ಸಾರಾಂಶ
ರಾಯಚೂರು ತಾಲೂಕಿನ ಗಧಾರ-ಯರಗೇರಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆ ಭಾರಿ ಮಳೆಯಿಂದ ಮುಳುಗಡೆಯಾಗಿರುವುದು. ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ನೀರು ನುಗ್ಗಿವೆ.
ರಾಯಚೂರು: ನಗರ ಸೇರಿ ಜಿಲ್ಲೆ ವಿವಿಧೆಡೆ ಸುರಿದ ಭಾರೀ ಮಳೆಯಿಂದಾಗಿ ಕಳೆದ ನಾಲ್ಕೈದು ದಿನಗಳಿಂದ ತೀವ್ರ ಸಕೆ ಅನುಭವಿಸಿದ ಜನರಿಗೆ ತಂಪು ಮುದ ನೀಡಿತು. ತಾಲೂಕಿನ ಗಾಣಧಾಳದಲ್ಲಿ 181 ಮಿಮೀ ಮಳೆ ದಾಖಲೆಯಾಗಿದೆ.
ಸೋಮವಾರ ತಡರಾತ್ರಿ ಶುರುವಾರ ಮಳೆ ಮಂಗಳವಾರ ಬೆಳಗಿನ ಜಾವದವರೆಗೆ ಸುರಿದಿದ್ದು, ರಾಯಚೂರು ತಾಲೂಕಿನ ಗಾಣಧಾಳದಲ್ಲಿ ಅತಿ ಹೆಚ್ಚು 181 ಮಿಮೀ ದಾಖಲೆ ಮಳೆ ಸುರಿದಿದ್ದು, ಇದರಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿದಿದ್ದು, ಹೊಲಗಳಿಗೆ ನೀರು ನುಗ್ಗಿದೆ. ವರುಣನ ಅಬ್ಬರಕ್ಕೆ ತಾಲೂಕಿನ ಗಧಾರ ಗ್ರಾಮದ ಹಳ್ಳ ತುಂಬಿ ಹರಿದಿದ್ದು, ಗಧಾರ -ಯರಗೇರಾಕ್ಕೆ ಹೋಗುವ ಮಾರ್ಗದ ಸಂಕರ್ಪ ಕಡಿತಗೊಂಡು, ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಇದರ ಜೊತೆಗೆ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ಹತ್ತಿ ಹಾಗೂ ಇತರ ಬೆಳೆ ಹಾನಿಗೊಂಡಿವೆ. ಭಾರಿ ಮಳೆಯಿಂದ ಹಲವೆಡೆ ಸೇತುವೆ ಮೇಲ್ಭಾಗದಲ್ಲಿ ನೀರು ಹರಿಯುವ ಕಾರಣ ಸಂಚಾರ ಸ್ಥಗಿತವಾಗಿತ್ತು.ಇನ್ನೂ ಸಾಕಷ್ಟು ಕಡೆ ಮಳೆಯಿಂದ ರಾತ್ರಿ ವಿದ್ಯುತ್ ಕಡಿತಗೊಂಡಿದ್ದು, ಜನ ಪರದಾಡುವಂತಾಯಿತು. ವಿವಿಧ ಗ್ರಾಮಗಳಲ್ಲೂ ಹಳ್ಳಗಳು ತುಂಬಿ ಹರಿದ ಪರಿಣಾಮ ಪರದಾಡುವಂತಾಯಿತು. ಇನ್ನೂ ಮಂತ್ರಾಲಯದಲ್ಲೂ ಮಳೆ ಸುರಿದ ಪರಿಣಾಮ ರಾಯರ ಆರಾಧನೆಗೆ ಆಗಮಿಸಿದ ಭಕ್ತರಿಗೆ ರಾತ್ರಿ ಅಸ್ತವ್ಯಸ್ತಗೊಂಡಿತು. ಕೊನೆಗೆ ಮಠದ ಪ್ರಾಂಗಣದಲ್ಲಿ ಮಲಗಲು ಅನುವು ಮಾಡಿಕೊಡಲಾಯಿತು.