ಮುಂದುವರೆದ ವರುಣನ ಆರ್ಭಟ- ಹಲವೆಡೆ ಜನ ಜೀವನ ಅಸ್ತವ್ಯಸ್ಥ

| Published : May 21 2024, 01:48 AM IST / Updated: May 21 2024, 12:41 PM IST

ಮುಂದುವರೆದ ವರುಣನ ಆರ್ಭಟ- ಹಲವೆಡೆ ಜನ ಜೀವನ ಅಸ್ತವ್ಯಸ್ಥ
Share this Article
  • FB
  • TW
  • Linkdin
  • Email

ಸಾರಾಂಶ

ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳು ಕೆಟ್ಟಿ ನಿಂತಿದ್ದರಿಂದ ಅಣ್ಣಪ್ಪಸ್ವಾಮಿ ದೇವಾಲಯದ ಬಳಿ ಟ್ರಾಫಿಕ್‌ ಜಾಮ್‌ ಆಗಿರುವುದು.

 ಚಿಕ್ಕಮಗಳೂರು :  ಕಳೆದ ಒಂದು ವಾರದಿಂದ ಜಲ್ಲಾದ್ಯಂತ ಧಾರಕಾರ ಮಳೆ ಸುರಿಯುತ್ತಿದ್ದು, ಸೋಮವಾರವೂ ಮುಂದುವರೆದ ಪರಿಣಾಮ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಭಾನುವಾರ ಸಂಜೆಯಿಂದ ಸುರಿಯುತ್ತಿರುವ ಮಳೆಗೆ ಮಲೆನಾಡು ಹಾಗೂ ಕರಾವಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಕಎಸ್‌ಆರ್‌ಟಿಸಿ ಬಸ್‌ ಕೆಟ್ಟು ನಿಂತ ಪರಿಣಾಮ ನೂರಾರು ಪ್ರಯಾಣಿಕರು ಮಳೆಯಲ್ಲಿ ಸಿಲುಕಿದ ಪ್ರಸಂಗ ನಡೆದಿದೆ. ಅಲ್ಲದೆ ಮಳೆಗೆ ದಾರಿ ಕಾಣದೆ ವಾಹನ ಸವಾರರು ರಸ್ತೆ ಬದಿ ವಾಹನ ನಿಲ್ಲಿಸಿದ ಪರಿಣಾಮ ಸಂಚಾರ ದಟ್ಟಣೆಯಿಂದ ಪ್ರಯಾಣಿಕರು ಬವಣೆ ಅನುಭವಿಸಿದರು.

ಚಾರ್ಮಾಡಿ ಘಾಟಿನ ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ಮಳೆಯ ನಡುವೆ ಎರಡು ಬಸ್‌ ಕೆಟ್ಟು ನಿಂತ ಪರಿಣಾಮ ಕಿಲೋಮಿಟರ್‌ಗಳಷ್ಟು ಸಂಚಾರ ದಟ್ಟಣೆ ಒಂದಡೆಯಾದರೆ ಮಂಗಳೂರಿಗೆ ರೋಗಿಯನ್ನು ಒಯ್ಯು

ಹೀಗಾಗಿ ಬೆಳಗಿನ ಜಾವದಿಂದ ನೂರಾರು ವಾಹನಗಳು ನಿಂತಲ್ಲೇ ನಿಂತವು. ಮಂಗಳೂರಿಗೆ ರೋಗಿಯನ್ನು ಒಯ್ಯುತ್ತಿದ್ದ ಒಂದು ಆಂಬ್ಯುಲೆನ್ಸ್ ಟ್ರಾಫಿಕ್ ನಡುವೆ ಸಿಲುಕಿಕೊಂಡಿತು. ಟ್ರಾಫಿಕ್ ಕ್ಲಿಯರ್ ಮಾಡಲು ಬಣಕಲ್, ಮೂಡಿಗೆರೆ ಪೊಲೀಸರು ಹರಸಾಹಸಪಟ್ಟರು.

