ಸಾರಾಂಶ
ಪಟ್ಟಣದ ವಿವಿಧ ಭಾಗಗಳಲ್ಲಿ 98 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗಳಿಗೆ ಗುದ್ದಲಿ ಪೂಜೆ ನೆರವೇರಿಸುತ್ತಿದ್ದು ಈ ಹಿಂದೆ ಮುಖ್ಯಮಂತ್ರಿಗಳು ತುಮಕೂರಿನಲ್ಲಿ ಶಂಕುಸ್ಥಾಪನೆ ಮಾಡಿದ್ದಾರೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳದರು.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಪಟ್ಟಣದ ವಿವಿಧ ಭಾಗಗಳಲ್ಲಿ 98 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗಳಿಗೆ ಗುದ್ದಲಿ ಪೂಜೆ ನೆರವೇರಿಸುತ್ತಿದ್ದು ಈ ಹಿಂದೆ ಮುಖ್ಯಮಂತ್ರಿಗಳು ತುಮಕೂರಿನಲ್ಲಿ ಶಂಕುಸ್ಥಾಪನೆ ಮಾಡಿದ್ದಾರೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳದರು.ಪಟ್ಟಣದ ಜೋಗಿಹಳ್ಳಿ ಗೇಟ್‌ಬಳಿ ೨೯.೨೪ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇಂದು ಕಾರ್ಯರಂಭಕ್ಕೆ ಚಾಲನೆ ನೀಡುತ್ತಿದ್ದು ಸು.೩೦ರಿಂದ ೪೦ವರ್ಷಗಳ ಬಾಳಿಕೆ ಬರುವಂತಹ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು ಸಾರ್ವಜನಿಕರು ಇದನ್ನು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಚಿಕ್ಕನಾಯಕನಹಳ್ಳಿಯ ೧೫೦ಎ ರಸ್ತೆಯಿಂದ ನಮ್ಮ ಗುಬ್ಬಿ ಗಡಿ ಭಾಗದವರೆಗೆ ೧೧.೫ ಕಿ.ಮೀ ಈ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಈ ರಸ್ತೆಯ ಕಾಮಗಾರಿ ವೇಳೆ ರಸ್ತೆಯ ಅಕ್ಕಪಕ್ಕದ ರೈತರು ಸಹಕಾರ ನೀಡಬೇಕು. ಒತ್ತುವರಿ ಏನಾದರು ಆಗಿದ್ದರೆ ದಯಮಾಡಿ ರಸ್ತೆ ಮಾಡಲು ಅವಕಾಶ ಮಾಡಿಕೊಡಿ. ಈ ರಸ್ತೆಯನ್ನು ರೈತರು ತಮ್ಮ ಪೈಪ್‌ಲೈನ್‌ಗಳಿಗೆ ಅಗೆಯದೇ ಈಗಲೇ ಅದಕ್ಕೆ ಪೈಪ್‌ಗಳನ್ನು ಹಾಕಿಕೊಳ್ಳಿ ಇದನ್ನು ಅಗೆದು ಹಾಳು ಮಾಡಬೇಡಿ ಎಂದರು. ಗುಣಮಟ್ಟದಲ್ಲಿ ಯಾವುದೇ ರಾಜಿ ಇರದಂತೆ ಜೋಗಿಹಳ್ಳಿ, ಹೊನ್ನೇಬಾಗಿ ನಾಗರೀಕರು ಗಮನಹರಿಸಿ ಎಂದ ಅವರು, ಈ ರಸ್ತೆಯಲ್ಲಿ ಮೈನಿಂಗ್‌ನ ಲಾರಿಗಳು ಹೆಚ್ಚಾಗಿ ಓಡಾಡುತ್ತಿದ್ದು ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಸಾರ್ವಜನಿಕರು ಇದನ್ನು ಬಳಸಿಕೊಳ್ಳಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ ಎಚ್.ಆರ್.ಶಶಿಧರ್ ಮಾತನಾಡಿ, ಬಹಳ ವರ್ಷಗಳ ನಮ್ಮ ಬೇಡಿಕೆಯಾದ ರಸ್ತೆ ಕಾಮಗಾರಿಗಳು ಇಂದು ನಡೆಯುತ್ತಿವೆ. ಇದು ನಮ್ಮ ಭಾಗದ ಅಭಿವೃದ್ಧಿಯನ್ನು ತೋರಿಸುತ್ತದೆ. ರಸ್ತೆಗಳು ಚೆನ್ನಾಗಿದ್ದರೆ ಎಲ್ಲದಕ್ಕೂ ಅನುಕೂಲವಾಗುತ್ತದೆ. ಇಂದು ಗಣಿಭಾದಿತ ಪ್ರದೇಶಗಳಲ್ಲಿ ಸುಮಾರು ಕಿಲೋಮೀಟರ್ ರಸ್ತೆ ಕಾಮಗಾರಿಳು ನಡೆಯುತ್ತಿದ್ದು ಉತ್ತಮವಾದ ಗುಣಮಟ್ಟದ ರಸ್ತೆಗಳಾಗಿವೆ. ಈ ಬಗ್ಗೆ ಸಾರ್ವಜನಿಕರು ಹೆಚ್ಚು ಗಮನಹರಿಸಬೇಕು ಹಾಗೂ ಅಕ್ಕಪಕ್ಕದ ರೈತರು ರಸ್ತೆನಿರ್ಮಿಸಲು ಸಹಕಾರ ನೀಡಬೇಕು ಎಂದರು. ಪುರಸಭಾಧ್ಯಕ್ಷ ಸಿ ಎಚ್.ದಯಾನಂದ್, ಉಪಾಧ್ಯಕ್ಷ ಸಿ.ಎಂ.ರಾಜಶೇಖರ್, ಸ್ಥಾಯಿಸಮಿತಿ ಅಧ್ಯಕ್ಷ ಸಿ.ಡಿ.ಸುರೇಶ್ ಲೋಕೋಪಯೋಗಿ ಇಲಾಖೆಯ ಎಇಇ ತಿಮ್ಮಪ್ಪ ಸೇರಿದಂತೆ ಸದಸ್ಯರುಗಳಾದ ರೇಣುಕಮ್ಮ,ಪೂರ್ಣಿಮಾ, ಮಂಜುನಾಥಗೌಡ, ಮಲ್ಲಿಕಾರ್ಜುನ್, ಮಲ್ಲೇಶಯ್ಯ ಮಾಜಿ ಸದಸ್ಯರುಗಳಾದ ಸುರೇಶ್, ದೊರೆಮುದ್ದಯ್ಯ, ಸಿ.ಹೆಚ್.ಪ್ರಕಾಶ್ ಮತ್ತಿತರರು ಇದ್ದರು.