ಶ್ರದ್ಧಾ ಭಕ್ತಿಯ ವಾಸವಿ ಜಯಂತಿ

| Published : May 20 2024, 01:34 AM IST

ಸಾರಾಂಶ

ಪಟ್ಟಣದ ಬೆಲ್ಲದ ಪೇಟೆಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಗುಬ್ಬಿ: ಪಟ್ಟಣದ ಬೆಲ್ಲದ ಪೇಟೆಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ವಾಸವಿ ಜಯಂತಿ ಅಂಗವಾಗಿ ಗಂಗಾ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ವಾಸ್ತು ಹೋಮ, ವಾಸವಿ ಹೋಮ ವಿಶೇಷ ಪೂಜೆಯೊಂದಿಗೆ ಶ್ರೀಕನ್ನಿಕಾ ಪರಮೇಶ್ವರಿ ಅಮ್ಮನವರಿಗೆ ಪವಿತ್ರ ಗಂಗಾ ಅಭಿಷೇಕ, ಪಂಚಾಮೃತ ಅಭಿಷೇಕ, ಕನಕಾಭಿಷೇಕ ಸುಗಂಧ ಪುಷ್ಪದ ಅಭಿಷೇಕ ನೆರವೇರಿಸಲಾಯಿತು.

ಮಧ್ಯಾಹ್ನ ಬೆಳ್ಳಿ ರಥದಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರನ್ನು ಮಂಗಳವಾದ್ಯ ಹಾಗೂ ಚಂಡೆ ವಾದ್ಯದೊಂದಿಗೆ ಊರಿನ ರಾಜಭೀತಿಯಲ್ಲಿ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಚಂಡೆಮೇಳ ವಾದ್ಯದ ತಾಳಕ್ಕೆ ಮಹಿಳೆಯರು ಹಾಗೂ ಪುರುಷರು ಮೆರವಣಿಗೆ ಉದ್ದಕ್ಕೂ ನೃತ್ಯ ಮಾಡುತ್ತಾ ವೈಭವವಾಗಿ ನೆರವೇರಿಸಿದರು. ಮೆರವಣಿಗೆ ನಂತರ ಅಮ್ಮನವರನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಮಹಿಳೆಯರಿಂದ ತಂಬಿಟ್ಟಿನ ಹಾರ ಆರತಿ ಹಾಗೂ ದೇವರಿಗೆ ಮಡ್ಲ ಕ್ಕಿ ಬಾಗಿನ ಅರ್ಪಿಸಿದರು. ವಾಸವಿ ಜಯಂತಿ ಅಂಗವಾಗಿ ತುಲಾಭಾರ ಸೇವೆ ಏರ್ಪಡಿಸಲಾಗಿತ್ತು. ಊರಿನ ಹೆಣ್ಣು ಮಕ್ಕಳಿಗೆ ಮಡ್ಲಕ್ಕಿ ಕಟ್ಟುವ ಕಾರ್ಯಕ್ರಮವು ಜರುಗಿತು.