ಸಾರಾಂಶ
ವಾಸವಿ ಜಯಂತಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು. ಸಂಜೆ ಹಮ್ಮಿಕೊಂಡಿದ್ದ ಚಂಡೆ ವಾದ್ಯ ಮೇಳ ವಿಶಿಷ್ಟವಾಗಿತ್ತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ವಾಸವಿ ಜಯಂತಿ ಅಂಗವಾಗಿ ಕುಶಾಲನಗರ ಆರ್ಯವೈಶ್ಯ ಮಂಡಳಿ ಮತ್ತು ವಾಸವಿ ಯುವಜನ ಸಂಘ ಆಶ್ರಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು.ಕುಶಾಲನಗರ ರಥಬೀದಿಯ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಚೆಂಡೆ ವಾದ್ಯ ಮೇಳ ವಿಶಿಷ್ಟವಾಗಿತ್ತು.
ವಾಸವಿ ಜಯಂತಿ ಅಂಗವಾಗಿ ದೇವಾಲಯದಲ್ಲಿ ಬೆಳಗಿನಿಂದ ಪೂಜಾ ಕಾರ್ಯಕ್ರಮಗಳು ಜರುಗಿತು. ಅರ್ಚಕರಾದ ಗಿರೀಶ್ ಭಟ್, ಯೋಗೇಶ್ ಭಟ್, ದೇವರಾಜ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಿತು.ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲಗಳೊಂದಿಗೆ ದೇವಾಲಯಕ್ಕೆ ಆಗಮಿಸಿ ಸಾಮೂಹಿಕ ಪೂಜೆ ಸಲ್ಲಿಸಿದರು.
ವಾಸವಿ ಜಯಂತಿ ಅಂಗವಾಗಿ ಸಮುದಾಯದ ಸದಸ್ಯರಿಗೆ ಏರ್ಪಡಿಸಿದ್ದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಬಿ ಎಲ್ ಉದಯಕುಮಾರ್, ಉಪಾಧ್ಯಕ್ಷರಾದ ಎಸ್ ಎಂ ಸತೀಶ್ , ಖಜಾಂಚಿ ನಟರಾಜ್ ಅಶೋಕ್ ಕುಮಾರ್, ಆರ್ಯವೈಶ್ಯ ಮಂಡಳಿಯ ರಾಜ್ಯ ಕಾರ್ಯದರ್ಶಿ ಬಿ ಆರ್ ನಾಗೇಂದ್ರ ಪ್ರಸಾದ್, ಜಿಲ್ಲಾ ಅಧ್ಯಕ್ಷರಾದ ಬಿ ಎಲ್ ಸತ್ಯನಾರಾಯಣ , ಮಹಿಳಾ ಘಟಕದ ಲಕ್ಷ್ಮಿ ಶ್ರೀನಿವಾಸ್, ಯುವತಿಯರ ಸಂಘದ ಅಧ್ಯಕ್ಷೆ ಕವಿತಾ ಪ್ರವೀಣ್, ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಪ್ರವೀಣ್, ಉಪಾಧ್ಯಕ್ಷರಾದ ಬಾಲಾಜಿ, ವೈಶಾಕ್, ರಾಕೇಶ್, ನಿಖಿಲ್ , ರವಿಪ್ರಕಾಶ್, ಕಾರ್ಯದರ್ಶಿ ಅಂಜನ್ ಮತ್ತಿತರರು ಇದ್ದರು.