ಚಿಕ್ಕಮಗಳೂರು ಜಿಲ್ಲೆಯ ಹಲವಡೆ ಮಳೆಯ ಆರ್ಭಟ ಮುಂದುವರಿದ್ದಿದ್ದು, ಚಿಕ್ಕಮಗಳೂರು, ಕೊಪ್ಪ, ಕಡೂರು, ಕಳಸಾಪುರ, ಪಂಚನಹಳ್ಳಿ, ಬೀರೂರು, ಶಿವನಿ, ಬೆಳವಾಡಿ, ಮೂಡಿಗೆರೆ, ಹಿರೇನಲ್ಲೂರು, ಚಿಕ್ಕನಲ್ಲೂರು, ಭಾಗದಲ್ಲಿ ಭಾರಿ ಮಳೆಯಾಗಿದ್ದು, ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ಸ್ಥಗಿತವಾಗಿದೆ.

ಚಿಕ್ಕಮಗಳೂರು ತಾಲೂಕಿನ ಈಶ್ವರಹಳ್ಳಿ ಗ್ರಾಮದಲ್ಲಿ ರೈತ ಬಸವರಾಜು ಎಂಬವರಿಗೆ ಸೇರಿದ 4 ಎಕರೆ ಬಾಳೆ ತೋಟ ಭಾರಿ ಗಾಳಿ ಮಳೆಗೆ ನೆಲಕಚ್ಚಿದೆ. ಕೇವಲ ಒಂದು ತಿಂಗಳಲ್ಲಿ ಕಟಾವಿಗೆ ಬರಬೇಕಿದ್ದ ಬೆಳೆ ನಾಶವಾಗಿದ್ದು, ಲಕ್ಷಾಂತರ ರು. ಬೆಳೆ ನಷ್ಟವಾಗಿ ರೈತ ಕಂಗಾಲಾಗಿದ್ದಾರೆ.

ಚಿಕ್ಕಮಗಳೂರಿನ ಬಯಲು ಸೀಮೆ ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಭಾರಿ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ರಾತ್ರಿಯಿಡೀ ಸುರಿದ ಮಳೆಗೆ ಹೊಂಗೆ ಹಳ್ಳ ಉಕ್ಕಿ ಹರಿಯುತ್ತಿದ್ದು, ಅಜ್ಜಂಪುರ ತಾಲೂಕಿನ ಐತಿಹಾಸಿಕ ಶಿವನಿ ಕೆರೆಗೆ ಭಾರಿ ಪ್ರಮಾಣದ ನೀರು ಬಂದಿದೆ. ಹೊಂಗೆ ಹಳ್ಳದ ಸುತ್ತಮುತ್ತಲಿನ ಕೆಲವು ತೋಟಗಳು ಜಲಾವೃತವಾಗಿವೆ. ಸೇತುವೆ ರಸ್ತೆಯ ಮೇಲೆ ಹಳ್ಳದ ನೀರು ಹರಿಯಿತು.

ಭಾನುವಾರ ರಾತ್ರಿ ವಿಡೀ ಮಳೆ ಬಂದಿದ್ದು, ಬೆಳಗ್ಗೆ ಬಿಡುವು ನೀಡಿತಾದರೂ ಮೋಡ ಕವಿದ ವಾತಾವರಣ ಆಗಾಗ ಮಳೆ ಬರುತ್ತಲೇ ಇತ್ತು. ಮಧ್ಯಾಹ್ನದ ನಂತರ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿದಿದೆ.

ಜಿಲ್ಲೆಯ ವಿವಿಧೆಡೆ ಬಿದ್ದ ಮಳೆ: ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ನಗರದಲ್ಲಿ 19.4 ಮಿ.ಮೀ. ಮಳೆಯಾಗಿದ್ದರೆ, ಲಕ್ಯಾದಲ್ಲಿ 14.7 ಮಿ.ಮೀ., ವಸ್ತಾರೆ- 16.4, ಕಡೂರು- 14.5, ಬೀರೂರು- 13.5, ಹಿರೇನಲ್ಲೂರು- 22.4, ಯಗಟಿ- 12.8, ಕೊಪ್ಪ- 13.4, ಮೂಡಿಗೆರೆ- 12.8, ಎನ್‌.ಆರ್‌.ಪುರ- 6, ಬಾಳೆಹೊನ್ನೂರು- 15.1, ತರೀಕೆರೆ- 3.1, ಅಜ್ಜಂಪುರದಲ್ಲಿ 25.2 ಮಿ.ಮೀ. ಮಳೆಯಾಗಿದೆ.