ಚಿಕ್ಕಮಗಳೂರು: ಕೇರಳ ಚುನಾವಣೆ ಯಶಸ್ಸಿನ ಹಿಂದೆ ಚುನಾವಣಾ ಉಸ್ತುವಾರಿ ಚಿಕ್ಕಮಗಳೂರಿನ ಯುವ ನಾಯಕ ಸಂದೀಪ್ ಅವರನ್ನು ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಚುನಾವಣಾ ಫಲಿತಾಂಶದ ಬಳಿಕ ತಬ್ಬಿ ಸಂಭ್ರಮಿಸಿದ್ದಾರೆ.
ಚಿಕ್ಕಮಗಳೂರಿನ ಕಾಂಗ್ರೆಸ್ ಯುವ ನಾಯಕ ಸಂದೀಪ್, ಕೇರಳ ಚುನಾವಣೆ ಉಸ್ತುವಾರಿಯಾಗಿ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಿ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಕೇರಳದ ರಾಜಕೀಯ ಪರಿಸ್ಥಿತಿ ಆಳವಾಗಿ ಅಧ್ಯಯನ ಮಾಡಿ, ಸ್ಥಳೀಯ ಸಮಸ್ಯೆಗಳು, ಜನರ ಮನೋಭಾವ ಮತ್ತು ಮತದಾರರ ನಿರೀಕ್ಷೆಗಳನ್ನು ಸಮಗ್ರವಾಗಿ ಅರ್ಥ ಮಾಡಿಕೊಂಡಿದ್ದರು.ಗ್ರಾಮ ಮಟ್ಟದಿಂದ ನಗರ ಮಟ್ಟದವರೆಗೆ ಕಾರ್ಯಕರ್ತರನ್ನು ಸಂಘಟಿಸಿ, ಬಲವಾದ ತಂಡ ನಿರ್ಮಿಸಿ ಸಾಮಾಜಿಕ ಜಾಲ ತಾಣಗಳ ಬಳಕೆ, ಮನೆ ಮನೆಗೆ ತಲುಪುವ ಕಾರ್ಯಕ್ರಮಗಳು, ಯುವಕರನ್ನು ಆಕರ್ಷಿಸುವ ಮೂಲಕ ಕೇರಳ ಚುನಾವಣೆ ಜಯಕ್ಕೆ ಬಲವಾದ ಬೆಂಬಲ ನೀಡಿದ್ದಾರೆ.
ಸೋಮವಾರ ಕೇರಳದ ಕಾಂಗ್ರೆಸ್‌ನ ಯಶಸ್ಸಿನ ಕಥೆಯಲ್ಲಿ ಸಂದೀಪ್ ಅವರ ಶಕ್ತಿ ಮತ್ತು ನಿಷ್ಠೆಯ ಸಂಕೇತವಾಗಿ ಉಳಿದಿದೆ. ಇವರ ಪರಿಶ್ರಮಕ್ಕೆ ಚಿಕ್ಕಮಗಳೂರಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಶ್ಲಾಘಿಸಿದ್ದಾರೆ.