ಅನಾಥ ಮಕ್ಕಳ ಬೆಳಕಾಗಿರುವ ವೀರೇಶ್ವರ ಪುಣ್ಯಾಶ್ರಮ: ಕಲ್ಲಯ್ಯಜ್ಜನವರು

| Published : Mar 25 2024, 12:53 AM IST

ಅನಾಥ ಮಕ್ಕಳ ಬೆಳಕಾಗಿರುವ ವೀರೇಶ್ವರ ಪುಣ್ಯಾಶ್ರಮ: ಕಲ್ಲಯ್ಯಜ್ಜನವರು
Share this Article
  • FB
  • TW
  • Linkdin
  • Email

ಸಾರಾಂಶ

ಸತತ 74 ವರ್ಷಗಳ ಪರ್ಯಂತ ಕೊಡತಗೇರಿ ಗ್ರಾಮದವರು ತೇರಿನ ಹಗ್ಗ ಹಾಗೂ ದಿಂಡೂರ ಗ್ರಾಮದಿಂದ ಕಳಸ ತರುತ್ತಿರುವುದು ಸಂತೋಷದ ಸಂಗತಿ

ಗಜೇಂದ್ರಗಡ: ಅಂಧ-ಅನಾಥ ಮಕ್ಕಳ ಬಾಳಿಗೆ ಬೆಳಕಾಗಿರುವ ಗದುಗಿನ ವೀರೇಶ್ವರ ಪುಣ್ಯಾಶ್ರಮ ನಾಡಿಗೆ ಹಲವು ಸಂಗೀತ ಕಲಾವಿದರನ್ನು ನೀಡಿದೆ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.

ಸಮೀಪದ ಮುಶಿಗೇರಿ ಗ್ರಾಮದಲ್ಲಿ ನಡೆದ ಶ್ರೀಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ತುಲಾಭಾರ ಸ್ವೀಕರಿಸಿ ಆರ್ಶಿವಚನ ನೀಡಿದರು.

ತನು, ಮನ, ಧನ ಹಾಗೂ ಭಕ್ತಿಗೆ ಮತ್ತು ಕಲಾವಿದರನ್ನು ಪೋಷಿಸುವ ಮುಶಿಗೇರಿ ಗ್ರಾಮವು ತವರೂರಾಗಿದೆ. ಸತತ 74 ವರ್ಷಗಳ ಪರ್ಯಂತ ಕೊಡತಗೇರಿ ಗ್ರಾಮದವರು ತೇರಿನ ಹಗ್ಗ ಹಾಗೂ ದಿಂಡೂರ ಗ್ರಾಮದಿಂದ ಕಳಸ ತರುತ್ತಿರುವುದು ಸಂತೋಷದ ಸಂಗತಿಯಾಗಿದೆ. ತಾವು ಮಾಡುವ ಈ ತುಲಾಭಾರದಿಂದ ಸಾವಿರಾರು ಅಂಧ,ಅನಾಥ ಮಕ್ಕಳಿಗೆ ಅನುಕೂಲವಾಗುತ್ತದೆ.ಯಾರಿಗಾದರೂ ಅಂಧ-ಅನಾಥ ಮಕ್ಕಳು ಕಂಡರೆ ಅಂತವರನ್ನು ಗದಗದಲ್ಲಿರುವ ವೀರೇಶ್ವರ ಪುಣ್ಯಾಶ್ರಮಕ್ಕೆ ಸೇರಿಸುವಂತೆ ಸಲಹೆ ನೀಡಿದರು.

ಬಸವರಾಜ ಮೆಣಸಗಿ ಕುಟುಂಬದವರು ಪೂಜ್ಯರಿಗೆ ತುಲಾಭಾರ ಸೇವೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ರಾಜಶೇಖರ ಮಾಲಗಿತ್ತಿ ಪ್ರಾಸ್ತಾವಿಕ ಮಾತನಾಡಿದರು.

ಈ ವೇಳೆ ಮೌನೇಶ ಅಕ್ಕಸಾಲಿಗರ, ಚಂದಪ್ಪ ಗುಡದೂರ, ಶಂಕ್ರಪ್ಪ ನಾಯ್ಕರ,ಈರಣ್ಣ ಮ್ಯಾಗೇರಿ, ಡಾ.ಮಹಾಂತೇಶ ಹಾದಿ, ಮಲ್ಲಯ್ಯ ವಸ್ತ್ರದ, ಚುರಚಪ್ಪ ಚುರಚಪ್ಪನ್ನವರ, ಮಲ್ಲನಗೌಡ ಗೌಡ್ರ, ಶರಣಪ್ಪ ಕುಂಬಾರ, ಎಫ್‌.ಡಿ. ಉಪ್ಪಾರ, ಬಸವರಾಜ ಗುಡದೂರ ಇದ್ದರು.