ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ವೀರಶೈವ ಎನ್ನುವುದು ಜಾತಿಯಲ್ಲ, ಅದೊಂದು ಪರಿಪೂರ್ಣ ವಿಶ್ವಧರ್ಮ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಪಾಳ್ಯ ಹೋಬಳಿ ವಿರುಪಾಪುರ ಗ್ರಾಮದ ಶ್ರೀ ವೇ. ಚಂದ್ರಶೇಖರ ಇವರ ಸ್ವಗೃಹದಲ್ಲಿ ಶ್ರೀ ಮಠದಿಂದ ಆಯೋಜನೆ ಮಾಡಲಾಗಿದ್ದ "ಮನೆ ಮನೆಗೆ ರೇಣುಕ, ಮನ ಮನಕೆ ರೇಣುಕ " ಎಂಬ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೀರಶೈವ ಸಂಸ್ಕೃತ ಪದ ಲಿಂಗಾಯಿತ, ಲಿಂಗವಂತ ಎಂಬೆಲ್ಲ ಪರ್ಯಾಯ ನಾಮಗಳಿವೆ. 101 ಸ್ಥಳಗಳಾಗಿ ರೇಣುಕರು ಮಹಾತಪಸ್ವಿ ಅಗಸ್ತ್ಯಮುನಿಗೆ ವೀರಶೈವಧರ್ಮದ ತತ್ತ್ವ ಸಿದ್ಧಾಂತ ಮತ್ತು ಆಚರಣೆಗಳನ್ನು ಬೋಧಿಸಿ ಜೀವನ್ಮುಕ್ತಿಯನ್ನು ತಿಳಿಸಿಕೊಟ್ಟಿದ್ದಾರೆ, ಧರ್ಮ ಸ್ಥಾಪಕ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮಾನವೀಯ ಮೌಲ್ಯಉಳ್ಳ ತತ್ವಗಳು ವಿಶ್ವಕ್ಕೆ ಮಾದರಿಯಾಗಿವೆ. ಯಾವುದೇ ಜಾತಿ, ಮಥ ಮಂಥವನ್ನು ನೋಡದೆ ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ನೀಡಿರುವುದು ಈ ದೇಶ ಸಮಾಜಕ್ಕೆ ಅವರು ಮರೆಯಲಾರದ ಕೊಡುಗೆಯಾಗಿದೆ, ಈ ಹಿನ್ನೆಲೆಯಲ್ಲಿ ಎಲ್ಲಾ ಗುರು ವಿರಕ್ತರು ಒಂದಾಗಿ ಧರ್ಮವನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ, ಹಿಂದೂ ಧರ್ಮಕ್ಕೆ ವೀರಶೈವ ಧರ್ಮವೇ ಆಧಾರಸ್ತಂಭವಾಗಿದೆ. ಪ್ರಾಚೀನ ಪರಂಪರೆ ಮಾನವ ಕಲ್ಯಾಣ ಬಯಸುವ ವೀರಶೈವ ಧರ್ಮವನ್ನು ಮತ್ತೆ ಒಗ್ಗೂಡಿಸುವ ಕೆಲಸಕ್ಕೆ ಎಲ್ಲರು ಕೈಜೋಡಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದಿಂದ ಹೊರತಂದ ಹೊಸವರ್ಷದ ಕ್ಯಾಲೆಂಡರನ್ನ ಬಿಡುಗಡೆ ಮಾಡಲಾಯಿತು. ನೆರೆದಿದ್ದ ಎಲ್ಲ ಭಕ್ತಾರಿಗೂ ನನ್ನ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಪುರೋಹಿತರಾದ ದೇವರಾಜು ಶಾಸ್ತ್ರಿ, ಶಶಿ ಶಾಸ್ತ್ರಿ ವಿರುಪಾಪುರ, ಪ್ರಭುಲಿಂಗ ಶಾಸ್ತ್ರಿ ಚಿಕ್ಕಮಂಗಳೂರು, ಗ್ಯಾಸ್ ಮಂಜಣ್ಣ, ಮುಖಂಡರಾದ ಬಾವಸಹಳ್ಳಿ ರವಿ, ಅಂಗನವಾಡಿ ಶಿಕ್ಷಕಿ ಪೂರ್ಣಿಮಾ, ವಿರುಪಾಪುರ ಗ್ರಾಮದ ಶೋಭಾ ಚಂದ್ರಶೇಖರ್ ಸೇರಿದಂತೆ ಮುಂತಾದವರು ಹಾಜರಿದ್ದರು.