ಸಾರಾಂಶ
- ಶ್ರೀ ರೇಣುಕಾಚಾರ್ಯ ಜಯಂತ್ಯುತ್ಸವ, ಯುಗಮಾನೋತ್ಸವ
- - - ಕನ್ನಡಪ್ರಭ ವಾರ್ತೆ ಜಗಳೂರುಜಗತ್ತಿನಲ್ಲಿ ಅನೇಕ ಧರ್ಮಗಳು ಜನ್ಮತಾಳಿ ಅವನತಿ ಹೊಂದಿವೆ. ಹೀಗಿದ್ದರೂ, ವೀರಶೈವ ಧರ್ಮ ಇಂದಿಗೂ ಜೀವಂತ ಇದೆ ಎಂದು ಉಜ್ಜಿಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಲಾಗಿದ್ದ ಆದಿಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯುತ್ಸವ ಹಾಗೂ ಪಂಚಾಚಾರ್ಯ ಯುಗಮಾನೋತ್ಸವ ಕಾರ್ಯಕ್ರಮ ಹಾಗೂ ಧರ್ಮಸಭೆಯಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ರಾಮಾಯಣ ನಡೆದ ತ್ರೇತಾಯುಗದಲ್ಲಿಯೇ ಅನೇಕ ಸಮಾಜಗಳಿಗೆ ಲಿಂಗಧಾರಣೆಗೊಳಿಸಿದ ಜಗದ್ಗುರು ರೇಣುಕಾಚಾರ್ಯರ ಸಾಮಾಜಿಕ ಕ್ರಾಂತಿ ಸಾಧನೆಗಳು ಇಂದಿಗೂ ಉಲ್ಲೇಖವಾಗಿವೆ ಎಂದರು.ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ ಉಜ್ಜಿನಿ ಸದ್ದರ್ಮ ಪೀಠ ಜಾತ್ಯತೀತವಾಗಿದೆ. ಉಜ್ಜಿನಿ ಶಿಖರಕ್ಕೆ ತೈಲ ಎರೆಯಲು ಕೂಡ್ಲಿಗಿ ತಾಲೂಕಿನ ಜರ್ಮಲಿ ಗ್ರಾಮದ ಪಾಳೇಗಾರರು ಎಣ್ಣೆ ತರುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ರೆಡ್ಡಿ, ರೇಣುಕಾಚಾರ್ಯ ಜಯಂತಿ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಎಂ.ಲೋಕೇಶ್ ಮಾತನಾಡಿದರು. ಡಯಟ್ ಹಿರಿಯ ಉಪನ್ಯಾಸಕ ಜಿ.ಎಂ. ದ್ವಾರುಕೇಶ್ ಉಪನ್ಯಾಸ ನೀಡಿದರು. ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಮಹಾಸಭಾ ರಾಜ್ಯ ಕಾರ್ಯದರ್ಶಿ ಶಶಿಕಲಾ ಮೂರ್ತಿ ಮಾತನಾಡಿದರು.ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕಚೇರಿಯಿಂದ ರೇಣುಕಾಚಾರ್ಯ ಶ್ರೀ ಭಾವಚಿತ್ರದ ಸಾರೋಟು ಮೆರವಣಿಗೆ ನಡೆಯಿತು. ಕಲಾತಂಡಗಳು ಉತ್ಸವಕ್ಕೆ ಮೆರುಗು ತಂದವು. ಮುಸ್ಟೂರು ಮಠದ ಹುಚ್ಚನಾಗಲಿಂಗ ಸ್ವಾಮೀಜಿ, ಪಪಂ ಅಧ್ಯಕ್ಷ ನವೀನ್ ಕುಮಾರ್, ಆರೈಕೆ ಆಸ್ಪತ್ರೆಯ ಡಾ.ರವಿಕುಮಾರ್, ಪತ್ರಕರ್ತ ಕೆ.ಎಂ.ಜಗದೀಶ್, ಪದಾಧಿಕಾರಿಗಳಾದ ಹಾಲಮೂರ್ತಿ, ಪಂಚಾಕ್ಷರಯ್ಯ, ನಂಜುಂಡಸ್ವಾಮಿ, ಬಸವರಾಜಯ್ಯ, ಕರಿಬಸಯ್ಯ, ರವಿ,ರುದ್ರಯ್ಯ, ಬೇಡ ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರಯ್ಯ, ಸಿಂಡಿಕೇಟ್ ಸದಸ್ಯ ಪ್ರಶಾಂತ್ ದುಗ್ಗವಟಿಮಠ್, ಸಿದ್ದಗಂಗಾ ಅಕಾಡೆಮಿಯ ಎ.ಎಂ. ಮರುಳಾರಾಧ್ಯ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಅಕ್ಕ ಭಾರತಿ, ನಿವೃತ್ತ ಪ್ರಾಂಶುಪಾಲ ಮಲ್ಲಿಕಾರ್ಜುನ್ ಇತರರು ಭಾಗವಹಿಸಿದ್ದರು.
- - - -12ಜೆಜಿಎಲ್1.ಜೆಪಿಜಿ:ಧರ್ಮಸಭೆಯಲ್ಲಿ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು ಮಾತನಾಡಿದರು.