ಸಾರಾಂಶ
ವಿಜೃಂಭಣೆಯ ವೀರನಾಗಮ್ಮ ದೇವಿಯ ಜಾತ್ರಾ ಮಹೋತ್ಸವ
ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ವಡ್ಡಗೆರೆಯ ಪ್ರಸಿದ್ಧ ವೀರನಾಗಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಜನ ಆಗಮಿಸಿದ್ದರು. ಬೇಸಿಗೆಯ ಕಡುಬಿಸಿಲನ್ನು ಲೆಕ್ಕಿಸದೆ ಪುಟ್ಟ ಮಕ್ಕಳೊಂದಿಗೆ ಕುಟುಂಬ ಸಮೇತ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.ಪ್ರತಿ ವರ್ಷವು ಹಿಂದುಗಳ ಮೊದಲ ಹೊಸ ವರ್ಷದ ಚೈತ್ರ ಮಾಸದ ಚಂದ್ರಮಾನ ಯುಗಾದಿ ಹಬ್ಬದ ಮಾರನೇ ದಿನ ವಡ್ಡಗೆರೆ ವೀರನಾಗಮ್ಮ ದೇವಿಯ ಜಾತ್ರೆಯು ಧಾರ್ಮಿಕ ಸಾಂಪ್ರದಾಯಕ ಆಚರಣೆಯೊಂದಿಗೆ ರಾಜ್ಯ ಸೇರಿದಂತೆ ನೆರೆ ರಾಜ್ಯವಾದ ತಮಿಳುನಾಡು, ಕೇರಳ , ಆಂದ್ರ ಪ್ರದೇಶ, ತೆಲಂಗಾಣ. ಗೋವಾ ರಾಜ್ಯಗಳಿಂದಲು ಸಹ ಭಕ್ತಾದಿಗಳು ಈ ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಾರೆ. ವಿಶೇಷವಾಗಿ ಜಾತ್ರಾ ದಿನದಂದು ಮಹಿಳೆಯರು ಮತ್ತು ಹೆಣ್ಣು ಮಕ್ಕಳು ದೇವಿಯ ಕಲ್ಯಾಣಿಯಲ್ಲಿ ಮಿಂದು ಉರುಳು ಸೇವೆ ಮತ್ತು ದೀರ್ಗದಂಡ ಸೇವೆಗಳನ್ನು ಹರಿಕೆ ಮುಖಾಂತರ ತೀರಿಸುತ್ತಾರೆ. ಈ ಜಾತ್ರೆಯಲ್ಲಿ ದೇವಿಗೆ ಜಲದಿ, ಆರತಿ ಸೇವೆ, ಉತ್ಸವ ನಡೆಯಲಿದ್ದು ಭಕಾದಿಗಳು ಸ್ವಯಂ ಆಗಿ ಪಾನಕ ಮತ್ತು ಮಜ್ಜಿಗೆಯನ್ನು ಭಕ್ತರಿಗೆ ನೀಡಿದರು. ದೇವಾಲಯದ ಆಡಳಿತ ಮಂಡಳಿ ಹಾಗೂ ವಡ್ಡಗೆರೆ ಗ್ರಾಮಸ್ಥರು ಜಾತ್ರೆಗೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು. ಒಟ್ಟಾರೆಯಾಗಿ ವಡ್ಡಗೆರೆ ವೀರನಾಗಮ್ಮ ಜಾತ್ರೆಯು ವಿವಿಧ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಭಕ್ತರ ಕಾಣಿಕೆಯು ದೇವಾಲಯಕ್ಕೆ ನೀಡಿ: ವಡ್ಡಗೆರೆ ವೀರನಾಗಮ್ಮ ದೇವಿ ಜಾತ್ರೆಗೆ ಆಗಮಿಸಿದ್ದ ಶ್ರೀ ಹನುಮಂತನಾಥ ಸ್ವಾಮೀಜಿ ದೇವಾಲಯಗಳ ಬಗ್ಗೆ ಸರ್ಕಾರ ಮತ್ತು ಮುಜುರಾಯಿ ಇಲಾಖೆಯ ದೋರಣೆ ಬಗ್ಗೆ ತೀರ್ವ ಅಸಮಧಾನ ವ್ಯಕ್ತಪಡಿಸಿ ಈ ದೇವಾಲಯವು ಸುಮಾರು 850 ವರ್ಷಗಳ ಇತಿಹಾಸವಿದ್ದು ಭಕ್ತರ ಮತ್ತು ಗ್ರಾಮಸ್ಥರ ಹಾಗೂ ಟ್ರಸ್ಟ್ ಶ್ರಮದಿಂದ ಮುಂದುವರೆಯುತ್ತಿದೆ. ಈ ದೇವಾಲಯವನ್ನು ಸರ್ಕಾರವು ಮುಜುರಾಯಿ ಇಲಾಖೆಗೆ ಸೇರಿಸಿಕೊಂಡಿದ್ದು, ಸದರಿ ದೇವಾಲಯದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆಯ ಹುಂಡಿ ಹಣನ್ನು ತಪ್ಪದೇ ತೆಗೆದುಕೊಂಡು ಹೋಗಿ ಸರ್ಕಾರಕ್ಕೆ ಸಲ್ಲಿಸುತ್ತಾರೆ. ಆದರೆ ದೇವಾಲಯದ ಜಾತ್ರೆ ಹಾಗೂ ಅಭಿವೃದ್ಧಿಗೆ ಯಾವುದೇ ಗಮನ ನೀಡದ ಇಲಾಖೆಗಳು ಹಾಗೂ ಸರ್ಕಾರವು ದೇವರಿಗೆ ಸಲ್ಲಿಸಿದ್ದ ಕಾಣಿಕೆಯನ್ನು ಬಳಸಿಕೊಳ್ಳುವ ಹಕ್ಕಿಲ್ಲ. ಇದು ದೇಶದ ಮತ್ತು ರಾಜ್ಯದ ಎಲ್ಲಾ ಮುಜುರಾಯಿ ದೇವಾಲಯಗಳ ದುಸ್ಥಿತಿ ಇದಾಗಿದೆ. ಕೂಡಲೇ ಸರ್ಕಾರವು ದೇವಾಲಯಗಳನ್ನು ದೂರಿನ ಗ್ರಾಮಸ್ಥರಿಗೆ ಮತ್ತು ನಗರದ ಟ್ರಸ್ಟ್‌ಗೆ ವರ್ಗಾವಣೆ ಮಾಡಿ. ಇಲ್ಲವೇ ಭಕ್ತರ ಹಣ ದೇವಾಲಯದ ಅಭಿವೃದ್ದಿಗೆ ನೀಡಿ ಎಂದು ಆಗ್ರಹಿಸಿದರು. ಜಾತ್ರೆಗೆ ಭೇಟಿ ನೀಡಿದ ವಿ ಸೋಮಣ್ಣ: ವಡ್ಡಗೆರೆ ವೀರನಾಗಮ್ಮ ಜಾತ್ರೆಗೆ ತುಮಕೂರು ಕ್ಷೇತ್ರದ ಎನ್,ಡಿ,ಎ ಅಭ್ಯರ್ಥಿ ವಿ.ಸೋಮಣ್ಣ ಆಗಮಿಸಿ ವೀರನಾಗಮ್ಮನಿಗೆ ಪೂಜೆ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡಿ, ಇತಿಹಾಸ ಪ್ರಸಿದ್ಧ ಪುರಾತನ ಕಾಲದಿಂದಲು ಶ್ರೀ ವೀರನಾಗಮ್ಮ ದೇವಾಲಯದ ಅಭಿವೃದ್ದಿಗೆ ಭಕ್ತನಾಗಿ ನನ್ನ ಶಕ್ತಿ ಮೀರಿ ಸೇವೆಯನ್ನು ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಸೋಮಣ್ಣನವರು ಭಕ್ತಾದಿಗಳಿಗೆ ಊಟ ಬಡಿಸಿದ್ದು ವಿಷೇಶವಾಗಿತ್ತು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ವೀರಕ್ಯಾತರಾಯ, ಕಾರ್ಯದರ್ಶಿ ನಾಗೇಶ್, ಧರ್ಮದರ್ಶಿ ಕ್ಯಾತಪ್ಪ, ಡಾ ರಾಮಚಂದ್ರ, ವೀರನಾಗಪ್ಪ, ಶಿವಕುಮಾರ್, ಮಾರುತಿ, ಬಿಜೆಪಿ ಅನಿಲ್ಕುಮಾರ್ , ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಕೊರಟಗೆರೆ ಮಂಡಲ ಅಧ್ಯಕ್ಷ ಡಾ.ದರ್ಶನ್, ಮಾಜಿ ಅಧ್ಯಕ್ಷ ಪವನ್‌ಕುಮಾರ್, ಮುಖಂಡರಾದ ವೆಂಕಟಾಚಲಯ್ಯ, ಲಿಂಗರಾಜು, ದ್ಯಾಡಿ ವೆಂಕಟೇಶ್, ನಟರಾಜು, ದಯಾನಂದ್, ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿರಕ್ಯಾತರಾಯ, ಮುಖಂಡರಾದ ಸಾಕಣ್ಣ, ನಾಗಭೂಷಣ್ ಮತ್ತಿತತರು ಹಾಜರಿದ್ದರು.