ಕನ್ನಡಪ್ರಭ ವಾರ್ತೆ ಹಿರಿಯೂರು
ಹಿರಿಯೂರು ಇನ್ನರ್ ವೀಲ್ ಕ್ಲಬ್ ನ 2026–27ನೇ ಸಾಲಿನ ಅಧ್ಯಕ್ಷೆಯಾಗಿ ವೀಣಾ ಸುರೇಶ್ ಅವರು ಪದಗ್ರಹಣ ಸ್ವೀಕರಿಸಿದರು.ಪಿಡಿಸಿ ವೀಣಾಸ್ವಾಮಿ ಅವರ ನೇತೃತ್ವದಲ್ಲಿ ಪದಗ್ರಹಣ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ವಸಂತ್ ಕುಮಾರ್ ಹಾಗೂ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷ ಸುಂದರರಾಜ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.
ಪದಗ್ರಹಣದ ಬಳಿಕ ನೂತನ ಅಧ್ಯಕ್ಷೆ ವೀಣಾ ಸುರೇಶ್ ಮಾತನಾಡಿ ತಮ್ಮ ಅಧಿಕಾರಾವಧಿಯಲ್ಲಿ ಮಹಿಳಾ ಸಬಲೀಕರಣ, ಆರೋಗ್ಯ ಜಾಗೃತಿ, ಶಿಕ್ಷಣ, ಪರಿಸರ ಸಂರಕ್ಷಣೆ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಇನ್ನರ್ ವೀಲ್‌ನ ಧ್ಯೇಯೋದ್ದೇಶಗಳನ್ನು ಯಶಸ್ವಿಯಾಗಿ ಮುಂದುವರಿಸುವುದಾಗಿ ತಿಳಿಸಿದರು.ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ನಿರಂಜನ್, ಸಿ.ಎ. ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ ಸಂಜಿತಾ, ಹತ್ತನೇ ತರಗತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನೂತನ್ ಗೌಡ ಮತ್ತು ಆತ್ಮಿಕ, ಇಂಡಿಯನ್ ಬುಕ್ ಆಫ್ ರೆಕಾರ್ಡ್ ಹಾಗೂ ಅಂಚೆ ಇಲಾಖೆಯ ಶಿವಮ್ಮನವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಮಧುಮೇಹ ರೋಗಿಗಳಿಗೆ ಔಷಧಿ ಕಿಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ನಿರ್ಮಲ ಮಹಾಂತೇಶ್, ಖಜಾಂಚಿ ಅರ್ಚನಾ, ಸಂಪಾದಕಿ ಪ್ರೇಮ, ಐಎಸ್‌ಒ ಪದ್ಮ ಮಂಜೇಶ್, ಸದಸ್ಯೆಯರಾದ ಸರ್ವ ಮಂಗಳ ,ರೋಷ್ನಿ ಮಹೇಶ್, ಸೌಮ್ಯ, ಇಂಪಾರೀತೇಶ್ , ರೂಪಾ, ಲತಾ ಗೌಡ, ಲತಾ ವೆಂಕಟೇಶ್, ಸೌಜನ್ಯ, ಉಮಾ, ಪದ್ಮ ಆನಂದ್, ಪದ್ಮಾ ಮಹಾಬಲೇಶ್, ಲಕ್ಷ್ಮೀ ಪ್ರಸನ್ನ, ಸೌಮ್ಯ, ಗೀತಾ ನಾಗೇಶ್, ರಚನಾ, ಶ್ರೀಲಕ್ಷ್ಮಿ, ಯಮುನಾ, ಸುಧಾ, ಮಂಗಳಗೌರಿ, ಲಕ್ಷ್ಮಿ, ರೇಷ್ಮಾ ಹಾಗೂ ನೂತನ ಸದಸ್ಯೆಯರು ಉಪಸ್ಥಿತರಿದ್ದರು.