ಇಲ್ಲಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಬಿಸಿ ಟ್ರಸ್ಟ್ ನ ವತಿಯಿಂದ ದಿಡಗ ವಲಯದ ಕಬ್ಬಳ್ಳಿ ಕಾರ್ಯಕ್ಷೇತ್ರಕ್ಕೆ ಬರುವ ಮುಖಿಕೆರೆಯಲ್ಲಿ ಸೂಕ್ತ ವಾಸದ ಮನೆಯಿಲ್ಲದೇ ಸಂಕಷ್ಟದಲ್ಲಿದ್ದ ಜಯಮ್ಮ ಎಂಬ ವಯೋವೃದ್ಧರಿಗೆ ಸುಮಾರು 1.35 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಯಿತು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಇಲ್ಲಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಬಿಸಿ ಟ್ರಸ್ಟ್ ನ ವತಿಯಿಂದ ದಿಡಗ ವಲಯದ ಕಬ್ಬಳ್ಳಿ ಕಾರ್ಯಕ್ಷೇತ್ರಕ್ಕೆ ಬರುವ ಮುಖಿಕೆರೆಯಲ್ಲಿ ಸೂಕ್ತ ವಾಸದ ಮನೆಯಿಲ್ಲದೇ ಸಂಕಷ್ಟದಲ್ಲಿದ್ದ ಜಯಮ್ಮ ಎಂಬ ವಯೋವೃದ್ಧರಿಗೆ ಸುಮಾರು 1.35 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಯಿತು. ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಸೀನಪ್ಪ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ನೂರಾರು ಯೋಜನೆಗಳನ್ನು ಜಾರಿಗೊಳಿಸಿ ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದರು. ತುಮಕೂರು ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ಮಾತನಾಡಿ , ಸುಮಾರು ಐವತ್ತು ವರ್ಷಗಳ ಕಾಲ ಇಂದೋ ನಾಳೆಯೋ ಬಿದ್ದು ಹೋಗುವಂತಹ ಮನೆಯಲ್ಲಿ ವಾಸವಿದ್ದರು. ಆದರೆ ನಮ್ಮ ಸಂಸ್ಥೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಅವರು ನಿರೀಕ್ಷೆಯೇ ಮಾಡದ ರೀತಿ ಮನೆಯನ್ನು ನಿರ್ಮಿಸಿ ಅವರಿಗೆ ಹಸ್ತಾಂತರಿಸಿದೆ ಎಂದರು. ತುರುವೇಕೆರೆ ತಾಲೂಕಿನಲ್ಲಿ ಒಟ್ಟು 7 ವಾತ್ಸಲ್ಯ ಮನೆಗಳನ್ನು ನಿರ್ಮಿಸಲಾಗಿದೆ. 15 ಮಂದಿಗೆ ವಾತ್ಸಲ್ಯ ಫುಡ್ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು. ತಾಪಂ ಇಒ ಹರೀಶ್, ಶಾಲಿನಿ, ಪಿಡಿಓ ಕಿರಣ್, ಜಯರಾಮ್, ಇಂದ್ರಜಿತ್, ಗ್ರಾಪಂ ಸದಸ್ಯ ಕೃಷ್ಣಪ್ಪ, ಹರೀಶ್, ಭಾಗ್ಯಮ್ಮ, ಪುಷ್ಪಲತಾ ಇದ್ದರು.