ಸಾರಾಂಶ
ಯೋಗಿವೇಮನ ಜಯಂತಿ ಕಾರ್ಯಕ್ರಮಕ್ಕೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಸಮಾಜದ ಮೇಲೆ ಧಾರ್ಮಿಕ ಶಕ್ತಿ ಮೂಲಕ ಬೆಳಕು ನೀಡಿದ ಅನೇಕ ದಾರ್ಶನಿಕರು ತಮ್ಮದೇಯಾದ ಕೊಡುಗೆಯನ್ನು ನೀಡುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಯೋಗಿ ವೇಮನರವರು ರಚನೆ ಮಾಡಿದ ಪ್ರತಿಯೊಂದು ವಚನದಲ್ಲೂ ಸಮಾಜದ ಪರಿವರ್ತನೆಗೆ ಅಗತ್ಯವಿರುವ ಎಲ್ಲಾ ಅಂಶಗಳು ಅಡಗಿವೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.ಅವರು ಶುಕ್ರವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಯೋಗಿವೇಮನ ಜಯಂತಿ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಸರ್ಕಾರ ಇಂತಹ ಮಹಾನುಭಾವರ ಸೇವೆಯನ್ನು ಸಾರ್ವಜನಿಕವಾಗಿ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ರೇಹಾನ್ ಪಾಷ, ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ರೆಡ್ಡಿ ಸಮುದಾಯದ ಮುಖಂಡ ಸಹಕಾರದಿಂದ ಈ ಕಾರ್ಯಕ್ರಮ ಆಯೋಜಿಸಿದೆ. ಸರ್ಕಾರ ಯೋಗಿ ವೇಮನನವರ ಚಿಂತನೆಗಳು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಅನುಕೂಲವಾಗುವಂತೆ ಜಯಂತಿ ನಡೆಸ ಲಾಗುತ್ತಿದೆ ಎಂದರು.ಸಮಾಜದ ಮುಖಂಡ ಆರ್.ತಿಮ್ಮಾರೆಡ್ಡಿ ಯೋಗಿ ವೇಮನರವರ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ರಘುರೆಡ್ಡಿ, ಹಿರಿಯ ಮುಖಂಡ ಬಿ.ಆರ್.ತಿಮ್ಮಾರೆಡ್ಡಿ, ಪಿ.ಐ.ಬಸವರೆಡ್ಡಿ, ವೆಂಕಟೇಶ್‌ರೆಡ್ಡಿ, ರಾಜು, ದಿನೇಶ್‌ರೆಡ್ಡಿ, ಲಕ್ಷ್ಮಣ್ ರೆಡ್ಡಿ, ಕೃಷ್ಣಾರೆಡ್ಡಿ, ಇಒ ಶಶಿಧರ, ಬಿಇಒ ಕೆ.ಎಸ್.ಸುರೇಶ್, ಪಶುವೈದ್ಯಾ ಧಿಕಾರಿ ರೇವಣ್ಣ, ಬಿಸಿಎಂ ಅಧಿಕಾರಿ ದಿವಾಕರ, ಕೃಷಿ ಅಧಿಕಾರಿ ಜೆ.ಅಶೋಕ್, ಪೌರಾಯುಕ್ತ ಸಿ.ಚಂದ್ರಪ್ಪ, ನಗರಸಭಾ ಸದಸ್ಯೆ ಸುಮಭರಮಣ್ಣ, ಬಿ.ವಿ.ಸಿರಿಯಣ್ಣ ಮುಂತಾದವರು ಉಪಸ್ಥಿತರಿದ್ದರು.