಳಲ್ಲಿ ವಿವಿಧ ಕಾರ್ಯಕ್ರಮ

| Published : Nov 15 2024, 12:34 AM IST

ಇಂದಿನಿಂದ ಫಾದರ್‌ ಮುಲ್ಲರ್‌ ಸಂಸ್ಥೆಗಳಲ್ಲಿ ವಿವಿಧ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ದೇರಳಕಟ್ಟೆಯ ಫಾದರ್‌ ಮುಲ್ಲರ್‌ ಹೋಮಿಯೋಪತಿ ಫಾರ್ಮಾಸುಟಿಕಲ್‌ ವಿಭಾಗದ 20ನೇ ವರ್ಷಾಚರಣೆ ನ.16ರಂದು ಬೆಳಗ್ಗೆ 10 ಗಂಟೆಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ರೆ.ಫಾ. ನೆಲ್ಸನ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಕಂಕನಾಡಿಯಲ್ಲಿರುವ ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜಿನ 25 ವರ್ಷಗಳ ಶ್ರೇಷ್ಠತೆಯ ಕಾರ್ಯಕ್ರಮ ಸೇರಿದಂತೆ ಫಾದರ್‌ ಮುಲ್ಲರ್‌ ಚಾರಿಟೆಬಲ್‌ ಸಂಸ್ಥೆ ಆಶ್ರಯದಲ್ಲಿ ನ.15ರಿಂದ 23ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ರೆ.ಫಾ. ರಿಚ್ಚರ್ಡ್‌ ಕುವೆಲ್ಲೋ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.15ರಂದು ಸಂಜೆ 5.30ಕ್ಕೆ ಕ್ಯಾಂಪಸ್ಸಿನ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯಲಿದೆ ಎಂದರು.

ಮೆಡಿಕಲ್‌ ಕಾಲೇಜಿನ ಆಡಳಿತಾಧಿಕಾರಿ ರೆ.ಫಾ. ಅಜಿತ್‌ ಮಿನೇಜಸ್‌ ಮಾತನಾಡಿ, ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ರುದ್ರಪ್ಪ ಪಾಟೀಲ್‌, ಮೈಸೂರು ಡಯಾಸಿಸ್‌ನ ಅಪೊಸ್ಟೊಲಿಕ್‌ ಆಡಳಿತಾಧಿಕಾರಿ ರೆ.ಫಾ. ಡಾ. ಬೆರ್ನಾಡ್‌ ಮೊರಾಸ್‌, ಫಾದರ್‌ ಮುಲ್ಲರ್‌ ಚಾರಿಟೆಲ್‌ ಸಂಸ್ಥೆಯ ಮಾಜಿ ನಿರ್ದೇಶಕ ರೆ.ಡಾ. ಅಲೋಶಿಯಸ್‌ ಪೌಲ್‌ ಡಿಸೋಜ ಭಾಗವಹಿಸಲಿದ್ದು, ಮಂಗಳೂರು ಬಿಷಪ್‌ ರೆ.ಡಾ. ಪೀಟರ್‌ ಪೌಲ್‌ ಸಲ್ದಾನಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

21, 22ರಂದು ‘ರುಬಿಕಾನ್‌’ ಸಮ್ಮೇಳನ:

ದೇರಳಕಟ್ಟೆಯ ಫಾದರ್‌ ಮುಲ್ಲರ್‌ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ 40 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ರುಬಿಕಾನ್‌’ನ್ನು ನ. 21, 22ರಂದು ಕಂಕನಾಡಿಯ ಫಾ. ಮುಲ್ಲರ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ. ನ.21ರಂದು ಬೆಳಗ್ಗೆ 9.30ಕ್ಕೆ ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಸಂಸ್ಥೆಯ ನಿಯೋಜಿತ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ಪೌಸ್ತಿನ್‌ ಎಲ್‌. ಲೋಬೊ ತಿಳಿಸಿದರು.

16ರಂದು ಫಾರ್ಮಾಸುಟಿಕಲ್‌ 20ನೇ ವರ್ಷಾಚರಣೆ: ದೇರಳಕಟ್ಟೆಯ ಫಾದರ್‌ ಮುಲ್ಲರ್‌ ಹೋಮಿಯೋಪತಿ ಫಾರ್ಮಾಸುಟಿಕಲ್‌ ವಿಭಾಗದ 20ನೇ ವರ್ಷಾಚರಣೆ ನ.16ರಂದು ಬೆಳಗ್ಗೆ 10 ಗಂಟೆಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ರೆ.ಫಾ. ನೆಲ್ಸನ್‌ ತಿಳಿಸಿದರು.18ರಂದು ತುಂಬೆ ಕಾಲೇಜು ಉದ್ಘಾಟನೆ: ತುಂಬೆಯ ಫಾದರ್‌ ಮುಲ್ಲರ್‌ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಆರಂಭಗೊಂಡಿರುವ ಅಲೈಡ್‌ ಹೆಲ್ತ್‌ ಸೈನ್ಸ್‌ ಕಾಲೇಜು ನ.18ರಂದು ಉದ್ಘಾಟನೆಗೊಳ್ಳಲಿದೆ. ಇಮೇಜಿಂಗ್‌ ಟೆಕ್ನಾಲಜಿ ಹಾಗೂ ಬಿಎಸ್ಸಿ ಇನ್‌ ಎಟಿ ಮತ್ತು ಒಟಿ ಕೋರ್ಸ್‌ಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದ್ದು, ನ.30ರವರೆಗೆ ಆಸಕ್ತ ಅರ್ಹ ವಿದ್ಯಾರ್ಥಿಗಳಿಗೆ ಸೇರ್ಪಡೆಗೆ ಅವಕಾಶವಿದೆ ಎಂದು ಕಾಲೇಜಿನ ನೂತನ ಪ್ರಾಂಶುಪಾಲ ಪ್ರೊ. ಶಿವಶಂಕರ್‌ ತಿಳಿಸಿದರು.