ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ವೀರಶೈವ ಲಿಂಗಾಯತ ಸಮಾಜವು ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಸಮಾಜವಾಗಿದೆ. ಅಲ್ಲದೇ ಅನೇಕ ಉಪ-ಪಂಗಡಗಳನ್ನು ಹೊಂದಿದೆ. ರಾಜ್ಯದಲ್ಲಿ ವೀರಶೈವ ಲಿಂಗಾಯತ ಜನಸಂಖ್ಯೆ ೩ಕೋಟಿ ಇತ್ತು. ಆದರೆ ಇತ್ತೀಚಿನ ಜನಗಣತಿ ಅಂಕಿಅಂಶಗಳಲ್ಲಿ ಕೇವಲ ೬೦ಲಕ್ಷ ಜನಸಂಖ್ಯೆ ಇದೆ ಎಂದು ತೋರಿಸಿದೆ ಕೆಲವರು ಸರ್ಕಾರದಿಂದ ಸಿಗುವ ಸೌಲಭ್ಯಗಳ ಆಸೆ ಅಮಿಷಗಳಿಗೆ ಒಳಗಾಗಿ ಬೇರೆಯಾಗಿ ಹೋಗಿದೆ ಅದನ್ನು ಒಗ್ಗೂಡಿಸುವ ಕೆಲಸ ನಡೆಸಲಾಗುತ್ತಿದೆ ಎಂದು ಅಫಜಲಪೂರ ಶಾಸಕ ಎಂ.ವೈ.ಪಾಟೀಲ ಹೇಳಿದರು.ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು, ಬಸವ ಜಯಂತಿ ಅನೇಕ ವರ್ಷಗಳ ಹಿಂದೆ ರೈತರು ಎತ್ತುಗಳಿಗೆ ಅಲಂಕಾರ ಮಾಡಿ ಮೆರವಣಿಗೆ ನಡೆಸುತ್ತಿದ್ದರು. ಅನೇಕ ಧರ್ಮಗಳಲ್ಲಿ ವೈಷಮ್ಯದಿಂದಾಗಿ ಜಿಗುಪ್ಸೆಗೆ ಒಳಗಾಗಿದೆ ಸಮಾಜವನ್ನು ಒಂದುಗೂಡಿಸುವುದು ತುಂಬಾ ಅಗತ್ಯವಾಗಿದೆ.ಸಮಾಜದಲ್ಲಿ ಒಡೆದಾಳುವ ನೀತಿಯಿಂದಾಗಿವೆ. ಕಲ್ಯಾಣ ನಾಡಿನಲ್ಲಿ ಬಸವಣ್ಣನವರ ಗತವೈಭವ ಮತ್ತೆ ಬರಬೇಕಾಗಿದೆ. ಜಗತ್ತಿನಲ್ಲಿಯೇ ಬಸವಣ್ಣನವರ ಸಾಮಾಜಿಕ ನ್ಯಾಯ ನೀಡಿದ್ದಾರೆ. ಅದೇ ಮಾದರಿಯಲ್ಲಿ ಡಾ|ಬಿ..ಆರ್.ಅಂಬೇಡ್ಕರ್ ಪ್ರಜಾಪ್ರಭುತ್ವಕ್ಕೆ ಸಂವಿಧಾನವನು ರಚಿಸಿದ್ದಾರೆ. ಸಂವಿಧಾನದಲ್ಲಿ ಬಸವಣ್ಣನವರ ವಿಚಾರಧಾರೆಗಳು ಒಳಗೊಂಡಿವೆ. ಭಾರತದ ಸಂವಿಧಾನ ಅಪ್ಪಿಕೊಳ್ಳುವ ಮತ್ತು ಒಪ್ಪುವಂತಹದಾಗಿದೆ. ಬಸವಣ್ಣನವರ ವಚನ ಸಾಹಿತ್ಯವನ್ನು ಉಳಿಸಬೇಕಾಗಿದೆ. ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ವಚನಗಳು ದಿಕ್ಕುಪಾಲಾಗಿ ಹೋಗಿದ್ದವು. ಅವುಗಳನ್ನು ಕಾಪಾಡಿ ಮತ್ತೆ ಗತವೈಭವ ಕಾಣಲು ಸಾಧ್ಯವಾಗಿವೆ ಎಂದರು.ಕಲಬುರಗಿ ನಗರದಲ್ಲಿ ಏಪ್ರೀಲ್ ೨೯,೩೦ರಂದು ಎರಡು ದಿನಗಳ ಕಾಲ ನಡೆಯುವ ಬಸವ ಜಯಂತಿಯಲ್ಲಿ ಅನೇಕ ಗಣ್ಯರು, ಪೂಜ್ಯರನ್ನು ಅಹ್ವಾನಿಸಲಾಗಿದೆ. ಲಿಂಗಪೂಜೆ, ಅಷ್ಟವರ್ಣ ನಡೆಯುತ್ತಿವೆ. ಬಸವಣ್ಣನವರ ವಿಚಾರಗಳು ಮತ್ತು ಅಚರಣೆಗಳು ತಿಳಿಸಿ ಕೊಡುವ ವಿಚಾರ ಮತ್ತು ವೀರಶೈವ ಸಮಾಜವನ್ನು ಒಗ್ಗೂಡಿಸುವ ಬೃಹತ್ ಜಯಂತಿ ಆಚರಣೆ ನಡೆಯಲಿದ್ದು ಇದು ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಹೇಳಿದರು.ವಿಧಾನಪರಿಷತ ಮಾಜಿ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ಕಲ್ಯಾಣ ನಾಡಿನಲ್ಲಿ ಶರಣರು ನೀಡಿದ ಕೊಡುಗೆಗಳು ಮನೆ ಮನಕ್ಕೆ ಮುಟ್ಟುವ ಕೆಲಸ ಮಾಡಬೇಕಾಗಿದೆ. ವೀರಶೈವ ಸಮಾಜದ ಉಪ-ಪಂಗಡಗಳನ್ನು ಒಗ್ಗೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ರಾಜ್ಯಕಾರ್ಯದರ್ಶಿ ರಾಜಶೇಖರ ಸಿರಿ, ಸಿದ್ದು ಅಫಜಲಪೂರ,ಡಿಸಿಸಿ ಬ್ಯಾಂಕ ನಿರ್ದೇಶಕ ಗೌತಮ ಪಾಟೀಲ, ನಂದಿಕುಮಾರ ಪಾಟೀಲ ಮಾತನಾಡಿದರು. ತಾಲೂಕ ವೀರಶೈವ ಸಮಾಜದ ಮುಖಂಡರಾದ ನೀಲಕಂಠ ಸೀಳಿನ, ವಿರೇಶ ಎಂಪಳ್ಳಿ, ಶಿವಕುಮಾರ ಪಾವಡಶೆಟ್ಟಿ, ಗೌಡಪ್ಪಗೌಡ ಕೊಟಗಾ, ಶರಣು ತೆಂಗಳಿ, ಸೂರ್ಯಕಾಂತ ಹುಲಿ, ಶಂಬುಲಿಂಗ ಶಿವಪೂರೆ, ಶಿವುಸ್ವಾಮಿ, ಗಂಗಣ್ಣ ರಟಕಲ್, ರೇವಣಸಿದ್ದಪ್ಪ ಬಡಾ, ಸುರೇಶ ದೇಶಪಾಂಡೆ, ವಿವೇಕಾನಂದ ಪಾಟೀಲ ಇನ್ನಿತರಿದ್ದರು.