ವೀಣಾ ಕಾಶಪ್ಪನವರ ಆಸ್ಪತ್ರೆಯಿಂದ ಬಿಡುಗಡೆ

| Published : Nov 22 2023, 01:00 AM IST

ಸಾರಾಂಶ

ವೀಣಾ ಕಾಶಪ್ಪನವರ ಆಸ್ಪತ್ರೆಯಿಂದ ಬಿಡುಗಡೆ

ವಿಜಯಪುರ: ವಿಜಯಪುರ ಬಳಿ ಸೋಮವಾರ ಅವಘಾತವಾಗಿ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಗಲಕೋಟೆ ಜಿಪಂ ಮಾಜಿ ಅಧ್ಯಕ್ಷೆ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಪತ್ನಿ ವೀಣಾ ಕಾಶಪ್ಪನವರ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅವರು, ನಾನು ಆರೋಗ್ಯವಾಗಿದ್ದೇನೆ. ಯಾರೂ ಆತಂಕ ಪಡಬೇಡಿ. ಸೋಮವಾರ ವಿಜಯಪುರದ ಬಳಿ ಅಪಘಾತವಾಗಿದ್ದು, ಜನರ ಹಾರೈಕೆಯಿಂದ ಕ್ಷೇಮವಾಗಿದ್ದೇನೆ‌ ಎಂದು ತಿಳಿಸಿದ್ದಾರೆ.