ಎರಡು ವರ್ಷದಲ್ಲಿ ವೀರಾಪುರ ಅಭಿವೃದ್ಧಿ: ಡಿಕೆಸು

| Published : Apr 16 2024, 01:00 AM IST

ಎರಡು ವರ್ಷದಲ್ಲಿ ವೀರಾಪುರ ಅಭಿವೃದ್ಧಿ: ಡಿಕೆಸು
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಮುಂದಿನ ಎರಡು ವರ್ಷಗಳಲ್ಲಿ ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮೀಜಿಯ ಹುಟ್ಟೂರಾದ ವೀರಾಪುರದ ಅಭಿವೃದ್ಧಿಯನ್ನು ಪೂರ್ಣಗೊಳಿಸಿ ಉದ್ಘಾಟಿಸುತ್ತೇವೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹೇಳಿದರು.

ಮಾಗಡಿ: ಮುಂದಿನ ಎರಡು ವರ್ಷಗಳಲ್ಲಿ ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮೀಜಿಯ ಹುಟ್ಟೂರಾದ ವೀರಾಪುರದ ಅಭಿವೃದ್ಧಿಯನ್ನು ಪೂರ್ಣಗೊಳಿಸಿ ಉದ್ಘಾಟಿಸುತ್ತೇವೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹೇಳಿದರು.

ತಾಲೂಕಿನ ನಾರಸಂದ್ರದಲ್ಲಿ ಕಾಂಗ್ರೆಸ್ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಜಾತಿ ಧರ್ಮ ಗೊತ್ತಿಲ್ಲ. ನೀವು ನನಗೆ ಮತ ಹಾಕುತ್ತೀರಿ ಎಂಬ ವಿಶ್ವಾಸವಿದೆ. ಕೆಲಸ ಮಾಡಿದವನಿಗೆ ಕೂಲಿ ಕೊಡುವುದಿಲ್ಲವೇ? ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಉಪಮುಖ್ಯಮಂತ್ರಿಗಳಾಗಿದ್ದು, ಅವರು ಕುಂತರೆ ನಿಂತರೆ ನೊಣವಿನಕೆರೆ ಅಜ್ಜಯ್ಯ ಅವರನ್ನು ಪೂಜೆ ಮಾಡುತ್ತಾರೆ, ನಾವು ಜಾತಿ, ಧರ್ಮ ನೋಡಿ ಪೂಜೆ ಮಾಡುತ್ತೇವಾ? ನಾವು ಎಲ್ಲಾ ಜಾತಿ ಧರ್ಮದವರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತೇವೆ. ಶಿವಕುಮಾರ್ ಅವರು ಡಿಸಿಎಂ ಆಗಲು ಅಜ್ಜಯ್ಯನವರ ಸಂಪೂರ್ಣ ಆಶೀರ್ವಾದವಿದೆ. ಈ ಚುನಾವಣೆಯಲ್ಲೂ ನನಗೂ ಅಜ್ಜಯ್ಯನವರ ಆಶೀರ್ವಾದವಿದೆ ಎಂದು ಹೇಳಿದರು.

ನಿಮ್ಮ ತಾಲೂಕಿನ ಅಭಿವೃದ್ಧಿಗಾಗಿ ನಿಮ್ಮ ಮತ ಹಾಕಿ ಕಳೆದ 10 ವರ್ಷಗಳಿಂದ ಮೋದಿ ಅವರು ಕೇವಲ ಒಂದೇ ಭಾಷಣ ಮಾಡುತ್ತಿದ್ದಾರೆ. ನಿಮ್ಮ ಆದಾಯ ಡಬಲ್ ಆಗಲಿದೆ ಎಂದು ಹೇಳುತ್ತಿದ್ದಾರೆ. ನಿಮ್ಮ ಆದಾಯ ಡಬಲ್ ಆಗಿದೆಯಾ? ಖರ್ಚು ಡಬಲ್ ಆಗಿದೆಯಾ? ವೆಚ್ಚ ಡಬಲ್ ಆಗಿರುವಾಗ ಮೋದಿ ಜಪ ಏಕೆ ಮಾಡುತ್ತೀರಿ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ನಮಗೆ ಮತ್ತೊಮ್ಮೆ ಶಕ್ತಿ ನೀಡಿ ಹೆಚ್ಚಿನ ಕೆಲಸ ಮಾಡಲು ಅವಕಾಶ ಕೊಡಿ. ಮುಂದಿನ ಎರಡು ವರ್ಷಗಳಲ್ಲಿ ಲಿಂಕ್ ಕೆನಾಲ್ ಮೂಲಕ ಶ್ರೀರಂಗ ಏತ ನೀರಾವರಿ ಯೋಜನೆ ಮೂಲಕ ನೀರು ಕೊಡಿಸುವ ಜವಾಬ್ದಾರಿ ನನ್ನ ಹಾಗು ಬಾಲಕೃಷ್ಣ, ಡಿ.ಕೆ.ಶಿವಕುಮಾರ್, ಡಾ.ರಂಗನಾಥ್‌ ಅವರದು. ವಿರೋಧ ಪಕ್ಷದವರು ಇರುವುದೇ ಮಾತನಾಡಲು ಅವರು ಮಾತನಾಡುತ್ತಿದ್ದರೆ, ನಾನು ಎಚ್ಚರಿಕೆಯಿಂದ ಕೆಲಸ ಮಾಡಬಹುದು. ಅವರ ಅವಧಿಯಲ್ಲಿ ಏನು ಮಾಡಿದ್ದಾರೋ ಮಾಡಿಲ್ಲವೋ ಗೊತ್ತಿಲ್ಲ. ಜನ ತೀರ್ಪು ನೀಡಿ ಬಾಲಕೃಷ್ಣ ಅವರಿಗೆ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಹೀಗಾಗಿ ವಿರೋಧ ಪಕ್ಷದವರಿಗೆ ಶುಭ ಕೋರುತ್ತೇನೆ. ಬಾಲಕೃಷ್ಣ ಅವರಂತೆ ನನಗೂ ಹೆಚ್ಚಿನ ಮತ ನೀಡಿ ಆಶೀರ್ವಾದ ಮಾಡಿ ನಾವು ನಿಮ್ಮ ಸೇವೆಯನ್ನು ಮಾಡುತ್ತೇವೆ ಎಂದು ತಿಳಿಸಿದರು.

