ವಿಬಿಸಿಎಲ್ ಯುವಜನೋತ್ಸವ: ಎಸ್‌ಡಿಎಂಎಲ್‌ಸಿ ಚಾಂಪಿಯನ್

| Published : Jan 05 2025, 01:32 AM IST

ವಿಬಿಸಿಎಲ್ ಯುವಜನೋತ್ಸವ: ಎಸ್‌ಡಿಎಂಎಲ್‌ಸಿ ಚಾಂಪಿಯನ್
Share this Article
  • FB
  • TW
  • Linkdin
  • Email

ಸಾರಾಂಶ

ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮಂಗಳೂರು ವಲಯದ ಯುವ ಜನೋತ್ಸವದಲ್ಲಿ ಭಾಗವಹಿಸಿದ್ದ ೧೧ ಕಾನೂನು ಕಾಲೇಜುಗಳಲ್ಲಿ ಮಂಗಳೂರಿನ ಎಸ್‌ಡಿಎಂ ಕಾನೂನು ಮಹಾವಿದ್ಯಾಲಯ ಸಮಗ್ರ ಚಾಂಪಿಯನ್ ಹಾಗೂ ಆತಿಥೇಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮಂಗಳೂರು ವಲಯದ ಯುವ ಜನೋತ್ಸವದಲ್ಲಿ ಭಾಗವಹಿಸಿದ್ದ ೧೧ ಕಾನೂನು ಕಾಲೇಜುಗಳಲ್ಲಿ ಮಂಗಳೂರಿನ ಎಸ್‌ಡಿಎಂ ಕಾನೂನು ಮಹಾವಿದ್ಯಾಲಯ ಸಮಗ್ರ ಚಾಂಪಿಯನ್ ಹಾಗೂ ಆತಿಥೇಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.ತುಳು, ಕೊಂಕಣಿ ಮತ್ತು ಕನ್ನಡ ಚಲನಚಿತ್ರ ನಟ ಹಾಗೂ ಬಿಗ್ ಬಾಸ್ ವಿಜೇತ ರೂಪೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ, ಸಮಾಜದಲ್ಲಿ ನ್ಯಾಯಯುತವಾಗಿ ಬದುಕುವುದು ಮತ್ತು ನೊಂದವರಿಗೆ ನ್ಯಾಯ ನೀಡುವುದು ನ್ಯಾಯಾಲಯವಾದರೆ, ಆ ನ್ಯಾಯಾಲಯದಲ್ಲಿ ನ್ಯಾಯದ ಪರ ನ್ಯಾಯ ಕೊಡಿಸುವ ಮಹತ್‌ಕಾರ್ಯ ನ್ಯಾಯವಾದಿಗಳದ್ದಾಗಿದೆ. ವಿದ್ಯಾರ್ಥಿಗಳಲ್ಲಿರುವ ಕಲೆಯನ್ನು ಹೊರ ತೆಗೆಯಲು ಯುವ ಜನೋತ್ಸವದಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಹೇಳಿದರು.ಕಾಲೇಜಿನ ನಿರ್ದೇಶಕಿಯಾದ ಪ್ರೊ. (ಡಾ.) ನಿರ್ಮಲಾ ಕುಮಾರಿ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ. (ಡಾ.) ರಘುನಾಥ್ ಕೆ.ಎಸ್. ಉಪಸ್ಥಿತರಿದ್ದರು. ಕಾಲೇಜಿನ ಸಾಂಸ್ಕೃತಿಕ ಸಂಯೋಜಕಿಯಾದ ಡಾ. ಪ್ರೀತಿ ಹರೀಶ್‌ರಾಜ್, ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿನಿಯಾದ ಶಿಲ್ಪಾ ಸ್ವಾಗತಿಸಿದರು. ಎಲಿಟ ಅವರು ಪರಿಚಯಿಸಿದರು. ಸ್ವಾತಿ ವಂದಿಸಿದರು. ಪಲ್ಲವಿ ನಾಯರಿ ಕಾರ್ಯಕ್ರಮ ನಿರೂಪಿಸಿದರು.