ಲೋಕಸಭೆಗೆ ಕಣಕ್ಕಿಳಿಯಲು ವೀರೇಶ್ವರ ಶ್ರೀ ನಿರ್ಧಾರ

| Published : Apr 03 2024, 01:35 AM IST

ಸಾರಾಂಶ

ಬೆಳಗಾವಿ ಲೋಕಸಭಾ ಅಖಾಡಕ್ಕೆ ಮಠಾಧೀಶರೊಬ್ಬರು ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ಪಕ್ಷಗಳಿಗೆ ಮತ ವಿಭಜನೆ ಭೀತಿ ಎದುರಾಗಿದೆ. ಕಿತ್ತೂರ ತಾಲೂಕಿನ ಅಂಬಡಗಟ್ಟಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ತಾವು ಭಕ್ತರ ಅಪೇಕ್ಷೆಗೆ ಮೇರೆಗೆ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಾವು ಹೇಗೆ ಇದ್ದರೂ ಮಠದ ಪರಂಪರೆ ಇಟ್ಟುಕೊಂಡು ಜನಸೇವೆ ಮಾಡುತ್ತೇವೆ. ಅದೇ ಪರಂಪರೆಯಂತೆ ಚುನಾವಣೆ ಸ್ಪರ್ಧಿಸಿ ಜನಸೇವೆ ಮಾಡಬೇಕೆಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಭಕ್ತರ ಅಪೇಕ್ಷೆಯಂತೆ ಸ್ಪರ್ಧೆ ಮಾಡುತ್ತಿದ್ದೇನೆ. ನನಗೆ ಸಂಪೂರ್ಣವಾಗಿ ಬೆಂಬಲಿಸುವುದಾಗಿ ಭಕ್ತರು ಹೇಳಿದ್ದಾರೆ ಎಂದರು.

ನನ್ನ ಸ್ಪರ್ಧೆ ಯಾರ ಪರವೂ ಇಲ್ಲ, ವಿರುದ್ಧವೂ ಇಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ. ಈಗಾಗಲೇ ಬೆಳಗಾವಿ 8 ಮತಕ್ಷೇತ್ರದಲ್ಲಿ ಭಕ್ತರ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ. ನನ್ನ ಪರವಾಗಿ ನಿಲ್ಲುವುದಾಗಿ, ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

ಚುನಾವಣೆಯಲ್ಲಿ ಲಿಂಗಾಯತ ಸ್ವಾಮೀಜಿ ನಿಂತಾಗ ಬೇರೆಯವರಿಗೆ ಯಾಕೆ ಸಪೋರ್ಟ್ ಮಾಡಬೇಕು ಎಂದು ಜನ ಹೇಳಿದ್ದಾರೆ. ಜನರ ಅಭಿಪ್ರಾಯದ ಮೇರೆಗೆ ನಾನು ಸ್ವಇಚ್ಛೆಯಿಂದ ಸಮಾಜ ಸೇವೆ ಮಾಡಬೇಕೆಂದು ನಾಮಪತ್ರ ಸಲ್ಲಿಸುತ್ತೇನೆ. ಮುಂಬರುವ ಏ.12ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದರು.