ರೋಟರಿ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳಿವೆ. ವಾತ್ಸಲ್ಯ ಎಂಬ ಯೋಜನೆ ಇಡಿ ರಾಜ್ಯಕ್ಕೆ ಮಾದರಿ. ಸರ್ಕಾರದಿಂದಲೂ ಇಷ್ಟು ಬೇಗ ಮನೆ ರಚನೆ ಮಾಡುವುದು ಕಷ್ಟ ಆಗುತ್ತದೆ. ಗ್ರಾಮಭಿವೃದ್ಧಿ ಯೋಜನೆ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಕನ್ನಡಪ್ರಭವಾರ್ತೆ ತಿಪಟೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಿಪಟೂರು ತಾಲೂಕಿನ ಬಿದರೆಗುಡಿ ವಲಯದ ಲಿಂಗದಹಳ್ಳಿ ಕಾರ್ಯಕ್ಷೇತ್ರದ ಅನಗೊಂಡನಹಳ್ಳಿ ಮಾಸಾಶನ ಸದಸ್ಯರಾದ ಹಾಲಮ್ಮ ಅವರಿಗೆ ವಾತ್ಸಲ್ಯ ಮನೆಯನ್ನು ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಹಸ್ತಾಂತರಿಸಿದರು.

ನಂತರ ಮಾತನಾಡಿದ ಸತೀಶ್ ಸುವರ್ಣ, ತುಮಕೂರು ಜಿಲ್ಲೆಯಲ್ಲಿ ಇದು ೭೨ನೇ ಮನೆ. ತಿಪಟೂರು ತಾಲೂಕಲ್ಲಿ ೧೫ ನೇ ವಾತ್ಸಲ್ಯ ಮನೆಯಾಗಿದೆ. ಜೊತೆಗೆ ನಾವು ಪ್ರತಿ ತಿಂಗಳು ನಿರ್ಗತಿಕರಿಗೆ ೧೦೦೦ ರು.ಯಿಂದ ೩೦೦೦ ರು.ಮಾಸಾಶನ ನೀಡುವ ಜೊತೆಗೆ ವಾತ್ಸಲ್ಯ ಕಿಟ್ ನಲ್ಲಿ ಚಾಪೆ, ದಿಂಬು, ಹೊದಿಕೆ, ಪಾತ್ರೆ, ವಾತ್ಸಲ್ಯ ಮಿಕ್ಸ್ ವಿತರಣೆ ಮಾಡುತ್ತಿದ್ದೇವೆ. ಇದೆಲ್ಲ ಆದ ನಂತರ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಕಲ್ಪನೆಯಲ್ಲಿ ಮೂಡಿ ಬಂದ ಯೋಚನೆ ಸೂರಿಲ್ಲದವರಿಗೆ ವಾತ್ಸಲ್ಯ ಮನೆ ರಚನೆ ಮಾಡಿ ಕೊಡುವ ದೊಡ್ಡ ಕಾರ್ಯ ಇದಾಗಿದೆ ಎಂದು ತಿಳಿಸಿದರು. ಹಾಲಮ್ಮ ಅವರ ಅರೋಗ್ಯ ವಿಚಾರಿಸಿ ಮಾಶಾಸನ ನೀಡಿ ಶುಭ ಹಾರೈಸಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳಿವೆ. ವಾತ್ಸಲ್ಯ ಎಂಬ ಯೋಜನೆ ಇಡಿ ರಾಜ್ಯಕ್ಕೆ ಮಾದರಿ. ಸರ್ಕಾರದಿಂದಲೂ ಇಷ್ಟು ಬೇಗ ಮನೆ ರಚನೆ ಮಾಡುವುದು ಕಷ್ಟ ಆಗುತ್ತದೆ. ಗ್ರಾಮಭಿವೃದ್ಧಿ ಯೋಜನೆ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ದಾನ ಪತ್ರ ಮಾಡಿಕೊಟ್ಟಿರುವ ಅನು ಪ್ರತಾಪ್ ಕುಮಾರ್, ಯೋಜನಾಧಿಕಾರಿ ಉದಯ್ ಕೆ, ಜನಜಾಗೃತಿ ಸದಸ್ಯರಾದ ಶಾಮ್ ಸುಂದರ್, ಹರೀಶ್ ಗೌಡ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ ಎಮ್ ಡಿ, ಮೇಲ್ವಿಚಾರಕರಾದ ಮನೀಶ್ ಕುಲಾಲ್, ಸೇವಾಪ್ರತಿನಿಧಿ ತಾರ, ಊರಿನ ಪ್ರಮುಖರಾದ ವಿರೂಪಾಕ್ಷ, ವಿಜಯ್, ಸ್ವ ಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.