ಸಾರಾಂಶ
ಅರಸೀಕೆರೆ ಶ್ರೀರಾಮ ಮಂದಿರದಲ್ಲಿ ನಡೆಸುತ್ತಿರುವ ವೇದ ಪಾಠದಲ್ಲಿ ಸೀತಾ ಮಹಿಳಾ ಸಂಘದ ಪದಾಧಿಕಾರಿಗಳು ಸದಸ್ಯರು ಆಸಕ್ತಿಯಿಂದ ಕಲಿಯುತ್ತಿದ್ದಾರೆ ಎಂದು ಶೃಂಗೇರಿ ಮಠ ಮುದ್ರಾ ವೇಬ್ರಶ್ರೀ ರವಿ ಪುರಾಣಿಕ್ ಹೇಳಿದರು. ಮುಂದಿನ ದಿನಗಳಲ್ಲಿ ನಾರಾಯಣ ಸೂಕ್ತ ಮಂತ್ರ ಪುಷ್ಪ ಮತ್ತು ಶಾಂತಿಮಂತ್ರಗಳ ಸ್ತೋತ್ರಗಳನ್ನು ಹೇಳಿಕೊಡಲಾಗುವುದು ಎಂದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಶೃಂಗೇರಿ ಗುರುಗಳ ಕೃಪಾ ಆಶೀರ್ವಾದದೊಂದಿಗೆ ಅರಸೀಕೆರೆ ಶ್ರೀರಾಮ ಮಂದಿರದಲ್ಲಿ ನಡೆಸುತ್ತಿರುವ ವೇದ ಪಾಠದಲ್ಲಿ ಸೀತಾ ಮಹಿಳಾ ಸಂಘದ ಪದಾಧಿಕಾರಿಗಳು ಸದಸ್ಯರು ಆಸಕ್ತಿಯಿಂದ ಕಲಿಯುತ್ತಿದ್ದಾರೆ ಎಂದು ಶೃಂಗೇರಿ ಮಠ ಮುದ್ರಾ ವೇಬ್ರಶ್ರೀ ರವಿ ಪುರಾಣಿಕ್ ಹೇಳಿದರು.ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈಗಾಗಲೇ ದುರ್ಗ ಸೂಕ್ತ ಶ್ರೀ ಸೂಕ್ತ ಗಣೇಶಾರ್ಥವಶ್ರೀರ್ಷ ಪಾಠವಾಗಿದೆ, ಶ್ರದ್ಧೆಯಿಂದ ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾರಾಯಣ ಸೂಕ್ತ ಮಂತ್ರ ಪುಷ್ಪ ಮತ್ತು ಶಾಂತಿಮಂತ್ರಗಳ ಸ್ತೋತ್ರಗಳನ್ನು ಹೇಳಿಕೊಡಲಾಗುವುದು ಎಂದ ಅವರು, ವಿಶ್ವದ ಶಾಂತಿಗಾಗಿ ರಾಷ್ಟ್ರಾದ್ಯಂತ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಅನಾದಿಕಾಲದಿಂದಲೂ ನಡೆದು ಬಂದಿದ್ದು, ಮನುಷ್ಯನಿಗೆ ಶಾಂತಿ ಮತ್ತು ನೆಮ್ಮದಿ ಹಾಗೂ ಲೋಕಕಲ್ಯಾಣಕ್ಕೆ ಭಗವಂತನ ಕೃಪೆಗಾಗಿ ಧಾರ್ಮಿಕ ಕಾರ್ಯಕ್ರಮಗಳು ಅಗತ್ಯ ಎಂದ ಅವರು, ಮನುಷ್ಯನಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಧಾರ್ಮಿಕ ಕಾರ್ಯಗಳಲ್ಲಿ ಒಳಗೊಂಡಾಗ ತಂತಾನೇ ಆಗುತ್ತದೆ, ಈ ಶ್ರೀರಾಮ ಮಂದಿರದಲ್ಲಿ ವರ್ಷವಿಡೀ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಶೃಂಗೇರಿ ಗುರುಗಳ ಕೃಪೆಯಿಂದ ತಾಲೂಕು ಬ್ರಾಹ್ಮಣ ಸಂಘವು ಕಾಲ ಕಾಲಕ್ಕೆ ನಡೆಯಬೇಕಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ ಎಂದರು.