ಸಾರಾಂಶ
ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಎನ್.ಟಿ. ವಸಂತ್ ಕುಮಾರ್, ಸಂಘದ ಉಪಾಧ್ಯಕ್ಷ ಜಯರಾಮಣ್ಣ ಹಾಗೂ ನಿರ್ದೇಶಕರಾದ ತಿರುಪತಿಹಳ್ಳಿ ಧರ್ಮಣ್ಣ, ನಂಜುಂಡಣ್ಣ, ದಾಸ ನಾಯಕ್, ಪ್ರಮೀಳಮ್ಮ, ನವೀನ್ ಕುಮಾರ್, ಗಿಜಿ ಹಳ್ಳಿ ಲೋಕೇಶ್, ನೀಲಮ್ಮ, ಸಿದ್ದಯ್ಯನವರು ಅಧ್ಯಕ್ಷರನ್ನು ಅಭಿನಂದಿಸಿದರು.
ಅರಸೀಕೆರೆ: ಯಳವಾರೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ನಾರಾಯಣಗಟ್ಟಳಿಯ ಎನ್.ಟಿ. ವಸಂತ್ ಕುಮಾರ್ ಬಹುಮತದಿಂದ ಆಯ್ಕೆಯಾಗಿದ್ದಾರೆ.
ಯಳವರೆ ಕೃಷಿ ಪತ್ತಿನ ಸಹಕಾರ ಸಂಘದ ನಿಕಟ ಪೂರ್ವ ಅಧ್ಯಕ್ಷ ಕೇಶವಣ್ಣ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಚುನಾವಣಾ ಕಣದಲ್ಲಿ ನಾರಾಯಣಗಟ್ಟಳ್ಳಿಯ ಎನ್. ಟಿ. ವಸಂತ್ ಕುಮಾರ್ ಹಾಗೂ ಕಬ್ಬುರಳ್ಳಿ ರಾಜಣ್ಣ ಆಕಾಂಕ್ಷಿಯಾಗಿ ಸ್ಪರ್ಧಿಸಿದ್ದರು. 12 ಜನ ನಿರ್ದೇಶಕರು ಹಾಗೂ ಒಂದು ಮತ ತಾಲೂಕು ವ್ಯವಸ್ಥಾಪಕರಿಂದ ಒಟ್ಟು 13 ಮತಗಳು ಚಲಾಯಿಸಲ್ಪಟ್ಟು, ಇದರಲ್ಲಿ ವಸಂತ್ ಕುಮಾರ್ ಎಂಟು ಮತಗಳು, ಇವರ ಪ್ರತಿಸ್ಪರ್ಧಿ ಕಬ್ಬೂರು ರಾಜಣ್ಣ ಐದು ಮತ ಪಡೆದು ಮೂರು ಮತಗಳ ಅಂತರದಿಂದ ವಸಂತ್ ಕುಮಾರ್ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಹಕಾರಿ ಅಭಿವೃದ್ಧಿ ಅಧಿಕಾರಿ ದೇವರಾಜ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಎನ್.ಟಿ. ವಸಂತ್ ಕುಮಾರ್, ಸಂಘದ ಉಪಾಧ್ಯಕ್ಷ ಜಯರಾಮಣ್ಣ ಹಾಗೂ ನಿರ್ದೇಶಕರಾದ ತಿರುಪತಿಹಳ್ಳಿ ಧರ್ಮಣ್ಣ, ನಂಜುಂಡಣ್ಣ, ದಾಸ ನಾಯಕ್, ಪ್ರಮೀಳಮ್ಮ, ನವೀನ್ ಕುಮಾರ್, ಗಿಜಿ ಹಳ್ಳಿ ಲೋಕೇಶ್, ನೀಲಮ್ಮ, ಸಿದ್ದಯ್ಯನವರು ಅಧ್ಯಕ್ಷರನ್ನು ಅಭಿನಂದಿಸಿದರು.
ಮುಖಂಡರಾದ ಗಿಜಿಹಳ್ಳಿ ಶೇಖರಣ್ಣ, ಯಳವರೆ ನಾಗರಾಜ್, ಬೆಳಗುಂಬ ಸಹಕಾರ ಸಂಘದ ಉಪಾಧ್ಯಕ್ಷ ಕಾಂತರಾಜ್, ಯಾದವ ಸಮಾಜದ ಮುಖಂಡ ಪುರ್ಲೆಹಳ್ಳಿ ಮೂರ್ತಣ್ಣ ಹಾಗೂ ಸಹಕಾರ ಸಂಘದ ವ್ಯವಸ್ಥಾಪಕ ಸೋಮೇಶ್, ಸಹಕಾರ ಸಂಘದ ಕಾರ್ಯದರ್ಶಿ ಚಿರಂಜೀವಿ ಸಂಘದ ಎಲ್ಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.