ಕಂಬಳೀಪುರ ಸರ್ಕಾರಿ ಶಾಲೆಗೆ ವಾಹನ ವ್ಯವಸ್ಥೆ

| Published : Feb 21 2025, 12:45 AM IST

ಸಾರಾಂಶ

ಸೂಲಿಬೆಲೆ: ಸರ್ಕಾರಿ ಶಾಲೆಗಳ ಬಗ್ಗೆ ಪೋಷಕ ವರ್ಗದಲ್ಲಿರುವ ತಾತ್ಸಾರ ಮನೋಭಾವವನ್ನು ತೊಲಗಿಸಬೇಕು. ಸರ್ಕಾರಿ ಶಾಲೆಗಳ ಬಲವರ್ಧನೆಗೆ ದಾನಿಗಳು ಮುಂದಾಗಬೇಕು ಎಂದು ಕಂಬಳೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಧ್ಯಕ್ಷ ಶ್ರೀನಿವಾಸ್ ಹೇಳಿದರು.

ಸೂಲಿಬೆಲೆ: ಸರ್ಕಾರಿ ಶಾಲೆಗಳ ಬಗ್ಗೆ ಪೋಷಕ ವರ್ಗದಲ್ಲಿರುವ ತಾತ್ಸಾರ ಮನೋಭಾವವನ್ನು ತೊಲಗಿಸಬೇಕು. ಸರ್ಕಾರಿ ಶಾಲೆಗಳ ಬಲವರ್ಧನೆಗೆ ದಾನಿಗಳು ಮುಂದಾಗಬೇಕು ಎಂದು ಕಂಬಳೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಧ್ಯಕ್ಷ ಶ್ರೀನಿವಾಸ್ ಹೇಳಿದರು. ಹೋಬಳಿಯ ಕಂಬಳೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ದಾನಿ ರಾಮಕೃಷ್ಣಪ್ಪ ಉಚಿತ ವಾಹನ ಸಂಚಾರ ವ್ಯವಸ್ಥೆಗೆ ನೀಡಿರುವ ವಾಹನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರು ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ವಹಿಸಬೇಕು. ಪ್ರಥಮವಾಗಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇಚ್ಚಾಶಕ್ತಿ ಹೊಂದಬೇಕು ಎಂದು ಹೇಳಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ರಾಮಕೃಷ್ಣಪ್ಪ ಮಾತನಾಡಿ, ಬಡ ಮಕ್ಕಳೇ ಮಕ್ಕಳೇ ಬರುವ ಸರ್ಕಾರಿ ಶಾಲೆಗಳಿಗೆ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆ ತಲುಪಲು ಸಂಚಾರ ಸಮಸ್ಯೆ ಇರುವುದನ್ನು ಮನಗಂಡು ವಾಹನ ನೀಡಿದ್ದೇನೆ. ಸಂಚಾರ ವ್ಯವಸ್ಥೆ ಇಲ್ಲದೆ ಕೆಲ ಮಕ್ಕಳು ಶಾಲೆಗೆ ಸೇರುವುದು, ಕೆಲವರು ಶಾಲೆ ಬಿಡುವುದು ಇರುತ್ತದೆ. ಇದು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಲು ನೆರವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಮುಖ್ಯಶಿಕ್ಷಕ ಎಡ್ವರ್ಡ್ ಡಿಸೋಜಾ, ಶಾಲಾ ಸದಸ್ಯರಾದ ರಾಮಕೃಷ್ಣಪ್ಪ, ಚಂದನ್‌ಯಾದವ್,ಆಶೋಕ್, ಅಭಿಲಾಷ್, ಸಹ ಶಿಕ್ಷಕಿಯರು ಸಂಗೀತಾ, ಇಂದ್ರಾಣಿ ಇತರರಿದ್ದರು.