ಮಂಗಳೂರಿನಲ್ಲಿ ವೀರಭದ್ರೇಶ್ವರ ಜಾತ್ರೆ, ಗುಗ್ಗಳ ಕಾರ್ಯಕ್ರಮ

| Published : Dec 18 2024, 12:46 AM IST

ಮಂಗಳೂರಿನಲ್ಲಿ ವೀರಭದ್ರೇಶ್ವರ ಜಾತ್ರೆ, ಗುಗ್ಗಳ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಮಂಗಳೂರು ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ 12ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಗುಗ್ಗಳ ಕಾರ್ಯಕ್ರಮ ಮಂಗಳವಾರ ಅದ್ಧೂರಿಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ಮಂಗಳೂರು ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ 12ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಗುಗ್ಗಳ ಕಾರ್ಯಕ್ರಮ ಮಂಗಳವಾರ ಅದ್ಧೂರಿಯಿಂದ ಜರುಗಿತು.

ಬೆಳಗ್ಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರನಿಗೆ ಅಭಿಷೇಕ ಜರುಗಿತು. ಗ್ರಾಮದ ಅರಳೇಲೆ ಹಿರೇಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸೊರಟೂರಿನ ಶ್ರೀ ಮೃತ್ಯುಂಜಯ ಪುರವಂತರ ಸಂಘದ ವೀರಗಾಸಿ ಕಲಾ ತಂಡದವರಿಂದ ಗುಗ್ಗಳ ಕಾರ್ಯಕ್ರಮ ಜರುಗಿತು. ಪುರವಂತರ ನೇತೃತ್ವದಲ್ಲಿ ವಿಧಿ ವಿಧಾನದ ಮೂಲಕ ದಾರದ ಮೂಲಕ ಭಕ್ತರು ಶಸ್ತ್ರ ಹಾಕಿಸಿಕೊಂಡರು. ಭಕ್ತರು ತಮ್ಮ ನಾಲಿಗೆ, ಕೆನ್ನೆ, ಕೈ ಭಾಗ ಸೇರಿದಂತೆ ದೇಹದ ವಿವಿಧ ಕಡೆಗಳಲ್ಲಿ ಶಸ್ತ್ರ ಚುಚ್ಚಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು.

ನಂತರ ಗ್ರಾಮದಲ್ಲಿ 101 ಕುಂಭ ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ವೀರಭದ್ರೇಶ್ವರನ ಭಾವಚಿತ್ರದೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಜರುಗಿತು.

ಗ್ರಾಪಂ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರು, ಉಪಾಧ್ಯಕ್ಷೆ ಅನ್ನಪೂರ್ಣ ಸುರೇಶ ಮ್ಯಾಗಳೇಶಿ, ಹಿರಿಯರಾದ ರೇವಣಸಿದ್ದಯ್ಯ ಅರಳಲೆ ಹಿರೇಮಠ, ಚನ್ನವೀರಯ್ಯ ಹಿರೇಮಠ, ಮಹಾಲಿಂಗಯ್ಯ ಹಿರೇಮಠ, ಶೇಖರಗೌಡ್ರ ಮಾಲಿಪಾಟೀಲ, ಶೇಖರಗೌಡ್ರ ಪೋಲೀಸ ಪಾಟೀಲ, ಶಿವಪುತ್ರಪ್ಪ ಶಿವಶಿಂಪಿ, ನೀಲಕಂಠಪ್ಪ ಗಾಳಿ, ಶಶಿಧರ ಹೂಗಾರ, ಶರಣಪ್ಪ ಉಮಚಗಿ, ವೀರಭದ್ರಪ್ಪ ಕುದ್ರಿಕೋಟಗಿ, ಈರಣ್ಣ ಎಮ್ಮಿ, ಮಂಗಳಪ್ಪ ಛಟ್ಟಿ, ವಿಶ್ವನಾಥ ಮರಿಬಸಪ್ಪನವರ, ಶಂಕ್ರಪ್ಪ ನಿಂಗಾಪುರ, ಪ್ರಭು ಕೀರ್ತಗೌಡ್ರ, ಮೃತ್ಯುಂಜಯ ಪಾಟೀಲ, ಬಸಣ್ಣ ಎಮ್ಮಿ, ಕೊಟ್ರೇಶ ಉಮಚಗಿ, ಮುದಕಪ್ಪ ಉಮಚಗಿ, ಭರತೇಶ ರೇವಡಿ, ವೀರೇಶ ಉಮಚಗಿ, ಈರಣ್ಣ ಉಮಚಗಿ, ಸುರೇಶ ಮಡಿವಾಳರ ಶಿಕ್ಷಕರು, ಗುರುರಾಜ ಇಲಕಲ್ಲ, ಮಂಜುನಾಥ ಛಟ್ಟಿ, ಸಿದ್ದನಗೌಡ್ರ ಕೀರ್ತಗೌಡ್ರ, ವೀರಭದ್ರಪ್ಪ ಎಮ್ಮಿ, ಮಹೇಶ ಕುಷ್ಟಗಿ ಶೆಟ್ಟರ್, ನಾಗರಾಜ ಕುಷ್ಟಗಿ ಶೆಟ್ಟರ್, ಮಂಗಳೇಶ ಕುಷ್ಟಗಿ ಶೆಟ್ಟರ್, ಬಸವರಾಜ ಪಟ್ಟಣಶೆಟ್ಟಿ, ಮಲ್ಲಪ್ಪ ಎಮ್ಮಿ, ಶರಣಪ್ಪ ಎಮ್ಮಿ, ಶಿವು ಉಮಚಗಿ, ಮಲ್ಲಪ್ಪ ಶಿವಶಿಂಪಿ, ವಿರೂಪಾಕ್ಷಪ್ಪ ಕೊಡ್ಲಿ, ಮಲ್ಲಪ್ಪ ಮರಿಬಸಪ್ಪನವರ, ಶ್ರೀ ವೀರಭದ್ರೇಶ್ವರ ಕ್ಷೇಮಾಭಿವೃದ್ಧಿ ಸಂಘದವರಿದ್ದರು.