ಶಾಸಕ ಬಾಲಕೃಷ್ಣ ಮಾತನಾಡಿ, ಡಿ.ಕೆ.ಸುರೇಶ್/ಮೋದಿ ಅಷ್ಟೇ ನೇರ ಪೈಪೋಟಿ. ಎನ್‌ಡಿಎ ಮೈತ್ರಿ ಅಭ್ಯರ್ಥಿ ನಮಗೆ ಲೆಕ್ಕಕ್ಕೆ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಸಮಾಜ ನನ್ನ ಪರವಾಗಿ ನಿಂತಿದೆ. ಬೆಂಗಳೂರಿನ ಯುವಕರು ಮೋದಿ ಪರವಾಗಿ ನಿಲ್ಲುತ್ತಿದ್ದು, ಇವರ ಮನವೊಲಿಸುವ ಕೆಲಸವನ್ನು ಪೋಷಕರು ಮಾಡಬೇಕು. ಬೆಂಗಳೂರಿನಿಂದ ಬಂದು ಮತದಾನದ ದಿನ ಮೋದಿಗೆ ಮತ ಹಾಕುತ್ತೇನೆ ಎಂದು ಹೇಳಿ ಹೋದ ಮೇಲೆ ನಿಮ್ಮ ಊರಿನ ಕೆಲಸವನ್ನು ನಾವೇ ಮಾಡಬೇಕು. ಇನ್ನೂ ನಾಲ್ಕು ವರ್ಷ ಅಧಿಕಾರದಲ್ಲಿ ಇರುವುದರಿಂದ ನಮ್ಮ ಊರಿನ ಕೆಲಸ ಆಗಬೇಕಾದರೆ ಸಂಸದ ಡಿಕೆ ಸುರೇಶ್ ಅವರಿಗೆ ಮತ ಹಾಕಬೇಕು. ಭಾಷಣ, ಸಭೆ, ಸಮಾರಂಭ ನಡೆಸಿದರೆ ಪ್ರಯೋಜನವಾಗುವುದಿಲ್ಲ. ಯುವಕರ ಮನವೊಲಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಬೇಕು ಎಂದು ಹೇಳಿದರು.

ಮಾಜಿ ಸಚಿವ ಹೆಚ್.ಎಂ.ರೇವಣ್ಣ, ವೀರಶೈವ ಮುಖಂಡರಾದ ಶಿವಪ್ರಸಾದ್, ತಟ್ಟೆಕೆರೆ ಶರ್ಮಾ ಮಾತನಾಡಿದರು. ಮುಖಂಡರಾದ ಜಯಶಂಕರ್, ಚಂದ್ರಶೇಖರ, ಬಿಡದಿ ರಾಜಣ್ಣ, ಕೂಟಗಲ್ ರಾಜಣ್ಣ, ದೀಪು, ಮಾದೇಶ್, ಹೊನ್ನಯ್ಯ, ಮಲ್ಲಿಕಾರ್ಜುನ, ಮರಳಸಿದ್ದಪ್ಪ, ಶಿವಕುಮಾರ್, ಯತೀಶ್, ಆರಾಧ್ಯ, ಚಕ್ರಬಾವಿ ಬಸವರಾಜು, ಪಂಚಾಕ್ಷರಿ, ಪುಟಾಣಿ ಕುಮಾರ್, ನಾಗರಾಜು, ಪಾಲನೇತ್ರ, ಜಯಣ್ಣ, ಜಗದೀಶ್, ಲೋಕೇಶ್, ಬಿಡದಿ ಯೋಗಣ್ಣ ಮತ್ತಿತರರು ಭಾಗವಹಿಸಿದ್ದರು. (ಫೋಟೊ ಕ್ಯಾಪ್ಷನ್‌)

ಮಾಗಡಿ ತಾಲೂಕಿನ ನಾರಸಂದ್ರದಲ್ಲಿ ಕಾಂಗ್ರೆಸ್ ವೀರಶೈವ ಲಿಂಗಾಯತ ಮುಖಂಡರುಗಳ ಸಭೆಯನ್ನು ಸಂಸದ ಡಿ.ಕೆ.ಸುರೇಶ್ ಉದ್ಘಾಟಿಸಿದರು. ಶಾಸಕ ಬಾಲಕೃಷ್ಣ, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಇತರರಿದ್ದರು.