ಫೆ.2ರಂದು ವೀರ ರಾಣಿ ಕಿತ್ತೂರು ಚನ್ನಮ್ಮ ಸ್ಮರಣೋತ್ಸವ

| Published : Jan 29 2025, 01:33 AM IST

ಸಾರಾಂಶ

ಬ್ರಿಟಿಷ್‌ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನರಾಗಿ ದೇಶದಲ್ಲಿಯೇ ಮೊದಲು ಸೋಲಿನ ರುಚಿ ತೋರಿಸಿದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಕಿತ್ತೂರು ಚನ್ನಮ್ಮನವರ 196ನೇ ಸ್ಮರಣೋತ್ಸವವನ್ನು ಫೆ.2ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಬ್ರೀಟಿಷ್‌ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನರಾಗಿ ದೇಶದಲ್ಲಿಯೇ ಮೊದಲು ಸೋಲಿನ ರುಚಿ ತೋರಿಸಿದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಕಿತ್ತೂರು ಚನ್ನಮ್ಮನವರ 196ನೇ ಸ್ಮರಣೋತ್ಸವವನ್ನು ಫೆ.2ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಉತ್ತರ ಭಾರತದಲ್ಲಿ ನಡೆಯುತ್ತಿರುವ ಕುಂಭಮೇಳದ ಸಂತ ಸಮ್ಮೇಳನದಲ್ಲಿ ಉತ್ತರ ಕರ್ನಾಟಕದ ಬಸವಣ್ಣ, ಚನ್ನಮ್ಮ, ಕನಕದಾಸರ ಭಾವಚಿತ್ರ ನೋಡಿ ಹರ್ಷವಾಗಿದೆ. ಭಾರತವೇ ಇವರನ್ನು ಸ್ಮರಣೆ ಮಾಡುವಾಗ ಕರ್ನಾಟಕ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮರೆಯದೆ ಸರ್ಕಾರದ ಉತ್ಸವವಾಗಿ ಆಚರಿಸಬೇಕೆಂದರು.ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ನಮ್ಮ ನಾಡಿನ ಸ್ವಾತಂತ್ರ್ಯ ಹೋರಾಟಗಾರರನ್ನು ಜಾತಿಗೆ ಸೀಮಿತ ಮಾಡದೆ ರಾಷ್ಟ್ರಾದ್ಯಂತ ಪಸರಿಸುವ ರೀತಿಯಲ್ಲಿ ಆಚರಣೆಗಳಿರಬೇಕೆಂದರು.

ವಕೀಲ ಶ್ರೀಶೈಲ ಬೋಳಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಫೆ.2ರಂದು ಬೈಲಹೊಂಗಲ ಚನ್ನಮ್ಮನವರ ಐಕ್ಯಸ್ಥಳದಿಂದ 8 ಗಂಟೆಗೆ ಕಾಕತಿಗೆ ತೆರಳಿ ಅಲ್ಲಿಂದ 9.30ಕ್ಕೆ ಬೆಳಗಾವಿ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಬಾಗೆವಾಡಿ, ಕಿತ್ತೂರು, ಸಂಗೊಳ್ಳಿ, ಅಮಟೂರು ಮೂಲಕ ನಗರದ ಚನ್ನಮ್ಮನ ವೃತ್ತಕ್ಕೆ ಐಕ್ಯ ಜ್ಯೋತಿ ಯಾತ್ರೆ ಆಗಮಿಸಲಿದೆ ಎಂದು ತಿಳಿಸಿದರು.

ಮಾಜಿ ಜಿಪಂ ಸದಸ್ಯೆ ರೋಹಿಣಿ ಪಾಟೀಲ, ಶಂಕರ ಮಾಡಲಗಿ, ಮಹಾಂತೇಶ ತುರಮರಿ, ಮಹಾಂತೇಶ ಹೊಸಮನಿ, ಬಸವರಾಜ ತಿಗಡಿ ಮಾತನಾಡಿದರು.

ನೈರುತ್ಯ ರೈಲ್ವೆ ವಿಭಾಗದ ಬಳಕೆದಾರರ ಹಿತರಕ್ಷಣಾ ಸಮಿತಿಯ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಎಫ್‌.ಎಸ್. ಸಿದ್ದನಗೌಡರ, ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಗುರು ಮೆಟಗುಡ್ಡ, ಸವದತ್ತಿ ತಾಲೂಕಿನ ಕೃಷಿಕ ಸಮಾಜದ ಅಧ್ಯಕ್ಷ ಉಮೇಶ ಬೋಳೆತ್ತಿನ ಹಾಗೂ ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ ಅವರನ್ನು ಶ್ರೀಗಳಿಂದ ಸತ್ಕರಿಸಲಾಯಿತು.

ಬಿ.ಬಿ. ಗಣಾಚಾರಿ, ಹಿರಿಯ ನ್ಯಾಯವಾದಿ,ಕೆಂ.ವೈ. ಸೋಮಣ್ಣವರ, ಮಹಾಂತೇಶ ಮತ್ತಿಕೊಪ್ಪ, ಕುಮಾರ ದಳವಾಯಿ, ಮುದಕಪ್ಪ ತೋಟಗಿ, ಡಾ.ಸಿ.ಬಿ. ಗಣಾಚಾರಿ, ಮಹಾಂತೇಶ ಅಕ್ಕಿ, ಮಹಾಂತೇಶ ಹರಕುಣಿ, ರಫೀಕ ಬಢೇಘರ, ಬಿ.ಬಿ. ಬೋಗೂರ, ವಿಶ್ವನಾಥ ಪಾಟೀಲ, ಶಿವಾನಂದ ಬೆಳಗಾವಿ, ಮಹಾಂತೇಶ ಜಿಗಜಿನ್ನಿ, ಜಗದೀಶ ಲೋಕಾಪುರ, ಸಂಗಪ್ಪ ಕಾದ್ರೋಳ್ಳಿ, ನಾಗರಾಜ ಮರಕುಂಬಿ, ಮಹಾಂತೇಶ ಕಮತ, ಶಿವಬಸಪ್ಪ ತುರಮರಿ ಮಲ್ಲಿಕಾರ್ಜುನ ಹುಂಬಿ, ಗೌಡಪ್ಪ ಹೊಸಮನಿ, ಪರಪ್ಪ ಬಾಳಿಕಾಯಿ, ರವಿ ಕುರಬೆಟ್ಟ, ರಮೇಶ ತುರಮರಿ, ಶ್ರೀಕಾಂತ ಸುಂಕದ, ಕುಮಾರ ಪಾಟೀಲ, ಜಿ.ಬಿ. ಶೀಗಿಹಳ್ಳಿ, ಈರಣ್ಣ ಬೆಟಗೇರಿ, ಬಿ.ಬಿ. ಸಂಗನಗೌಡರ, ಶ್ರೀಶೈಲ ಶರಣಪ್ಪನವರ, ಶ್ರೀಕಾಂತ ಮಾಳಕ್ಕನ್ನವರ, ಮಹೇಶ ಕೊಟಗಿ, ಚಂದ್ರು ಕೊಪ್ಪದ, ಸುರೇಶ ಯರಗಟ್ಟಿ, ಸುಭಾ? ತುರಮರಿ, ರಾಜು ನರಸಣ್ಣವರ, ರಾಜು ಗುಂಡ್ಲೂರ, ಇತರರು ಇದ್ದರು. ಸ್ಮರಣೊತ್ಸವ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ ಸ್ವಾಗತಿಸಿದರು. ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರಿಗೆಪ್ಪ ಗುಂಡ್ಲೂರ ವಂದಿಸಿದರು.