ಸಾರಾಂಶ
ವೀರಶೈವ ಸಮಾಜವನ್ನು ಒಗ್ಗೂಡಿಸುವಂತೆ ಸ್ವಾಮೀಜಿ ಆಶೀರ್ವಚನಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಪುರ ವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವದಿಸಿ ಸನ್ಮಾನಿಸಿದರು.ಭಾನುವಾರ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅಧ್ಯಕ್ಷರಾಗಿ ಸಂತೇಶಿವರ ರಾಜಣ್ಣ( ಗಂಗೇಗೌಡ ) ಚುನಾವಣೆಯಲ್ಲಿ ಜಯ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಹೋಬಳಿ ಕೇಂದ್ರದಲ್ಲಿರುವ ಪುರವರ್ಗ ಹಿರೇಮಠಕ್ಕೆ ಭೇಟಿ ನೀಡಿ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಾಲೂಕಿನಲ್ಲಿ ಚುನಾವಣೆ ನಡೆಯದೇ ಅವಿರೋಧ ಆಯ್ಕೆ ಮಾಡಿಕೊಳ್ಳುವಂತೆ ತಿಳಿಸಿದ್ದೆ ಆದರೆ ಅನಿವಾರ್ಯ ಕಾರಣಗಳಿಂದ ಚುನಾವಣೆ ನಡೆದಿದೆ. ಮುಂಬರುವ ದಿನಗಳಲ್ಲಿ ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರು ತಾಲೂಕಿನಲ್ಲಿ ವೀರಶೈವ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡಬೇಕು ಹಾಗೂ ಸಂಘಟನೆ ಬಲಪಡಿಸುವಂತೆ ತಿಳಿಸಿದರು.ನೂತನ ತಾಲೂಕು ಅಧ್ಯಕ್ಷ ಸಂತೇಶಿವರ ರಾಜಣ್ಣ( ಗಂಗೇಗೌಡ ) ಮಾತನಾಡಿ, ಕೆಲವು ಕಾಣದ ಕೈಗಳ ಚಿತಾವಣೆಯಿಂದ ಚುನಾವಣೆ ನಡೆಯಿತು. ತಮ್ಮನ್ನು ರಾಜಕೀಯವಾಗಿ ಮುಗಿಸುವ ಹುನ್ನಾರದಿಂದಲೇ ನನ್ನನ್ನು ಸೋಲಿಸಲು ಪ್ರಯತ್ನಪಟ್ಟರು. ಆದರೆ ಮತದಾರರ ಆಶೀರ್ವಾದ ಹಾಗೂ ಶ್ರೀಗಳ ಆಶೀರ್ವಾದ ನನ್ನ ಮೇಲೆ ಇದ್ದುದ್ದರಿಂದ ಚುನಾವಣೆಯಲ್ಲಿ ಜಯಗಳಿಸಿದೆ. ತಮ್ಮ ಅಧಿಕಾರ ಅವಧಿಯಲ್ಲಿ ತಾಲೂಕು ಕೇಂದ್ರದಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ಹಾಗೂ ಸಮಾಜದ ಒಳಿತಿಗಾಗಿ ಶಾಶ್ವತವಾದ ಕೆಲಸವನ್ನು ಮಾಡಬೇಕೆಂಬ ಗುರಿ ಹೊಂದಿದ್ದು ಈಗ ತಾತ್ಕಾಲಿಕವಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಸಂಘದ ಕಚೇರಿಯನ್ನು ಒಂದು ಖಾಸಗಿ ಕಟ್ಟಡದಲ್ಲಿ ತೆರೆದು ಸಮಾಜದ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತದೆ ಎಂದರು.
ಹೋಬಳಿ ಕೇಂದ್ರಕ್ಕೆ ಆಗಮಿಸಿದ ನೂತನ ಅಧ್ಯಕ್ಷರಿಗೆ ಕಸ್ತೂರಿ ಕನ್ನಡ ಗೆಳೆಯರ ಬಳಗದ ಅಧ್ಯಕ್ಷ ಎನ್.ಸಿ. ನತೇಶ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಟಿ.ಸಿ. ತಗಡೂರು ಮಂಜುನಾಥ್ , ಎಚ್. ಟಿ.ಶಿವ ಸ್ವಾಮಿ, ನೇತ್ರಾವತಿ, ನೂತನ ನಿರ್ದೇಶಕರುಗಳಾದ ಎಚ್ ಆರ್ ಗಂಗಾಧರ್, ಒ ಎಚ್ ಮಹಾಲಿಂಗಪ್ಪ, ಛಾಯಾ ಕೃಷ್ಣಮೂರ್ತಿ, ಸಮಾಜದ ಪ್ರಮುಖರಾದ ಎನ್ ಎಚ್ ಆರ್. ಪ್ರದೀಪ್, ಶಿವಾನಂದ್, ಮೈಕ್ ಸೆಟ್ ಕೃಷ್ಣ, ಮಧು ಪಟೇಲ್, ರಾಜು, ಚೇತನ್, ಹುಲ್ಲೇನಹಳ್ಳಿ ಶಿವಪ್ಪ, ನರೇನಹಳ್ಳಿ ಪ್ರಕಾಶ್, ಮುಖಂಡರಾದ ಎನ್ ಸಿ ನಟೇಶ್, ಯೋಗೇಶ್ ( ಕಾಶಿ), ಕಿರಣ್, ಸೇರಿದಂತೆ ಸಮಾಜದ ಪ್ರಮುಖರು ಹಾಜರಿದ್ದರು.