ಸುನಿಲ್‌ ಬೋಸ್‌ ಗೆಲುವಿಗೆ ಶ್ರಮಿಸಲು ವೀರಶೈವ ಲಿಂಗಾಯತ ಕಾಂಗ್ರೆಸ್ ಬಳಗ ತೀರ್ಮಾನ

| Published : Apr 24 2024, 02:16 AM IST

ಸುನಿಲ್‌ ಬೋಸ್‌ ಗೆಲುವಿಗೆ ಶ್ರಮಿಸಲು ವೀರಶೈವ ಲಿಂಗಾಯತ ಕಾಂಗ್ರೆಸ್ ಬಳಗ ತೀರ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಸರಗೂರು ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ತೆರದ ವಾಹನದಲ್ಲಿ ನಡೆದ ರೋಡ್ ಶೋ ಒಂದನೇ ಮುಖ್ಯ ರಸ್ತೆ ಮಾರ್ಗವಾಗಿ ಎಸ್‌.ಬಿಎಂ ಬ್ಯಾಂಕ್ ಮಾರ್ಗವಾಗಿ ಸಂತೇಮಾಸ್ತಮ್ಮ ದೇವಸ್ಥಾನದಲ್ಲಿ ಕೊನೆಗೊಂಡಿತು. ರೋಡ್ ಶೋ ವೇಳೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಕಾಂಗ್ರೆಸ್ ಮತ ನೀಡಬೇಕೆಂದು ಅವರು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಸರಗೂರು

ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರಿಗೆ ಮತ ನೀಡುವ ಮೂಲಕ ಅವರ ಗೆಲುವಿಗೆ ಶ್ರಮಿಸಬೇಕೆಂದು ವೀರಶೈವ ಲಿಂಗಾಯತ ಕಾಂಗ್ರೆಸ್ ಬಳಗ ತೀರ್ಮಾನಿಸಿತು.

ತಾಲೂಕಿನ ಕಾಳೇಗೌಡನಹುಂಡಿ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ವೀರಶೈವ ಲಿಂಗಾಯತ ಕಾಂಗ್ರೆಸ್ ಬಳಗದ ಅಧ್ಯಕ್ಷ ಎಂ.ಎನ್. ಅಣ್ಣಯ್ಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದೆ. ಸಮಾಜದ ಏಳಿಗೆಗಾಗಿಯೂ ಪಕ್ಷ ಶ್ರಮಿಸುತ್ತಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿತು.

ಬಳಗದ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಪ್ರಭುಸ್ವಾಮಿ, ಅಧ್ಯಕ್ಷ ಎಂ.ಎನ್. ಅಣ್ಣಯ್ಯಸ್ವಾಮಿ ಮಾತನಾಡಿದರು.

ಎಸ್.ವಿ. ಯೋಗೀಶ್, ಭೃಂಗೀಶ್, ಎಂ. ಕೆಂಡಗಣ್ಣಸ್ವಾಮಿ, ಕೆ. ರಾಜಪ್ಪ, ಸಿದ್ದಪ್ಪ, ಮಾದಪ್ಪ, ಮಂಜುನಾಥ್, ಗುರುಸ್ವಾಮಿ, ಬಸವರಾಜು, ಮಹದೇವಸ್ವಾಮಿ, ಮಹೇಶ್, ಪಾಪಣ್ಣ, ಯೋಗೀಶ್, ನೀಲಕಂಠ, ಗುರುಮೂರ್ತಿ, ಬ್ರಹ್ಮದೇವ ಇದ್ದರು.ಸರಗೂರಿನಲ್ಲಿ ಕಾಂಗ್ರೆಸ್‌ನಿಂದ ರೋಡ್ ಶೋ

ಸರಗೂರು ಪಟ್ಟಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕ ಅನಿಲ್ ಚಿಕ್ಕಮಾದು ಅವರು ರೋಡ್ ಶೋ ನಡೆಸಿ ಚಾಮರಾಜನಗರ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರ ಪರ ಮತಯಾಚಿಸಿದರು.ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ತೆರದ ವಾಹನದಲ್ಲಿ ನಡೆದ ರೋಡ್ ಶೋ ಒಂದನೇ ಮುಖ್ಯ ರಸ್ತೆ ಮಾರ್ಗವಾಗಿ ಎಸ್‌.ಬಿಎಂ ಬ್ಯಾಂಕ್ ಮಾರ್ಗವಾಗಿ ಸಂತೇಮಾಸ್ತಮ್ಮ ದೇವಸ್ಥಾನದಲ್ಲಿ ಕೊನೆಗೊಂಡಿತು.ರೋಡ್ ಶೋ ವೇಳೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಕಾಂಗ್ರೆಸ್ ಮತ ನೀಡಬೇಕೆಂದು ಅವರು ಮನವಿ ಮಾಡಿದರು. ಕಾರ್ಯಕರ್ತರು ಬೃಹತ್ ಹೂವಿನ ಹಾರ ಹಾಕಿ ಸಂಭ್ರಮಿಸಿದರು.

ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಸಚಿವ ಎಂ.ಶಿವಣ್ಣ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಪಿ ರವಿ, ಕೆ. ಚಿಕ್ಕವೀರನಾಯಕ, ಎಸ್.ಎಸ್. ಪ್ರಭುಸ್ವಾಮಿ, ನಾಗರಾಜ್, ಪಪಂ ಸದಸ್ಯ ಶ್ರೀನಿವಾಸ್, ಚಲುವಕೃಷ್ಣ, ಸಿದ್ದರಾಜು, ರಮೇಶ್, ಎಂ. ಕೆಂಡಗಣ್ಣಸ್ವಾಮಿ, ಎಂ.ಎನ್. ಅಣ್ಣಯ್ಯಸ್ವಾಮಿ, ಜಿ.ವಿ. ಸೀತಾರಾಮ್, ಎಸ್.ಆರ್. ಜಯಮಂಗಳಾ, ಭೀಮಯ್ಯ, ಎಚ್.ಸಿ. ನರಸಿಂಹಮೂರ್ತಿ, ಶಿವಶಂಕರನ್, ಬಿಲ್ಲೇಶ್, ಕಲ್ಲಂಬಾಳು ನೀಲಕಂಠ, ನಾಗರಾಜು, ಮೈಮುಲ್ ನಿರ್ದೇಶಕ ಕೆ. ಈರೇಗೌಡ, ಬಿ.ಸಿ.ಬಸಪ್ಪ ಇದ್ದರು.