ಸಾರಾಂಶ
ಶ್ರೀ ಬಸವಣ್ಣ ಹಾಗೂ ಶ್ರೀ ವೀರಭದ್ರೇಶ್ವರ ದೇವರ ನೂತನ ರಥ ಲೋಕಾರ್ಪಣೆ, ರಥೋತ್ಸವ ಹಾಗೂ ಲಕ್ಷದೀಪೋತ್ಸವ ಮತ್ತು ಜೀವನ ದರ್ಶನ ಪ್ರವಚನ, ಕಡುಬಿನ ಕಾಳಗ, ಕುಸ್ತಿ ಪಂದ್ಯಾವಳಿಗಳು ಮತ್ತು ಜಾತ್ರಾ ಮಹೋತ್ಸವ ಏ. ೧ರಿಂದ ೮ರ ವರೆಗೆ ನಡೆಯಲಿವೆ.
ಮುಂಡಗೋಡ: ಶ್ರೀ ಬಸವಣ್ಣ ಹಾಗೂ ಶ್ರೀ ವೀರಭದ್ರೇಶ್ವರ ದೇವರ ನೂತನ ರಥ ಲೋಕಾರ್ಪಣೆ, ರಥೋತ್ಸವ ಹಾಗೂ ಲಕ್ಷದೀಪೋತ್ಸವ ಮತ್ತು ಜೀವನ ದರ್ಶನ ಪ್ರವಚನ, ಕಡುಬಿನ ಕಾಳಗ, ಕುಸ್ತಿ ಪಂದ್ಯಾವಳಿಗಳು ಮತ್ತು ಜಾತ್ರಾ ಮಹೋತ್ಸವ ಏ. ೧ರಿಂದ ೮ರ ವರೆಗೆ ನಡೆಯಲಿವೆ ಎಂದು ಶ್ರೀ ಬಸವಣ್ಣ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಿ.ಎಸ್. ಗಾಣಿಗೇರ ತಿಳಿಸಿದರು.
ಸೋಮವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಈ ಮಾಹಿತಿ ನೀಡಿದ ಅವರು, ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ಜರುಗಲಿವೆ.ಏ. ೧ರಂದು ಬೆಳಗ್ಗೆ ರುದ್ರಮನಿ ಸ್ವಾಮಿಗಳು ಹಿರೇಮಠ ಅವರ ಮಾರ್ಗದರ್ಶನದಲ್ಲಿ ಪಂಚಗವ್ಯ ಪ್ರೋಕ್ಷಣೆಯೊಂದಿಗೆ ಮಂದಿರ ಶುದ್ಧೀಕರಣ, ನವಗ್ರಹ ಪೂಜೆ, ಮಹಾ ರುದ್ರಾಭಿಷೇಕ ಹಾಗೂ ಶ್ರೀ ವೀರಭದ್ರೇಶ್ವರ ದೇವರಿಗೆ ಗುಗ್ಗಳ ಸೇವೆ ನೆರವೇರಲಿದೆ.
ಏ. ೧ರಿಂದ ೫ರ ವರೆಗೆ ಪ್ರತಿದಿನ ಸಂಜೆ ೬.೩೦ರಿಂದ ಜೀವನ ದರ್ಶನ ಪ್ರವಚನ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ. ಏ. ೬ರಂದು ನೂತನ ರಥದ ಲೋಕಾರ್ಪಣೆ ಹಾಗೂ ರಥೋತ್ಸವ ಜರುಗಲಿದೆ. ಏ. ೭ರಂದು ಸಾಯಂಕಾಲ ಕಡುಬಿನ ಕಾಳಗ ಹಾಗೂ ಲಕ್ಷ ದೀಪೋತ್ಸವ, ಏ. ೮ರಂದು ಮಧ್ಯಾಹ್ನ ೩ ಗಂಟೆಯಿಂದ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ಅವರು ತಿಳಿಸಿದರು.ಜಾತ್ರಾ ಸಮಿತಿ ಅಧ್ಯಕ್ಷ ಉಮೇಶ್ ಬಿಜಾಪುರ, ಕಾರ್ಯದರ್ಶಿ ನಾಗಭೂಣ ಹಾವಣಗಿ, ಪ್ರಮುಖರಾದ ಬಿ.ಎಂ. ಕೋಟಿ, ರಾಮಣ್ಣ ಕುನ್ನೂರ, ಫಣಿರಾಜ ಹದಳಗಿ, ಮಂಜುನಾಥ ಪಾಟೀಲ್, ಎಸ್.ಎಸ್. ಅಂಗಡಿ, ವಕೀಲರಾದ ಸಂಗಮೇಶ ಕೊಳ್ಳಾನವರ ಇದ್ದರು. ರಾಜಶೇಖರ್ ಹುಬ್ಬಳ್ಳಿ ಸ್ವಾಗತಿಸಿದರು. ಸಂಗಮೇಶ ಕೊಳ್ಳಾನವರ್ ವಂದಿಸಿದರು.