ಲೋಕಸಭಾ ಕಣದಿಂದ ಹಿಂದೆಸರಿಯುವ ಮಾತೇ ಇಲ್ಲ: ವೀಣಾ

| Published : Mar 26 2024, 01:00 AM IST

ಲೋಕಸಭಾ ಕಣದಿಂದ ಹಿಂದೆಸರಿಯುವ ಮಾತೇ ಇಲ್ಲ: ವೀಣಾ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಕಾರಣಕ್ಕೂ ನಾನು ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ, ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ನನ್ನ ಸ್ಫರ್ಧೆ ಖಚಿತ ಎಂದು ಕಾಂಗ್ರೆಸ್‌ ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್‌ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಯಾವುದೇ ಕಾರಣಕ್ಕೂ ನಾನು ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ, ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ನನ್ನ ಸ್ಫರ್ಧೆ ಖಚಿತ ಎಂದು ಕಾಂಗ್ರೆಸ್‌ ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್‌ ಸ್ಪಷ್ಟಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಏನೇ ನಡೆದರೂ ನಾನು ಈ ಬಾರಿ ಕಣದಲ್ಲಿರುವುದು ಫಿಕ್ಸ್. ನನ್ನ ಪತಿ ಕಾಂಗ್ರೆಸ್ ಶಾಸಕ ಇರಬಹುದು, ಅವರನ್ನು(ಶಾಸಕ) ಹೊರಗಿಟ್ಟೂ ಚುನಾವಣೆ ಮಾಡುವ ಶಕ್ತಿ ನನಗಿದೆ. ಅವರನ್ನು ನಾನು ನನ್ನ ಸ್ಪರ್ಧೆ ವಿಚಾರದಲ್ಲಿ ಎಳೆದು ತರಲ್ಲ ಎಂದರು.

ಮಾ.28ಕ್ಕೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರ ಸಭೆ ಕರೆದಿದ್ದಾರೆ. ಅಲ್ಲಿ ಟಿಕೆಟ್ ಬದಲಾಯಿಸಿ ನನಗೆ ಕೊಡಬೇಕು. ಈ ಹಿಂದೆ ಜಿಲ್ಲೆಯಲ್ಲಿ ಟಿಕೆಟ್ ಬದಲಾಯಿಸಿದ ಉದಾಹರಣೆಗಳಿವೆ. ಒಂದೊಮ್ಮೆ ಟಿಕೆಟ್ ನೀಡದೇ ಹೋದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ, ಸೂಕ್ತ ನ್ಯಾಯ ಸಿಕ್ಕರೆ ಸುಮ್ಮನಿರುತ್ತೇನೆ. ಅನ್ಯಾಯವಾದರೆ ಜಿಲ್ಲೆಯ ಜನರೊಂದಿಗಿದ್ದು ಹೋರಾಟ ಮಾಡುತ್ತೇನೆ ಎಂದರು.

ಶಾಸಕ ವಿಜಯಾನಂದ ಕಾಶಪ್ಪನವರ್‌ ಮಾತನಾಡಿ, ನಾನು ಅವರಿಗೆ, ಕಾಶಪ್ಪನವರ್‌ ಕುಟುಂಬದ ಕೊಡುಗೆ ಕಾಂಗ್ರೆಸ್‌ ಪಕ್ಷದ ಮೇಲಿದೆ ಎಂದೇ ಈ ಹಿಂದೆ ಟಿಕೆಟ್ ಕೊಟ್ಟಿದ್ದರು. ಅದೇ ಅರ್ಹತೆ ಮೇಲೆ ಈಗಲೂ ಟಿಕೆಟ್ ಕೇಳಿದ್ದೇವೆ ಎಂದರು.