ಶಾಶ್ವತ ಆಧ್ಯಾತ್ಮಿಕ ವಿದ್ಯೆಯಿಂದ ಭಗವಂತನ ಅನುಗ್ರಹ ಸಿದ್ಧಿ: ಪುತ್ತಿಗೆ ಶ್ರೀ

| Published : Apr 25 2024, 01:01 AM IST

ಶಾಶ್ವತ ಆಧ್ಯಾತ್ಮಿಕ ವಿದ್ಯೆಯಿಂದ ಭಗವಂತನ ಅನುಗ್ರಹ ಸಿದ್ಧಿ: ಪುತ್ತಿಗೆ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶಿಬಿರದಲ್ಲಿ ಭಾಗವಹಿಸಿದ್ದ ನೂರಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ಪಿ.ಎಸ್. ಆಚಾರ್ಯರಿಂದ ಪ್ರಾಯೋಜಿತ ಕೋಟಿ ಗೀತಾ ಲೇಖನ ದೀಕ್ಷೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಶ್ರೀ ಪುತ್ತಿಗೆ ಮಠದಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ಪ್ರತಿವರ್ಷದಂತೆ ನಡೆಯುವ ವಸಂತ ಧಾರ್ಮಿಕ ಶಿಬಿರವನ್ನು ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ನಂತರ ಆಶೀರ್ವಚನ ನೀಡಿದ ಶ್ರೀಗಳು, ಶಿಬಿರದಲ್ಲಿ ಕಲಿತ ಆಧ್ಯಾತ್ಮಿಕ ವಿದ್ಯೆ ನಮ್ಮ ಜೀವನ ಪರ್ಯಂತ ಶಾಶ್ವತವಾಗಿ ನಮ್ಮ ರಕ್ಷಿಸುವುದು. ಅಲ್ಲದೆ ಭಗವಂತನ ಅನುಗ್ರಹ ಮೂಲಕ ಸುಖ, ಶಾಂತಿ ನೆಮ್ಮದಿಯ ಬದುಕು ನಮ್ಮದಾಗುವುದು ಎಂದು ಹಾರೈಸಿದರು.

ನಂತರ ಶಿಬಿರದಲ್ಲಿ ಭಾಗವಹಿಸಿದ್ದ ನೂರಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ಪಿ.ಎಸ್. ಆಚಾರ್ಯರಿಂದ ಪ್ರಾಯೋಜಿತ ಕೋಟಿ ಗೀತಾ ಲೇಖನ ದೀಕ್ಷೆ ನೀಡಿದರು.

ಕಿರಿಯ ಶ್ರೀಗಳಾದ ಶ್ರೀ ಸುಶ್ರೀಂದ್ರ ತೀರ್ಥರು, ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಸಾಧಕರಾಗಿ ಎಂದು ಹರಸಿದರು.

ಮುಖ್ಯ ಅಥಿತಿಗಳಾಗಿ ಮುಂಬೈಯ ಸಂಜೀವಿನಿ ಆಸ್ಪತ್ರೆಯ ಮುಖ್ಯಸ್ಥರಾದ ಸುರೇಶ್ ರಾವ್ ಹಾಗೂ ಕೋಟಿ ಗೀತಾ ಲೇಖನದ ಪ್ರಚಾರಕರಾದ ಪಿ.ಎಸ್. ಆಚಾರ್ಯರು ಉಪಸ್ಥಿತರಿದ್ದರು. ಶಿಬಿರದ ಸಂಪನ್ಮೂಲ ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಮಹಿತೋಷ್ ಆಚಾರ್ಯರು ಸ್ವಾಗತಿಸಿದರು. ರವೀಂದ್ರ ಆಚಾರ್ಯರು ವಂದಿಸಿದರು. ಕಾರ್ಯಕ್ರಮ ಸಂಚಾಲಕರಾದ ರಮೇಶ್ ಭಟ್ ನಿರೂಪಿಸಿದರು.